ETV Bharat / bharat

ಪೊಲೀಸ್​ ಠಾಣೆಯಲ್ಲಿ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿಕೊಂಡ ಮೊಬೈಲ್​ ಕದ್ದ ಶಂಕಿತ ಆರೋಪಿ - ಹೈದರಾಬಾದ್

ಮೊಬೈಲ್​ ಕದ್ದ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿಯೋರ್ವ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

police station
police station
author img

By

Published : Jul 21, 2020, 5:27 PM IST

ಹೈದರಾಬಾದ್​: ಮೊಬೈಲ್​​ ಕದ್ದ ಆರೋಪದಲ್ಲಿ ಪೊಲೀಸ​ರಿಂದ ಬಂಧನವಾಗಿದ್ದ ಶಂಕಿತ ಆರೋಪಿ ಪೊಲೀಸ್​ ಠಾಣೆಯಲ್ಲೇ ಪೆಟ್ರೋಲ್​​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿರುವ ಘಟನೆ ಹೈದರಾಬಾದ್​ನ ಚಂದ್ರಾಯಂಗುತ್ತದಲ್ಲಿ ನಡೆದಿದೆ.

ಸೋಮವಾರ ರಾತ್ರಿ ಪೊಲೀಸ್​ ಠಾಣೆಯ ಮುಂಭಾಗದಲ್ಲಿ ಈ ಘಟನೆ ನಡೆದಿದ್ದು, ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆಯಿಂದ ಶೇ.10ರಷ್ಟು ಸುಟ್ಟು ಗಾಯಗೊಂಡಿರುವ ಶಬ್ಬೀರ್​ ಅಲಿಯನ್ನು ಓಸ್ಮಾನಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನರೇಶ್​ ಗೌಡ ತಮ್ಮ ಮೊಬೈಲ್​ ಕಳ್ಳತನವಾಗಿದ್ದಕ್ಕೆ ಸಂಬಂಧಿಸಿದಂತೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು. ಈ ವೇಳೆ ಓರ್ವ ಶಂಕಿತ ಆರೋಪಿಯ ಬಂಧನ ಮಾಡಲಾಗಿದ್ದು, ಈ ವೇಳೆ ಆತನಿಗೆ ಪೊಲೀಸರು ಹಿಂಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸ್​ ಠಾಣೆಯಿಂದ ಮನೆಗೆ ಹೋದ ಬಳಿಕ ಮತ್ತೆ ವಾಪಸ್​ ಬಂದಿರುವ ವ್ಯಕ್ತಿ ಪೆಟ್ರೋಲ್​ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಈ ವೇಳೆ ಪೊಲೀಸರು ಆತನನ್ನು ಒಸ್ಮಾನಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈಗಾಗಲೇ ಶಬ್ಬಿರ್​ ವಿರುದ್ಧ ವಿವಿಧ ಠಾಣೆಗಳಲ್ಲಿ ಸುಮಾರು 7ಕ್ಕೂ ಅಧಿಕ ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.