ETV Bharat / bharat

ಅಯೋಧ್ಯೆ ಭೂ ವಿವಾದ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಇಸ್ಲಾಮಿಕ್​ ಸಂಘಟನೆ! - ಸುಪ್ರೀಂಕೋರ್ಟ್​​

ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂಕೋರ್ಟ್‌ ನಿಂದ 'ಗ್ರೀನ್‌ ಸಿಗ್ನಲ್‌ ಸಿಕ್ಕಿದ್ದು, ಇದರ ಬೆನ್ನಲ್ಲೇ ಇದೀಗ ಇಸ್ಲಾಮಿಕ್ ಸಂಘಟನೆವೊಂದು ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ.

PFI files curative petition in SC
PFI files curative petition in SC
author img

By

Published : Mar 7, 2020, 9:18 AM IST

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ – ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಬಹು ನಿರೀಕ್ಷಿತ ತೀರ್ಪು ಈಗಾಗಲೇ ಸುಪ್ರೀಂಕೋರ್ಟ್​ನಿಂದ ಹೊರಬಿದ್ದಿದ್ದು, ವಿವಾದಿತ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಗ್ರಿನ್​ ಸಿಗ್ನಲ್​ ನೀಡಲಾಗಿದೆ. ಇದೀಗ ಇದೇ ವಿಷಯವನ್ನಿಟ್ಟುಕೊಂಡು ಇಸ್ಲಾಮಿಕ್​ ಸಂಘಟನೆ ಕ್ಯುರೇಟಿವ್​ ಅರ್ಜಿ ಸಲ್ಲಿಸಿದೆ.

ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ(PFI) ಇದೀಗ ಅಯೋಧ್ಯೆ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್​​ನಲ್ಲಿ ಕ್ಯುರೇಟಿವ್​ ಅರ್ಜಿ ಸಲ್ಲಿಕೆ ಮಾಡಿದ್ದು, ಸುಪ್ರೀಂಕೋರ್ಟ್​​ನಿಂದ ಹೊರಬಿದ್ದಿರುವ ತೀರ್ಪು ತಮ್ಮ ಹಕ್ಕಿಗೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅರ್ಜಿಯಲ್ಲಿ ತಿಳಿಸಿದೆ.

ಅಯೋಧ್ಯೆ ಭೂ ವಿವಾದ ಕೇಸ್​ನಲ್ಲಿ ಇದು ಮುಖ್ಯ ಕಕ್ಷಿದಾರನಾಗಿಲ್ಲ. ಆದರೆ, ಇದೀಗ ಈ ಕೇಸ್​ಗೆ ಸಂಬಂಧಪಟ್ಟಂತೆ ನೀಡಿರುವ ತೀರ್ಪಿಗೆ ತಡೆ ತಂದು ಮುಕ್ತ ಕೋರ್ಟ್​​ನಲ್ಲಿ ವಿಚಾರಣೆ ನಡೆಸಬೇಕು ಎಂದು ಒತ್ತಾಯಿಸಿದೆ. ಕಳೆದ ವರ್ಷ ನವೆಂಬರ್​​ 9ರಂದು ಸುಪ್ರೀಂಕೋರ್ಟ್​ನ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಮಹತ್ವದ ಆದೇಶ ಹೊರಹಾಕಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.