ETV Bharat / bharat

ಭೌತಿಕ ಸಂತೋಷಗಳ ಹೆಚ್ಚಳದಿಂದಾಗಿ ಎಲ್ಲರೂ ಅತೃಪ್ತ: ಮೋಹನ್ ಭಾಗವತ್ ಕಳವಳ - ಆರ್​ಎಸ್​ಎಸ್

"ಪ್ರಸ್ತುತ ವಿಶ್ವ ಸನ್ನಿವೇಶದಲ್ಲಿ ಭಾರತದ ಪಾತ್ರ" ಎಂಬ ವಿಷಯದ ಕುರಿತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುಜರಾತ್‌ನಲ್ಲಿ ಮಾತನಾಡಿದರು.

Mohan Bhagwat
ಮೋಹನ್ ಭಾಗವತ್
author img

By

Published : Feb 16, 2020, 12:58 PM IST

ಅಹಮದಾಬಾದ್ (ಗುಜರಾತ್): ಸಮಾಜದಲ್ಲಿ ಎಲ್ಲರೂ ಅತೃಪ್ತರಾಗಿದ್ದಾರೆ. ಅಷ್ಟೇ ಅಲ್ಲದೆ, ಸೌಕರ್ಯಗಳು ಮತ್ತು ಸಂತೋಷಗಳನ್ನು ತಡೆದುಕೊಳ್ಳದಂತೆ ನಿರಂತರವಾಗಿ ಆಂದೋಲನ ನಡೆಸುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ನಲ್ಲಿ ಆರ್​ಎಸ್​ಎಸ್​ನ ಸಹಯೋಗದಲ್ಲಿ 'ಮಾಧವ್ ಸ್ಮೃತಿ ನ್ಯಾಯಾಸ್' ಸಂಘಟನೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಮತ್ತು ಬುದ್ಧಿಜೀವಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಮೋಹನ್ ಭಾಗವತ್

ಸೌಕರ್ಯಗಳು ಮತ್ತು ಭೌತಿಕ ಸಂತೋಷಗಳ ಹೆಚ್ಚಳದಿಂದಾಗಿ ಎಲ್ಲರೂ ಅತೃಪ್ತರಾಗಿದ್ದಾರೆ. ಹೀಗಾಗಿ ಆಂದೋಲನಗಳನ್ನು ನಡೆಸುತ್ತಿದ್ದಾರೆ. ವಿರೋಧ ಪಕ್ಷ, ಸಾಮಾನ್ಯ ಜನರು, ವಿದ್ಯಾರ್ಥಿಗಳು, ಶಿಕ್ಷಕರು ಎಲ್ಲರೂ ಅತೃಪ್ತರಾಗಿದ್ದಾರೆ. ಪ್ರಸ್ತುತ ಜಗತ್ತಿನಲ್ಲಿ ಧರ್ಮಾಂಧತೆ, ಹಿಂಸೆ ಮತ್ತು ಭಯೋತ್ಪಾದನೆ ಹೆಚ್ಚುತ್ತಿದೆ ಎಂದು ಹೇಳಿದರು.

ವಿವಾದಗಳನ್ನು ಸೃಷ್ಟಿಸಲು ಜನರು "ಸುಳ್ಳು ಮಾಹಿತಿ" ಹರಡುವ ಮೂಲಕ ಸಾಮಾಜಿಕ ಮಾಧ್ಯಮವನ್ನು ಸಹ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯುಎಸ್, ಚೀನಾ ಮತ್ತು ರಷ್ಯಾವು ಸೂಪರ್ ಪವರ್​ ದೇಶಗಳಾಗಿವೆ. ಆದರೆ ಸೂಪರ್ ಪವರ್ ರಾಷ್ಟ್ರಗಳು ಇತರರಿಗೆ ಏನು ಮಾಡಿದೆ?. ಅವರು ತಮ್ಮ ಸ್ವಾರ್ಥಿ ಕಾರ್ಯಸೂಚಿಗಾಗಿ ಇತರ ದೇಶಗಳ ಮೇಲೆ ಹಿಡಿತ ಸಾಧಿಸಿದ್ದಾರೆ ಎಂದು ಭಗವತ್ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.