ಮುಂಬೈ: ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದಲ್ಲಿ ಉದ್ಭವವಾಗಿರುವ ನೆರೆ ಹಾವಳಿಗೆ ಜನರು ತತ್ತರಿಸಿ ಹೋಗಿದ್ದು, ಇದರ ಮಧ್ಯೆ ವಿವಿಧ ಗಂಜಿ ಕೇಂದ್ರಗಳಲ್ಲಿ ವಾಸ್ತವ್ಯ ಮಾಡಿರುವ ಜನರಿಗೆ ನೀಡುತ್ತಿರುವ ಆಹಾರದ ವಿಷಯವಾಗಿ ವಿವಾದ ಉದ್ಭವವಾಗಿದೆ.
ಮಹಾರಾಷ್ಟ್ರದಲ್ಲಿ ನೆರೆಹಾವಳಿಯಿಂದ ರಕ್ಷಣೆ ಮಾಡಿದವರಿಗೆ ಸಿಎಂ ದೇವೇಂದ್ರ ಫಡ್ನವೀಸ್ ಹಾಗೂ ಇಚಲಕರಂಜಿ ಶಾಸಕ ಸುರೇಶ್ ಹಲ್ವಂಕರ್ ಫೋಟೋ ಹಾಕಲಾಗಿದ್ದು, ಇದೇ ವಿಷಯ ಇದೀಗ ವಿರೋಧ ಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ. ಪ್ರವಾಹದಲ್ಲಿ ಸಿಲುಕಿದವರಿಗೆ ಸರಿಯಾದ ಊಟ, ಔಷಧ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಸಮಯವಿಲ್ಲ. ಆದರೆ ಸ್ಟೀಕರ್ಸ್ ಪ್ರಿಂಟ್ ಮಾಡಲು ಅವರ ಬಳಿ ಸಮಯವಕಾಶವಿದೆ. ಇದು ಅವರಿಗೆ ಪ್ರಚಾರದ ಸಮಯವೇ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಧನಜಯ ಮುಂಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸಂತ್ರಸ್ತೆಗೆ ನೀಡಲಾಗುತ್ತಿರುವ ಆಹಾರದ ಪಾಕೆಟ್ಗಳ ಮೇಲೆ ನನ್ನ ಫೋಟೋ ಇರುವ ಬಗ್ಗೆ ಮಾಹಿತಿ ಇಲ್ಲ. ಇಂತಹ ವಿಚಾರಗಳಲ್ಲಿ ವಿಪಕ್ಷ ರಾಜಕೀಯ ಮಾಡಬಾರದು ಎಂದು ತಿಳಿಸಿದ್ದಾರೆ. ನೆರೆಹಾವಳಿಗೆ ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೆ 28 ಜನರು ಸಾವನ್ನಪ್ಪಿದ್ದು, ಪ್ರಮುಖವಾಗಿ ಕೊಲ್ಲಾಪುರ, ಸಾಂಗ್ಲಿ, ಇಂಚಲಕರಂಜಿ ಸೇರಿ ವಿವಿಧ ಪ್ರದೇಶಗಳಲ್ಲಿ ನೆರೆ ಹಾವಳಿ ಉದ್ಭವವಾಗಿದೆ.
-
Maharashtra Chief Minister Devendra Fadnavis on reports that stickers of CM and other leaders were put on flood relief material: Nobody should do it, it is the work of government. There should be no need of pictures of any political party or person. #MaharashtraFlood pic.twitter.com/QCeIeB45k6
— ANI (@ANI) August 10, 2019 " class="align-text-top noRightClick twitterSection" data="
">Maharashtra Chief Minister Devendra Fadnavis on reports that stickers of CM and other leaders were put on flood relief material: Nobody should do it, it is the work of government. There should be no need of pictures of any political party or person. #MaharashtraFlood pic.twitter.com/QCeIeB45k6
— ANI (@ANI) August 10, 2019Maharashtra Chief Minister Devendra Fadnavis on reports that stickers of CM and other leaders were put on flood relief material: Nobody should do it, it is the work of government. There should be no need of pictures of any political party or person. #MaharashtraFlood pic.twitter.com/QCeIeB45k6
— ANI (@ANI) August 10, 2019
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ದೇವೇಂದ್ರ ಫಡ್ನವೀಸ್, ನೆರೆಹಾವಳಿ ಉಂಟಾಗಿರುವ ಸ್ಥಳಗಳಲ್ಲಿ 100 ವೈದ್ಯರ ತಂಡ ರವಾನೆ ಮಾಡಿದ್ದು, ಎಲ್ಲ ರೀತಿಯ ಸೂಕ್ತ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.