ETV Bharat / bharat

ವಿಶೇಷ ಅಂಕಣ: ದೋಷಯುಕ್ತ ‘ಪರಿಸರ ಪರಿಣಾಮ ಮೌಲ್ಯಮಾಪನ’ ಕರಡು - ಕೈಗಾರಿಕೆ ಮೇಲಿನ ಕೇಂದ್ರದ ಕಾನೂನುಗಳು

ಇತ್ತೀಚಿಗೆ ಕೇಂದ್ರ ಸರಕಾರ ಪ್ರಕಟಿಸಿದ ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ಕರಡು ಅಧಿಸೂಚನೆಯಲ್ಲಿನ ಹಲವು ಪ್ರಸ್ತಾಪಗಳು ಇದಕ್ಕೆ ವ್ಯತಿರಿಕ್ತವಾಗಿದೆ, ಜೊತೆಗೆ ದೋಷಪೂರಿತವಾಗಿವೆ.

Permissions for destruction!
ದೋಷಯುಕ್ತ ‘ಪರಿಸರ ಪರಿಣಾಮ ಮೌಲ್ಯಮಾಪನ’ ಕರಡು
author img

By

Published : Oct 4, 2020, 6:27 PM IST

ಅಭಿವೃದ್ಧಿಯ ಹೆಸರಿನಲ್ಲಿ ನಾವು, ಪರಿಸರ ವ್ಯವಸ್ಥೆಯ ಅತಿ ಮುಖ್ಯ ಭಾಗವಾಗಿರುವ, ನೈಸರ್ಗಿಕ ಸಂಪನ್ಮೂಲಗಳನ್ನು ನಾಶಪಡಿಸುತ್ತಿದ್ದೇವೆ. ಇದು ಎಲ್ಲೆಡೆ ಪರಿಸರ-ನೈಸರ್ಗಿಕ ಬಿಕ್ಕಟ್ಟುಗಳಿಗೆ ಕಾರಣವಾಗುತ್ತಿದೆ. ಇದರ ಫಲಶ್ರುತಿ ಎಂಬಂತೆ, ವಿಶ್ವದ ಎಲ್ಲೆಡೆಯಿಂದ ಇಂದು ನೈಸರ್ಗಿಕ ವಿಪತ್ತುಗಳು ವರದಿಯಾಗುತ್ತಿವೆ. ಇವು ಇಡೀ ಮಾನವ ಕುಲವನ್ನೇ ಅಪಾಯದತ್ತ ಎಳೆದೊಯ್ಯುತ್ತಿವೆ. ಇಂತಹ ಪರಿಸರ ಬಿಕ್ಕಟ್ಟಿನ ಸಮಯದಲ್ಲಿ, ಕೈಗಾರಿಕಾ ಸ್ಥಾಪನೆ ಮತ್ತು ಮೂಲಸೌಕರ್ಯ ಯೋಜನೆಗಳ ಅಭಿವೃದ್ಧಿಗೆ ಪರಿಸರ ಅನುಮತಿ ನೀಡುವ ನೀತಿ ಹಾಗು ಪ್ರಕ್ರಿಯೆಯನ್ನು ಇನ್ನಷ್ಟು ಕಠಿಣಗೊಳಿಸುವ ತುರ್ತು ಅವಶ್ಯಕತೆಯಿದೆ. ಆದರೆ, ಇತ್ತೀಚಿಗೆ ಕೇಂದ್ರ ಸರಕಾರ ಪ್ರಕಟಿಸಿದ ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) ಕರಡು ಅಧಿಸೂಚನೆಯಲ್ಲಿನ ಹಲವು ಪ್ರಸ್ತಾಪಗಳು ಇದಕ್ಕೆ ವ್ಯತಿರಿಕ್ತವಾಗಿದೆ, ಜೊತೆಗೆ ದೋಷಪೂರಿತವಾಗಿವೆ. ಪರಿಸರ ಅನುಮತಿ ಪಡೆಯುವ ಮುನ್ನವೇ, ಕೈಗಾರಿಕೆಗಳು ಮತ್ತು ಯೋಜನೆಗಳ ಸ್ಥಾಪನೆಗೆ ಅವಕಾಶ ನೀಡುವ ಪ್ರಸ್ತಾಪ, ವ್ಯಾಪಕ ಟೀಕೆಗೊಳಗಾಗಿದೆ. ಆದರೆ ಕೇಂದ್ರ ಸರಕಾರ ಇದನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿದೆ. ಕೈಗಾರಿಕೆಗಳು ಮತ್ತು ಮೂಲ ಸೌಕರ್ಯ ಯೋಜನೆಗಳಿಗೆ ಪರಿಸರ ಅನುಮತಿ ನೀಡುವಿಕೆಯನ್ನು ತ್ವರಿತಗೊಳಿಸುವ ಗುರಿಯನ್ನು ಈ ಮೂಲಕ ಹೊಂದಲಾಗಿದೆ. ಇದರಿಂದ, ಯೋಜನೆಗಳಿಗೆ ಅನುಮತಿ ನೀಡುವ ಪ್ರಕ್ರಿಯೆ ಇನ್ನಷ್ಟು ಪಾರದರ್ಶಕವಾಗಲಿದೆ ಎಂದು ಅದು ಈ ಕರಡು ಪ್ರಸ್ತಾಪವನ್ನು ಸಮರ್ಥಿಸಿಕೊಳ್ಳುತ್ತಿದೆ.

