ETV Bharat / bharat

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ತೈಲ ಬೆಲೆ ಕುಸಿತ.. ದೇಶದಲ್ಲಿ ಮಾತ್ರ ಯಾಕ್ಹೀಗೆ? - ತೈಲ ಬೆಲೆ ಹೆಚ್ಚಳ

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲೂ ಪೆಟ್ರೋಲಿಯಂ ವಲಯದಿಂದ ಕೇಂದ್ರ ಸರ್ಕಾರ ಹೆಚ್ಚಿನ ಆದಾಯ ಗಳಿಸುತ್ತಿತ್ತು ಎಂದು ತಿಳಿದು ಬಂದಿದೆ. ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕತೆಗೆ ತೈಲೋತ್ಪನ್ನಗಳು ಜೀವಾಳವಾಗಿವೆ..

flames
. ದೇಶ
author img

By

Published : Jan 30, 2021, 5:15 PM IST

ಹೈದರಾಬಾದ್ : ದೇಶದಲ್ಲಿ ತೈಲ ಬೆಲೆ ಉತ್ತುಂಗಕ್ಕೇರಿದ್ದು, ಗ್ರಾಹಕರಿಗೆ ಶಾಕ್ ನೀಡಿದೆ. ಇಡೀ ಭಾರತದಲ್ಲಿಯೇ ಹೈದರಾಬಾದ್​ನಲ್ಲಿ ಡೀಸೆಲ್ ದರ ಹೆಚ್ಚಿದೆ. ಪ್ರತಿ ಲೀಟರ್​ ಡೀಸೆಲ್​​ಗೆ 83 ರೂಪಾಯಿಯಿದೆ. ಮುಂಬೈ, ಜೈಪುರದಲ್ಲಿ ಲೀಟರ್​ ಪೆಟ್ರೋಲ್​ಗೆ 90 ರೂ. ಇದ್ದರೆ, ರಾಜಸ್ಥಾನದಲ್ಲಿ 100 ರೂ.ಗಡಿ ದಾಟಿದೆ.

2018ರ ಅಕ್ಟೋಬರ್​ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರಲ್ ಕಚ್ಚಾ ತೈಲ ದರ 80 ಯುಎಸ್ ಡಾಲರ್ ಆಗಿತ್ತು. ಆಗ ಲೀಟರ್ ಪೆಟ್ರೋಲ್ ಬೆಲೆ 80 ರೂ, ಡೀಸೆಲ್ ಬೆಲೆ 75 ರೂ ಇತ್ತು. ಒಂದು ವರ್ಷದ ಹಿಂದೆ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 70 ಡಾಲರ್ ಆಗಿದ್ದು, ಮೂರು ತಿಂಗಳ ಅವಧಿಯಲ್ಲಿ ಶೇ. 50ರಷ್ಟು ಕುಸಿಯಿತು.

ಇಂದು ಕಚ್ಚಾ ತೈಲದ ಬೆಲೆ 55 ಡಾಲರ್ ಆಗಿದೆ, ಆದರೂ ದೇಶೀಯ ಪೆಟ್ರೋಲಿಯಂ ಇಂಧನಗಳ ಚಿಲ್ಲರೆ ಬೆಲೆ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ದೇಶೀಯ ಗ್ರಾಹಕರಿಗೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳಿಗನುಗುಣವಾಗಿ ಬೆಲೆ ಸರಿ ಹೊಂದಿಸುವ ಹೆಸರಲ್ಲಿ ಗ್ರಾಹಕರು ಬೆಲೆ ಏರಿಕೆ ಎದುರಿಸಬೇಕಿದೆ.

ಮತ್ತೊಂದೆಡೆ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ತೈಲ ಬೆಲೆ ಏರಿಕೆಗೆ ವಿಚಿತ್ರ ಸಮರ್ಥನೆ ನೀಡುತ್ತಿದ್ದಾರೆ. ತೈಲ ಉತ್ಪಾದನೆ ಮತ್ತು ರಫ್ತು ಮಾಡುವ ದೇಶಗಳು (ಒಪೆಕ್) ತರ್ಕಬದ್ಧ ಬೆಲೆಗೆ ಪೂರೈಸುವ ಭರವಸೆ ಈಡೇರಿಸುವಲ್ಲಿ ವಿಫಲವಾದ ಪರಿಣಾಮವೇ ಬೆಲೆ ಏರಿಕೆಗೆ ಕಾರಣವಾಗಿದೆ.

