ಗಾಜಿಯಾಬಾದ್: ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಪ್ರಧಾನಿ ಮೋದಿ ಅವರು ವಿಧಿಸಿರುವ ಮೂರು ವಾರಗಳ ಲಾಕ್ಡೌನ್ ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ 'ರಾಮಾಯಣ'ವನ್ನು ಮರು ಪ್ರಸಾರ ಮಾಡಿರುವ ಸರ್ಕಾರದ ನಿರ್ಧಾರವನ್ನು ದೇಶದ ಜನತೆ ಸ್ವಾಗತಿಸಿದ್ದಾರೆ.
ಪ್ರೇಕ್ಷಕರ ಒತ್ತಾಯದ ಮೇರೆಗೆ ರಾಮಾಯಣ ಧಾರವಾಹಿಯನ್ನು ಮರು ಪ್ರಸಾರ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಬಳಿಕ ಮಹಾಭಾರತ ಧಾರವಾಹಿಯನ್ನೂ ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಮರು ಪ್ರಸಾರ ಮಾಡಲು ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿತು.
ಮಾರ್ಚ್ 28ರಿಂದಲೇ ಡಿಡಿ ನ್ಯಾಷನಲ್‌ನಲ್ಲಿ 'ರಾಮಾಯಣ' ಮತ್ತು 'ಮಹಾಭಾರತ' ಮರುಪ್ರಸಾರ ಮಾಡಲಿದ್ದೇವೆ. 9-10 ಗಂಟೆಯವರೆಗೆ (ಬೆಳಿಗ್ಗೆ), ಇನ್ನೊಂದು 9-10 ಗಂಟೆಯವರೆಗೆ (ರಾತ್ರಿ) ಪ್ರಸಾರವಾಗಲಿದೆ. ಶನಿವಾರ ಮಧ್ಯಾಹ್ನ 12 ಗಂಟೆಗೆ ಹಾಗೂ ಸಂಜೆ 7 ಗಂಟೆಗೆ ಮಹಾಭಾರತ ಧಾರವಾಹಿ ಪ್ರಸಾರವಾಗಲಿವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಶುಕ್ರವಾರ ಟ್ವೀಟ್ ಮಾಡಿದ್ದಾರೆ.
1980ರ ದಶಕದಲ್ಲಿ ರಾಮಾಯಣ ಪ್ರಸಾರವಾಗಿತ್ತು. ಈಗ ಮತ್ತೆ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದ್ದ ಪರಿಣಾಮ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಈ ನಿರ್ಧಾರಕ್ಕೆ ಶ್ಲಾಘಿಸಿದ್ದಾರೆ.
ರಾಮಾಯಣ ಧಾರವಾಹಿ ಜನರನ್ನು ಮನೆಯಲ್ಲಿ ಉಳಿಯಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ ಎಂದು ಮಹಿಳೆಯೊಬ್ಬರು ಹೇಳಿದ್ದಾರೆ. ಆಕೆಯ ಕುಟುಂಬವು ಈ ಧಾರಾವಾಹಿಯನ್ನು ಒಂದು ಕೋಣೆಯಲ್ಲಿ ಒಟ್ಟಿಗೆ ನೋಡುವುದನ್ನು ಫೋಟೋದಲ್ಲಿ ಕಾಣಬಹುದು.