ನವದೆಹಲಿ: ಮದುವೆಯ ಭರವಸೆ ನೀಡಿ ಮಹಿಳೆಯ ಒಪ್ಪಿಗೆಯೊಂದಿಗೆ ದೀರ್ಘಕಾಲದ ದೈಹಿಕ ಸಂಬಂಧ ಹೊಂದುವುದನ್ನು ಅತ್ಯಾಚಾರ ಅಂತಾ ಕರೆಯಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸುವ ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಲಾದ ಅರ್ಜಿ ಕುರಿತು ತೀರ್ಪು ನೀಡುವಾಗ ನ್ಯಾಯಮೂರ್ತಿ ವಿಭೂ ಬಖ್ರು ಅವರ ನ್ಯಾಯಪೀಠ ಈ ವಿಷಯವನ್ನು ತಿಳಿಸಿದೆ.
ಅದು ಅತ್ಯಾಚಾರವಲ್ಲ...
ದೈಹಿಕ ಕಿರುಕುಳದ ಉದ್ದೇಶದಿಂದ ಮಾತ್ರ ಮದುವೆಯಾಗುವ ನೆಪವನ್ನು ಮಾಡಿದರೆ ಅದು ಅತ್ಯಾಚಾರವಾಗಬಹುದು. ಆದರೆ ಯಾರೊಂದಿಗಾದರೂ ದೀರ್ಘ ಕಾಲದವರೆಗೆ ನಿಕಟ ಸಂಬಂಧ ಹೊಂದಿರುವುದು ಮತ್ತು ಲೈಂಗಿಕ ಕ್ರಿಯೆ ನಡೆಸುವುದು ಅತ್ಯಾಚಾರದ ವರ್ಗಕ್ಕೆ ಬರುವುದಿಲ್ಲ ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಡ್ರಗ್ ಕೇಸ್: ಆದಿತ್ಯಾ ಆಳ್ವಾ ಜಾಮೀನು ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್
ಮದುವೆಯ ಭರವಸೆ ನೀಡಿ ಮಹಿಳೆಯ ಒಪ್ಪಿಗೆಯೊಂದಿಗೆ ವ್ಯಕ್ತಿವೋರ್ವ ದೀರ್ಘಕಾಲ ಲೈಂಗಿಕ ಸಂಪರ್ಕ ಬೆಳೆಸಿದ್ದ. ಆ ವ್ಯಕ್ತಿ ವಿರುದ್ಧ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಮಹಿಳೆಯ ಮನವಿಯನ್ನು ವಜಾಗೊಳಿಸಿ ಆರೋಪಿಯನ್ನು ಖುಲಾಸೆಗೊಳಿಸಿತು.
ಆರೋಪಿಯೊಂದಿಗೆ ಓಡಿ ಹೋಗಿದ್ದ ಮಹಿಳೆ...
2008 ರಲ್ಲಿ ಮಹಿಳೆ ಆರೋಪಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿರುವುದರ ಬಗ್ಗೆ ಹೈಕೋರ್ಟ್ ಗಮನಕ್ಕೆ ಬಂದಿದೆ. ದೈಹಿಕ ಸಂಬಂಧದ ನಂತರ ಮಹಿಳೆಗೆ ಮದುವೆ ಆಗುವುದಾಗಿ ಆರೋಪಿ ಭರವಸೆ ನೀಡಿದ್ದ. ಬಳಿಕ ಆಕೆ ಆರೋಪಿಯೊಂದಿಗೆ ಓಡಿಹೋಗಿದ್ದಳು. ಅಂತಹ ಸಂದರ್ಭದಲ್ಲಿ ಮಹಿಳೆಯ ಮೇಲೆ ಅತ್ಯಾಚಾರದ ಆರೋಪವನ್ನು ನಿಜವೆಂದು ಕರೆಯಲಾಗುವುದಿಲ್ಲ. ಹೀಗಾಗಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ತಳ್ಳಿಹಾಕಿ, ಮಹಿಳೆಯ ಮನವಿಯನ್ನು ವಜಾಗೊಳಿಸಿತು.
ಇದನ್ನೂ ಓದಿ: ಎಂಪಿ ಹೈಕೋರ್ಟ್ ನ್ಯಾ. ಸತೀಶ್ ಚಂದ್ರರನ್ನು ಕರ್ನಾಟಕ ಹೈಕೋರ್ಟ್ ಗೆ ವರ್ಗಾಯಿಸಲು ಕೊಲಿಜಿಯಂ ಶಿಫಾರಸು