ಕಳೆದ ಏಪ್ರಿಲ್​ನಲ್ಲಿ ತೈಲ ಬೇಡಿಕೆ ತೀವ್ರವಾಗಿ ಕುಸಿದಿದ್ದು, ಒಪೆಕ್ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಿದೆ. ಆದರೆ, ಭಾರತದಲ್ಲಿ ತೈಲ ದರ ಬೇಡಿಕೆ ಕುಸಿತದ ಮಧ್ಯೆಯೂ ಭಾರತ ಇಂಧನ ಆಮದನ್ನು ಮುಂದುವರೆಸಿ ಒಪೆಕ್​ನ ರಕ್ಷಿಸಿತು ಎಂದಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಲೆಗಳು ಏರುತ್ತವೆಯೋ ಅಥವಾ ಇಳಿಯುತ್ತಿದೆಯೋ ಎಂಬುದರ ಹೊರತಾಗಿಯೂ, ಇಲ್ಲಿನ ಸರ್ಕಾರಗಳು ಪೆಟ್ರೋಲಿಯಂ ಬೆಲೆಗಳನ್ನು ಹೆಚ್ಚಿಸುತ್ತಿವೆ. ಜತೆಗೆ ಬೆಲೆಗಳ ಮೇಲೆ ಹೆಚ್ಚುವರಿ ಸೆಸ್‌ನ ಸಹ ವಿಧಿಸುತ್ತಿವೆ. ಈಗಾಗಲೇ ಕೋವಿಡ್​ನಿಂದ ತತ್ತರಿಸಿರುವ ಜನರಿಗೆ ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆಯುತ್ತಿದೆ.

ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿಯೇ ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ತೆರಿಗೆ ವಿಧಿಸುವುದರಿಂದ ಈ ಪರಿಸ್ಥಿತಿ ಎದುರಾಗಿದೆ. ಈ ಹಿಂದೆ ಸರ್ಕಾರಗಳು ವಿಧಿಸಿದ ತೆರಿಗೆಗಳು ಪೆಟ್ರೋಲ್ ಬೆಲೆಯ ಶೇ. 56 ಮತ್ತು ಡೀಸೆಲ್ ದರದಲ್ಲಿ ಶೇ. 36ರಷ್ಟಿದೆ ಎಂದು ರಂಗರಾಜನ್ ಸಮಿತಿ ತಿಳಿಸಿತ್ತು.

ಇತ್ತೀಚಿನ ಮಾಹಿತಿಯ ಪ್ರಕಾರ, ಪೆಟ್ರೋಲ್ ಬೆಲೆಯ ಮೇಲೆ ಶೇ. 67 ಮತ್ತು ಡೀಸೆಲ್ ಬೆಲೆಯ ಶೇ. 61ರಷ್ಟಿದೆ. ಇಂಧನ ವಲಯದಿಂದ ಕೇಂದ್ರ ಸರ್ಕಾರದ ಆದಾಯವು 2015 ಮತ್ತು 2020ರ ನಡುವೆ ದ್ವಿಗುಣಗೊಂಡಿದೆ ಎಂಬ ಅಂಕಿ-ಅಂಶಗಳು ಬಹಿರಂಗಪಡಿಸುತ್ತಿವೆ.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲೂ ಪೆಟ್ರೋಲಿಯಂ ವಲಯದಿಂದ ಕೇಂದ್ರ ಸರ್ಕಾರ ಹೆಚ್ಚಿನ ಆದಾಯ ಗಳಿಸುತ್ತಿತ್ತು ಎಂದು ತಿಳಿದು ಬಂದಿದೆ. ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕತೆಗೆ ತೈಲೋತ್ಪನ್ನಗಳು ಜೀವಾಳವಾಗಿವೆ.

ಜನರ ಆರ್ಥಿಕ ಚಟುವಟಿಕೆಗಳ ಪುನಃ ಸ್ಥಾಪನೆಗೆ ಪೆಟ್ರೋಲಿಯಂ ಅತ್ಯಗತ್ಯ. ಅದಕ್ಕಾಗಿಯೇ ಎಲ್‌ಪಿಜಿ ಮತ್ತು ಸೀಮೆಎಣ್ಣೆ ಸೇರಿ ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು. ಆದ್ದರಿಂದ ಅವುಗಳ ಬೆಲೆಗಳು ನಿಯಂತ್ರಣದಲ್ಲಿರಬೇಕು ಎಂದು ಒತ್ತಾಯಿಸಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆ ವಿನಾಯಿತಿ ನೀಡಿದ್ರೆ, ನಾವು ಲೀಟರ್‌ಗೆ 30 ರೂ.ಗೆ ಪೆಟ್ರೋಲ್ ಪಡೆಯಬಹುದು ಎಂದು ಅಂದಾಜಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.