ನವದೆಹಲಿ: ಎಬಿವಿಪಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಕೋಲ್ಕತ್ತಾದ ಜಾಧವ್ಪುರ ವಿಶ್ವವಿದ್ಯಾನಿಲಯಕ್ಕೆ ಇತ್ತೀಚೆಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಅಲ್ಲಿನ ಎಡಪಂಥೀಯ ಸಂಘಟನೆಗಳಾದ ಎಎಫ್ಎಸ್ಯು ಮತ್ತು ಎಸ್ಎಸ್ಐ ಸಂಘಟನೆಯ ವಿದ್ಯಾರ್ಥಿಗಳು ಕಪ್ಪು ಬಾವುಟ ಪ್ರದರ್ಶಿಸಿ 'ಸುಪ್ರಿಯೋ ಗೋ ಬ್ಯಾಕ್' ಎಂದು ಘೋಷಣೆ ಕೂಗಿ ದಾಳಿ ಮಾಡಿದ್ದರು ಎನ್ನಲಾದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿವೆ. ತಮ್ಮ ಮೇಲಾದ ದಾಳಿಯ ಕುರಿತು ಸಚಿವರು ಟ್ವೀಟ್ ಅಸಮಾಧಾನ ಹೊರಹಾಕಿದ್ದಾರೆ.
ಬಾಬುಲ್ ಸುಪ್ರಿಯೋ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಈ ಹೇಡಿಗಳು ಜಾಧವ್‌ಪುರ್ ವಿಶ್ವವಿದ್ಯಾನಿಲಯದ ಚಿತ್ರಣವನ್ನು ಕೆಡಿಸಲು ಮತ್ತು ಕಳಂಕ ತರಲು ಆಸ್ಪದ ನೀಡುವುದಿಲ್ಲ. ನೀವು ನಮ್ಮಿಂದ ಶೀಘ್ರದಲ್ಲೇ ಪತ್ತೆಯಾಗಲಿದ್ದೀರಾ. ಆದರೆ ಚಿಂತಿಸಬೇಡಿ, ನೀವು ನನ್ನನ್ನು ಉಪಚರಿಸಿದ ರೀತಿಯಲ್ಲಿ ನಿಮ್ಮನ್ನು ನಾವು ಪರಿಗಣಿಸುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
-
We shall rehabilitate you ‘mentally’ so that you & your Hooligan Friends (all footages available with the media) behave like you are supposed to behave as students .. till then. (2/2) @BJP4Bengal @BJYM @ABVPVoice #JadavpurUniversity pic.twitter.com/tDXEZfRVt3
— Babul Supriyo (@SuPriyoBabul) September 20, 2019 " class="align-text-top noRightClick twitterSection" data="
">We shall rehabilitate you ‘mentally’ so that you & your Hooligan Friends (all footages available with the media) behave like you are supposed to behave as students .. till then. (2/2) @BJP4Bengal @BJYM @ABVPVoice #JadavpurUniversity pic.twitter.com/tDXEZfRVt3
— Babul Supriyo (@SuPriyoBabul) September 20, 2019We shall rehabilitate you ‘mentally’ so that you & your Hooligan Friends (all footages available with the media) behave like you are supposed to behave as students .. till then. (2/2) @BJP4Bengal @BJYM @ABVPVoice #JadavpurUniversity pic.twitter.com/tDXEZfRVt3
— Babul Supriyo (@SuPriyoBabul) September 20, 2019
ನಾವು ನಿಮ್ಮನ್ನು ‘ಮಾನಸಿಕವಾಗಿ’ ಪುನರ್ವಸತಿಗೊಳಿಸುತ್ತೇವೆ, ಈ ಮೂಲಕ ನೀವು ಮತ್ತು ನಿಮ್ಮ ಗೂಂಡಾ ಸ್ನೇಹಿತರು ವಿದ್ಯಾರ್ಥಿಗಳಂತೆ ವರ್ತಿಸಬೇಕಿದೆ ಎಂದಿದ್ದಾರೆ.