ನವದೆಹಲಿ : ನಾಲ್ಕು ಮೆಟ್ರೋ ನಗರಗಳಲ್ಲಿ ಸತತ ನಾಲ್ಕನೇ ದಿನವೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾಗಿದೆ.
ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 14 ಪೈಸೆ ಹೆಚ್ಚಳವಾಗಿದ್ದು, ಪ್ರತೀ ಲೀಟರ್‌ಗೆ 83.01 ರೂ. ಬೆಲೆಯಿದೆ. ಈ ಹಿಂದೆ ಲೀಟರ್‌ಗೆ 82.87 ರೂ. ಇತ್ತು. ಅದೇ ರೀತಿ ದೆಹಲಿ ಮತ್ತು ಮುಂಬೈಯಲ್ಲಿ ಕೂಡ ಇಂಧನದ ಬೆಲೆಯಲ್ಲಿ ಕ್ರಮವಾಗಿ 14 ಪೈಸೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಪ್ರತೀ ಲೀಟರ್‌ಗೆ 81.49 ರೂ. ಮತ್ತು ಮುಂಬೈನಲ್ಲಿ 88.16 ರೂ. ಬೆಲೆಯಿದೆ. ಚೆನ್ನೈನಲ್ಲಿ ಪ್ರತಿ ಲೀಟರ್‌ಗೆ 84.52 ರೂ.ಗಳಾಗಿದ್ದು, ಶನಿವಾರ 84.40 ರೂ. ಇತ್ತು. 12 ಪೈಸೆ ಹೆಚ್ಚಾಗಿದೆ.
ನಾಲ್ಕು ಮಹಾನಗರಗಳಲ್ಲಿ ಡೀಸೆಲ್ ಬೆಲೆ ಒಂದೇ ರೀತಿಯಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಧನದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಶೇ 13.25 ರಷ್ಟು ಕಡಿತಗೊಳಿಸುವುದಾಗಿ ಜುಲೈ 30 ರಂದು ಸರ್ಕಾರ ಘೋಷಿಸಿತ್ತು. ಆ ಬಳಿಕ ಡೀಸೆಲ್ ಬೆಲೆ ಸ್ಥಿರವಾಗಿದೆ. ಪ್ರತೀ ಲೀಟರ್ ಬೆಲೆಯಲ್ಲಿ 8.36 ರೂ. ಕಡಿತಗೊಂಡಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 73.56 ರೂ. ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ಕ್ರಮವಾಗಿ 80.11, 78.86 ಮತ್ತು 77.06 ರೂ. ಇದೆ.