ETV Bharat / bharat

ಮೆಚ್ಚಿನ ನಟನ ಕಾಲಿಗೆ ಬಿದ್ದ ಅಭಿಮಾನಿ.. ವೇದಿಕೆ ಮೇಲೆ ಎಡವಿ ಬಿದ್ದ ಪವನ್ ಕಲ್ಯಾಣ್​​​​​​​​​ - ಜನಸೇನಾ ಸಂಸ್ಥಾಪಕ

ಜನಸೇನ ಪಕ್ಷದ ಪ್ರಚಾರ ಸಭೆ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ವೇಳೆ ಅಭಿಮಾನಿಯೊಬ್ಬರು ಕಾಲು ಹಿಡಿದ ಪರಿಣಾಮ ಪವನ್ ಕಲ್ಯಾಣ್ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಪಕ್ಕದಲ್ಲೇ ಇದ್ದ ಸೆಕ್ಯೂರಿಟಿಗಳು ಅವರನ್ನು ಕೂಡಲೇ ಮೇಲೆತ್ತಿದ್ದಾರೆ.

ಪವನ್ ಕಲ್ಯಾಣ್​​​​​​​​​
author img

By

Published : Apr 7, 2019, 7:06 PM IST

Updated : Apr 7, 2019, 7:16 PM IST

ತಮ್ಮ ಮೆಚ್ಚಿನ ಸೆಲಬ್ರಿಟಿಯನ್ನು ನೋಡಿದ ಕೂಡಲೇ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತೋಷ ಉಂಟಾಗುವುದು ಸಹಜ. ಆದರೆ, ಕೆಲವೊಮ್ಮೆ ಆ ಸಂತೋಷ ಸೆಲೆಬ್ರಿಟಿಗಳಿಗೆ ತೊಂದರೆಯುಂಟು ಮಾಡುತ್ತದೆ ಎಂಬುದು ಕೂಡಾ ಅಷ್ಟೇ ಸತ್ಯ.

ಪವನ್ ಕಲ್ಯಾಣ್​​​​​​​​​ ಜನಸೇನ ಪಕ್ಷದ ಪ್ರಚಾರ ಸಭೆ

ನಟನೆ ಬಿಟ್ಟು ಇದೀಗ ರಾಜಕೀಯದಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿರುವ ಜನಸೇನಾ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಪವನ್ ಕಲ್ಯಾಣ್​​​ಗೆ ಕೂಡಾ ಇದೇ ಅನುಭವವಾಗಿದೆ. ವಿಶಾಖಪಟ್ಟಣದ ವಿಜಯನಗರಂ ಬಳಿ ಅಯೋಧ್ಯೆ ಗ್ರೌಂಡ್​​ನಲ್ಲಿ ನಿನ್ನೆ ಚುನಾವಣಾ ಪ್ರಚಾರದ ವೇಳೆ ಪವನ್ ಕಲ್ಯಾಣ್ ಭಾಷಣಕ್ಕೆ ದೊಡ್ಡ ವೇದಿಕೆ ನಿರ್ಮಿಸಲಾಗಿತ್ತು. ಅಲ್ಲಿಗೆ ಬಂದ ಪವನ್​​​​​​ಗೆ ಅವರ ಅಭಿಮಾನಿಗಳು ಹೂವಿನ ಮಳೆಯ ಸ್ವಾಗತ ಕೋರಿದ್ದಾರೆ.

ಪವನ್ ಕಲ್ಯಾಣ್ ಸ್ಟೇಜ್ ಮೇಲೆ ಬಂದು ಮೈಕ್ ಹಿಡಿದು ಮಾತನಾಡಲು ಆರಂಭಿಸುತ್ತಿದ್ದಂತೆ ಹಿಂದಿನಿಂದ ಬಂದ ಅಭಿಮಾನಿಯೊಬ್ಬ ಪವನ್ ಕಾಲಿಗೆ ಬಿದ್ದಿದ್ದಾನೆ. ಕಾಲನ್ನು ಹಿಡಿದ ರಭಸಕ್ಕೆ ಪವನ್ ಕಲ್ಯಾಣ್ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಪಕ್ಕದಲ್ಲೇ ಇದ್ದ ಸೆಕ್ಯೂರಿಟಿಗಳು ಕೂಡಲೇ ಪವನ್​​​​​ರನ್ನು ಮೇಲೆ ಎತ್ತಿ ಆ ಅಭಿಮಾನಿಯನ್ನು ಕೂಡಾ ಅಲ್ಲಿಂದ ದೂರ ಕಳಿಸಿದ್ದಾರೆ. ಏಪ್ರಿಲ್ 11 ರಂದು ಚುನಾವಣೆ ನಡೆಯುತ್ತಿದ್ದು, ಮೇ 23 ರಂದು ಫಲಿತಾಂಶ ಹೊರಬೀಳಲಿದೆ.

Intro:Body:

Pawan Kalyan Fell Down on the stage at the time of Election campaign

Conclusion:
Last Updated : Apr 7, 2019, 7:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.