ETV Bharat / bharat

AN-32 ವಿಮಾನ ಅಪಘಾತ: ಸೇನಾ ಪೈಲಟ್​​​​ ಕುಟುಂಬಕ್ಕೆ ಸಿಡಿಲಿನಾಘಾತ! - undefined

ಸೋಮವಾರ ಅಸ್ಸೋಂನ ಜೊಹ್ರಾತ್​ನಿಂದ ಟೇಕ್​ ಆಫ್​ ಆಗಿದ್ದ AN-32 ವಿಮಾನ ಇದ್ದಕ್ಕಿಂದ್ದಂತೆ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿದೆ. ಇದೇ ವಿಮಾನದ ಪೈಲಟ್​ ಆಗಿದ್ದ ದಿಘೊಟ್​ ಗ್ರಾಮದ ಆಶಿಶ್​ ತನ್ವರ್​ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಶಿಶ್​ ತನ್ವರ್​
author img

By

Published : Jun 5, 2019, 9:43 AM IST

ಹರ್ಯಾಣ: ಸೋಮವಾರ ನಾಪತ್ತೆಯಾದ AN-32 ಸೇನಾ ವಿಮಾನ ಅಪಘಾತದಲ್ಲಿ ಪೈಲಟ್​ ​ ಆಶಿಶ್​ ತನ್ವರ್​ ಮೃತಪಟ್ಟಿದ್ದಾಗಿ ಅವರ ಕುಟುಂಬಸ್ಥರು ಹೇಳಿದ್ದಾರೆ.

ಸೋಮವಾರ ಅಸ್ಸೋಂನ ಜೊಹ್ರಾತ್​ನಿಂದ ಟೇಕ್​ ಆಫ್​ ಆಗಿದ್ದ AN-32 ವಿಮಾನ ಇದ್ದಕ್ಕಿಂದ್ದಂತೆ ಸಂಪರ್ಕ ಕಡಿದುಕೊಂಡು ನಾಪತ್ತೆಯಾಗಿದೆ. ಇದೇ ವಿಮಾನದ ಪೈಲಟ್​ ಆಗಿದ್ದ ದಿಘೊಟ್​ ಗ್ರಾಮದ ಆಶಿಶ್​ ತನ್ವರ್​ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಶಿಶ್​​ ಸಂಬಂಧಿ ಉದಯ್​ಬೀರ್​ ಈ ಬಗ್ಗೆ ಮಾಹಿತಿ ನೀಡಿದ್ದು, ಅಪಘಾತಕ್ಕೊಳಗಾಗಿರುವ AN-32 ವಿಮಾನದಲ್ಲಿ ಆಶಿಶ್​ ಸಹ ಇದ್ದರು. ಅವರು ಇನ್ನಿಲ್ಲವೆಂಬುದು ನೋವಿನ ಸಂಗತಿ ಎಂದಿದ್ದಾರೆ. 29 ವರ್ಷದ ಆಶಿಶ್​ ರಜೆ ಮುಗಿಸಿ, ಇದೇ ಮೇ 18ರಂದು ಸೇನೆಗೆ ಮರಳಿದ್ದರು.

ಆಶಿಶ್​ ತನ್ವರ್​ ಮನೆಯಲ್ಲಿ ಶೋಕ

Sukhoi-30 ಹಾಗೂ C-130 ವಿಶೇಷ ವಿಮಾನಗಳ ಹುಟುಕಾಟ ನಡೆಸುತ್ತಿದ್ದ ತಂಡಕ್ಕೆ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎನ್ನಲಾಗ್ತಿದೆ. ವಿಮಾನದ ಜೊತೆಗೆ 8 ಸಿಬ್ಬಂದಿ ಹಾಗೂ 5 ಪ್ರಯಾಣಿಕರು ಸಹ ನಾಪತ್ತೆಯಾಗಿದ್ದರು. ಈ ಅಪಘಾತದಲ್ಲಿ ಆಶಿಶ್​ ಮೃತಪಟ್ಟಿದ್ದಾರೆ ಎಂದು ಅವರ ಪತ್ನಿ ಸಂಧ್ಯಾಗೆ ಮಂಗಳವಾರ ಸಂಜೆ 5:30ಕ್ಕೆ ಮಾಹಿತಿ ನೀಡಿಲಾಗಿದೆ. ಸಂಧ್ಯಾ ವಾಯುಪಡೆಯಲ್ಲಿ ರಡಾರ್ ಆಪರೇಟರ್​ ಆಗಿ ಕೆಲಸ ಮಾಡುತ್ತಿದ್ದಾರೆ.

ಕಂಪ್ಯೂಟರ್​ ಸೈನ್ಸ್​ ಜತೆ ಬಿಟೆಕ್​ ಪದವಿ ಪಡೆದಿದ್ದ ಆಶಿಶ್​ 2013ರಲ್ಲಿ ವಾಯುಪಡೆ ಸೇರಿದ್ದರು. 2015ರಲ್ಲಿ ಪೈಲಟ್​ ಆಗಿ ನಿಯುಕ್ತಿ ಹೊಂದಿದ್ದರು. ಅವರ ಕುಟುಂಬಕ್ಕೆ ಆಶಿಶ್​ ಒಬ್ಬನೇ ಮಗ ಎಂದು ತಿಳಿದುಬಂದಿದೆ.

ಅಶಿಶ್​ ಇನ್ನಿಲ್ಲವೆಂಬುದು ಕುಟುಂಬವನ್ನು ದುಃಖಕ್ಕೀಡು ಮಾಡಿದೆ. ಗ್ರಾಮದಲ್ಲಿ ಶೋಕ ಮನೆ ಮಾಡಿದ್ದು, ಜನರು ವೀರ ಯೋಧನ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

Intro:Body:

pilot 

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.