ಭೀಕರ ದುಷ್ಪರಿಣಾಮಗಳು!

ಒಂದೊಮ್ಮೆ, ಈ ಕರಡು ಕಾನೂನಾದರೆ, ನಾವರಿಯದ ಭೀಕರ ದುಷ್ಪರಿಣಾಮಗಳು ನಮ್ಮನ್ನು ಖಂಡಿತ ಬಾಧಿಸಲಿವೆ. ಪರಿಸರ ಸಚಿವಾಲಯದ ಪೂರ್ವಾನುಮತಿ ಇಲ್ಲದೆ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶ ನೀಡುವಂತೆ ಪ್ರಸ್ತಾವನೆಗಳನ್ನು ರೂಪಿಸಲಾಗುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಕಠಿಣ ಕಾನೂನುಗಳ ನಡುವೆಯೂ, ನಮ್ಮಲ್ಲಿ ಇಂದು ಅನೇಕ ಯೋಜನೆಗಳು ಮತ್ತು ಕೈಗಾರಿಕೆಗಳು ಸರಿಯಾದ ಹಾಗು ಸೂಕ್ತ ಪರಿಸರ ಅನುಮತಿ ಇಲ್ಲದೆ ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಮೇ 7, 2020 ರಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಎಲ್ ಜಿ ಪಾಲಿಮರ್ಸ್ ಘಟಕದಲ್ಲಿ ಸಂಭವಿಸಿದ ವಿಷಾನಿಲ ಸೋರಿಕೆ ಅಪಘಾತ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಆಕಸ್ಮಿಕವಾಗಿ ಸ್ಟಿಯೆರಿನ್ ಅನಿಲ ಸೋರಿಕೆಯಾಗಿ, ಹಲವು ಮಂದಿ ಸಾವನ್ನಪ್ಪಿದ್ದರು ಜೊತೆಗೆ ನೂರಾರು ಮಂದಿ ಅನಾರೋಗ್ಯಕ್ಕೀಡಾಗಿದ್ದರು. ಇದೊಂದು ಭಾರಿ ಅಪಾಯಕಾರಿ ಘಟಕ. ಈ ಘಟನೆ ಬಗ್ಗೆ ನಡೆದ ವಿಚಾರಣೆಯಲ್ಲಿ ಬಹಿರಂಗವಾದ ಸಂಗತಿಗಳು ನಮ್ಮಲ್ಲಿ ಕಾನೂನುಗಳು ಹೇಗೆ ಸೂಕ್ತವಾಗಿ ಜಾರಿಗೊಳ್ಳುತ್ತಿಲ್ಲ ಎಂಬುದಕ್ಕೆ ಸೂಕ್ತ ನಿದರ್ಶನ. ಈ ಘಟಕ ಕಳೆದ 20 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದರು, ಅದಕ್ಕೆ ಪರಿಸರ ಅನುಮತಿ ಇರಲಿಲ್ಲ ಎಂಬುದು ಈಗ ವಿಚಾರಣೆ ಸಂದರ್ಭದಲ್ಲಿ ಬಯಲಾಗಿದೆ. ಈ ಮಾಹಿತಿ ಈಗ ಎಲ್ಲರಿಗು ಆಘಾತ ಉಂಟು ಮಾಡಿದೆ.

