ನವದೆಹಲಿ: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI)ದ ನೂತನ ಮುಖ್ಯಸ್ಥರಾಗಿ ಪಿ.ಡಿ.ವಘೇಲಾರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.
2015ರಿಂದ ಟ್ರಾಯ್ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ರಾಮ್ ಸೇವಕ್ ಶರ್ಮಾರ ಅವಧಿ ಮುಗಿದಿದ್ದು, ಅವರ ಸ್ಥಾನಕ್ಕೆ ವಘೇಲಾ ಬರಲಿದ್ದಾರೆ. ವಘೇಲಾ ಅವರು ಗುಜರಾತ್ ಕೇಡರ್ನ 1986 ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ಕೇಂದ್ರ ಔಷಧೀಯ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೂರು ವರ್ಷಗಳ ಅವಧಿಗೆ ಅಥವಾ 65 ವರ್ಷ ತುಂಬುವವರೆಗೆ ಅಥವಾ ಮುಂದಿನ ಆದೇಶದವರೆಗೆ ಪಿ.ಡಿ.ವಘೇಲಾ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ ಮುಖ್ಯಸ್ಥರಾಗಿರಲಿದ್ದಾರೆ ಎಂದು ಕೇಂದ್ರ ಸಂಪುಟದ ಸಮಿತಿ ತಿಳಿಸಿರುವುದಾಗಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಧಿಸೂಚನೆ ತಿಳಿಸಿದೆ.