ETV Bharat / bharat

ಅಚಾತುರ್ಯದ ಟ್ವೀಟ್‌ಗೆ ಕ್ಷಮೆ ಕೇಳಿದ ಪಾಕಿಸ್ತಾನ ಕ್ರಿಕೆಟ್​ ಬೋರ್ಡ್​ - PCB latest news

ಪಾಕಿಸ್ತಾನ್​ ಕ್ರಿಕೆಟ್​ ಬೋರ್ಡ್​, ತಾನು ಹಿಂದೆ ಮುಂದೆ ನೋಡದೆ ಮಾಡಿದ ಟ್ವೀಟ್​ಗೆ ಬಳಿಕ ನೆಟ್ಟಿಗರ ಕ್ಷಮೆ ಕೇಳಿದೆ.

ಪಾಕಿಸ್ತಾನ ಕ್ರಿಕೆಟ್​ ಬೋರ್ಡ್
author img

By

Published : Oct 19, 2019, 3:27 PM IST

​ನವದೆಹಲಿ: ಪಾಕಿಸ್ತಾನ ಕ್ರಿಕೆಟ್​ ಬೋರ್ಡ್ (ಪಿಸಿಬಿ​) ತಾನು ಮಾಡಿಕೊಂಡ ಅಸೂಕ್ಷ್ಮ ಟ್ವೀಟ್​ಗೆ ಕ್ಷಮೆ ಕೇಳಿದೆ.

ಟಿ20 ಕ್ರಿಕೆಟ್​ ನಾಯಕತ್ವದಿಂದ ಸರ್ಫರಾಜ್​ ಅಹ್ಮದ್​ರನ್ನು ಪಿಸಿಬಿ ವಜಾಗೊಳಿಸಿತ್ತು. ತರಬೇತಿ ಸಮಯದಲ್ಲಿ ಪಾಕಿಸ್ತಾನ ಕ್ರಿಕೆಟ್​ ಆಟಗಾರರು ಡ್ಯಾನ್ಸ್​ ಮಾಡಿದ್ದು, ಆ ಬಳಿಕ ಸರ್ಫರಾಜ್​ರನ್ನು ನಾಯತ್ವದಿಂದ ವಜಾಗೊಳಿಸಲಾಗಿದೆ ಎಂದು ಪಿಸಿಬಿ ಟ್ವೀಟ್​ ಮಾಡಿತ್ತು.

ಆದರೆ ಆ ​ಬಳಿಕ ಎಚ್ಚೆತ್ತುಕೊಂಡಿರುವ ಪಿಸಿಬಿ, ಮರುಕ್ಷಣವೇ ಆ ಟ್ವೀಟ್​ ಡಿಲೀಟ್​ ಮಾಡಿದೆ. ಅಲ್ಲದೆ ಈ ಬಗ್ಗೆ ಕ್ಷಮೆ ಕೇಳಿದ್ದು, ಟ್ವೀಟ್​ ಮಾಡಿರುವ ಸಮಯ ಮತ್ತು ಸಂದರ್ಭದಲ್ಲಿ ಸ್ವಲ್ಪ ಗೊಂದಲವಾಗಿದೆ. ನಿಜಾರ್ಥದಲ್ಲಿ ಇದು ಪೂರ್ವ ನಿರ್ಧರಿತ ಟ್ವೀಟ್​ ಆಗಿದ್ದು, ಮುಂದಿನ ವರ್ಷದ ಟಿ20 ವಿಶ್ವಕಪ್​ ಪ್ರಚಾರವಾಗಿ ಯೋಚನೆ ಮಾಡಲಾಗಿತ್ತು. ಆದರೆ ತಂಡದ ನಾಯಕತ್ವದ ಘೋಷಣೆ ಕಾರಣದಿಂದಾಗಿ ಸ್ವಲ್ಪ ಹೆಚ್ಚು-ಕಡಿಮೆ ಆಗಿದೆ ಎಂದು ಪಿಸಿಬಿ ಹೇಳಿದೆ.

Intro:Body:

PCB

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.