ಇನ್ನು ಪರಿಸ್ಥಿತಿ, ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲೂ ಇದೆ ತೆರನಾಗಿದೆ. ಮೇ 27 ರಂದು, ಪೂರ್ವ ಅಸ್ಸಾಂನ ಟೀನ್ ಸೂಕಿಯ ಜಿಲ್ಲೆಯ ಭಾರತೀಯ ತೈಲ ನಿಗಮದ ಗಣಿಗಾರಿಕೆ ಪ್ರದೇಶದಲ್ಲಿ ನೈಸರ್ಗಿಕ ಅನಿಲ ಸ್ಫೋಟದಿಂದಾಗಿ ಬೆಂಕಿ ಕಾಣಿಸಿಕೊಂಡಿತು. ಶ್ರೀಮಂತ ಜೈವಿಕ ಪ್ರಭೇದಗಳಿಗೆ ಹೆಸರುವಾಸಿಯಾದ ಈ ಪ್ರದೇಶದಲ್ಲಿ ವರದಿಯಾದ ಈ ಸ್ಫೋಟ ಹಾಗು ಬೆಂಕಿ ಅನಾಹುತ, ಸ್ಥಳೀಯ ಜೀವ ಪ್ರಭೇದಗಳಿಗೆ ಕುತ್ತು ಉಂಟು ಮಾಡಿದೆ. ಇನ್ನೊಂದು ಆಘಾತಕಾರಿ ಸಂಗತಿಯೆಂದರೆ, ಭಾರತೀಯ ತೈಲ ನಿಗಮ ಸರಕಾರಿ ವಲಯದ ಸಂಸ್ಥೆಯಾಗಿದ್ದರು, ಅದು ಪರಿಸರ ಅನುಮತಿ ಇಲ್ಲದೆ 15 ವರ್ಷಗಳಿಂದ ನೈಸರ್ಗಿಕ ಅನಿಲ ಹೊರತೆಗೆಯುತ್ತಿದೆ ಎಂದು ತಿಳಿದುಬಂದಿದೆ! ಅಂದರೆ, ಈ ಎರಡು ಘಟನೆಗಳಲ್ಲೂ ಪರಿಸರ ಕಾನೂನುಗಳು ಪಾಲನೆಯಾಗದಿರುವುದು ಸ್ಪಷ್ಟವಾಗಿ ಬೆಳಕಿಗೆ ಬಂದಿದೆ.

ಪರಿಸರ ಪ್ರಭಾವದ ಮೌಲ್ಯಮಾಪನವು ಪರಿಸರ ಸಂರಕ್ಷಣಾ ಕಾಯ್ದೆ (1986) ಅಡಿಯಲ್ಲಿ ನಡೆಸಲಾಗುವ ಒಂದು ಪ್ರಕ್ರಿಯೆಯಾಗಿದೆ. ಇದು, ಯಾವುದೇ ಕೈಗಾರಿಕೆ-ಮೂಲ ಸೌಕರ್ಯ ಯೋಜನೆ ಜಾರಿಗೆ ಮುನ್ನವೇ ಪೂರ್ಣಗೊಳ್ಳಬೇಕು. ಕೈಗಾರಿಕಾ ಕಂಪನಿಗಳು ತಮ್ಮ ಘಟಕ ಸ್ಥಾಪನೆಗೆ ಮೂಲಸೌಕರ್ಯ ರೂಪಿಸಿಕೊಳ್ಳುವ ಮುನ್ನ, ಇದಕ್ಕಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಕೂಡಲೇ ಘಟಕ ಸ್ಥಾಪನೆಗೆ ಅನುಮತಿ ನೀಡುವುದನ್ನು ತಡೆಯುವ ಉದ್ದೇಶವನ್ನು ಇದು ಹೊಂದಿದೆ. ಆದರೆ ಕಾಲಕಾಲಕ್ಕೆ ಈ ನಿಯಮಕ್ಕೆ ತಿದ್ದುಪಡಿ ಮಾಡಲಾಗಿದೆ. ಆ ಮೂಲಕ, ಪರಿಸರ ಮೌಲ್ಯಮಾಪನ ಪ್ರಕ್ರಿಯೆಯಿಂದ ಬಹುತೇಕ ಪ್ರತಿಯೊಂದು ಯೋಜನೆ ಗಳನ್ನೂ ಹೊರಗಿಡಲಾಗಿದೆ. ಇದು ಪರಿಸರದ ಮೇಲೆ ಇಂದು ದುಷ್ಪರಿಣಾಮ ಬಿರುತ್ತಿರುವುದನ್ನು ನಾವೆಲ್ಲ ನೋಡಬಹುದು.

ಈ ನಡುವೆ, ಪರಿಸರ ಪ್ರಭಾವದ ಮೌಲ್ಯಮಾಪನದಲ್ಲಿ ಸರ್ಕಾರದ ವಿವೇಚನಾ ಅಧಿಕಾರಗಳು, ಪರಿಸರವನ್ನು ರಕ್ಷಿಸುವಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಸೀಮಿತಗೊಳಿಸುವಂತೆ ಮಾಡುವ ಉದ್ದೇಶವನ್ನು ಕರಡು ಪ್ರಸ್ತಾಪ ಹೊಂದಿದೆ. ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಗೆ ಸಂಬಂಧಿಸಿದ ಯೋಜನೆಗಳನ್ನು ಸಾಮಾನ್ಯವಾಗಿ 'ಕಾರ್ಯತಂತ್ರ' ವರ್ಗದಲ್ಲಿ ಪರಿಗಣಿಸಲಾಗುತ್ತದೆ. ಆದರೆ ಈಗ ಉಳಿದ ಸಾಮಾನ್ಯ ಯೋಜನೆಗಳನ್ನು ಈ ಪ್ರಕ್ರಿಯೆಯಿಂದ ಹೊರಗಿಡುವ ಪ್ರಸ್ತಾಪ, ಪರಿಸರ ಸಂರಕ್ಷಣೆ ಹಿನ್ನಲೆಯಲ್ಲಿ ಭವಿಷ್ಯದಲ್ಲಿ ಭಾರಿ ದುಷ್ಪರಿಣಾಮ ಬೀರುವುದು ಖಚಿತ.

ವಿವೇಚನೆಯೇ ಸೂಕ್ತ ದಾರಿ.

ಈಗ ಪ್ರಕಟಿಸಿರುವ ಹೊಸ ಕರಡು ನೀತಿ ಪ್ರಕಾರ, ಯಾವುದೇ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕ ವಲಯದಲ್ಲಿ ಬಹಿರಂಗಪಡಿಸುವ ಅಗತ್ಯವಿಲ್ಲ. ಇದರ ಪರಿಣಾಮವೆಂದರೆ, ಯಾವುದೇ ಯೋಜನೆಗೆ ಸ್ಟಾಟೆಜಿಕ್ (‘ಕಾರ್ಯತಂತ್ರದ’) ವರ್ಗದ ವೇಷದಲ್ಲಿ, ಪರಿಸರ ಅನುಮತಿ ಪಡೆಯಲು ಅವಕಾಶ ನೀಡಬಹುದು. ಇದನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲ.
ಇದರ ಜೊತೆಗೆ, ಈ ಅಧಿಸೂಚನೆಯು ಸಾರ್ವಜನಿಕ ಅಭಿಪ್ರಾಯವನ್ನು ಪಡೆಯುವ ಪ್ರಕ್ರಿಯೆಯಿಂದ, ಹಲವಾರು ಯೋಜನೆಗಳನ್ನು ಹೊರಗಿಟ್ಟಿದೆ. ಈ ಸುದೀರ್ಘ ಪಟ್ಟಿಯಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆಯದೇ, ದೇಶದ ಗಡಿ ಪ್ರದೇಶಗಳಲ್ಲಿ ರಸ್ತೆಗಳು ಮತ್ತು ಪೈಪ್‌ಲೈನ್‌ಗಳ ನಿರ್ಮಾಣ ಯೋಜನೆಗಳಿಗೆ ಪರಿಸರ ಅನುಮತಿ ನೀಡಲಾಗುತ್ತದೆ. ಇದರ ನೇರ ದುಷ್ಪರಿಣಾಮ ವೆಂದರೆ ನೂರಾರು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳ ಅಸ್ತಿತ್ವಕ್ಕೆ ದೊಡ್ಡ ಅಪಾಯವಿದೆ. ಒಳನಾಡಿನ ಜಲ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆಗಳನ್ನು ಸಹ ಸಾರ್ವಜನಿಕ ಅಭಿಪ್ರಾಯ ಪಡೆಯುವ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ಒಂದು ಲಕ್ಷ ಐವತ್ತು ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡಗಳ ನಿರ್ಮಾಣ ಸಹ ಇದೇ ರೀತಿಯ ವಿನಾಯಿತಿ ಪಡೆಯಲಿದೆ. ಕೇಂದ್ರವು ಇದನ್ನು 2016 ರಲ್ಲಿ ಘೋಷಿಸಿದಾಗ, ಅದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಗ್ರೀನ್ ಟ್ರಿಬ್ಯೂನಲ್) ತಿರಸ್ಕರಿಸಿತು. ಪರಿಸರ ಪ್ರಭಾವದ ಮೌಲ್ಯಮಾಪನ ಮತ್ತು ಅದರ ಪೀಡಿತ ಪ್ರದೇಶಗಳಲ್ಲಿನ ಸಾರ್ವಜನಿಕ ಅಭಿಪ್ರಾಯವು ಯೋಜನೆಗಳಿಗೆ ಪರವಾನಗಿ ನೀಡುವಲ್ಲಿ ಅತ್ಯಂತ ನಿರ್ಣಾಯಕ ಅಂಶಗಳಾಗಿವೆ. ಒಂದೊಮ್ಮೆ, ಸಾರ್ವಜನಿಕರು, ದೊಡ್ಡ ಮಟ್ಟದಲ್ಲಿ ವಿರೋಧ ವ್ಯಕ್ತ ಪಡಿಸಿದರೆ ಯೋಜನೆಗೆ ಅನುಮತಿ ಸಿಗುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಸ್ಥಳೀಯ ಜನರು ಭಾಗಿಯಾಗಬೇಕು. ಇದು ಆಯಾ ಪ್ರದೇಶಗಳಲ್ಲಿ ಸ್ಥಾಪಿಸಲಾಗುತ್ತಿರುವ ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಜನರಿಗೆ ತಿಳಿಯಲು ಅನುವು ಮಾಡಿಕೊಡುತ್ತದೆ. ಆದರೆ ಈ ಕರಡು ಇವೆಲ್ಲವುಗಳಿಗೆ ತಿಲಾಂಜಲಿ ನೀಡುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.