ಶ್ರೀನಗರ: ಜಮ್ಮು-ಕಾಶ್ಮೀರ ಕೆಲ ಪ್ರದೇಶಗಳಲ್ಲಿ ಮಾತ್ರ ಇಂಟರ್ನೆಟ್ ಸೇವೆ ಆರಂಭಿಸಲಾಗಿದೆ. ಇನ್ನು ಉಳಿದ ಕಡೆ ಅಂತರ್ಜಾಲ ಸೇವೆ ಲಭ್ಯ ಇರುವುದಿಲ್ಲ.
ಮೊಬೈಲ್ ಇಂಟರ್ನೆಟ್ ಮತ್ತು ಹೋಟೆಲ್ ಸಂಸ್ಥೆಗಳು, ಪ್ರವಾಸೋದ್ಯಮ, ಬ್ಯಾಂಕ್ಗಳು ಹಾಗೂ ಸಾರಿಗೆ ಸಂಸ್ಥೆಗಳಿಗೆ ಅನ್ವಯಿಸುವಂತ ಇಂಟರ್ನೆಟ್ ಸೇವೆಗಳನ್ನು ಮಂಗಳವಾರದಿಂದ ಜಾರಿಗೊಳಿಸಲು ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
2ಜಿ ಮೊಬೈಲ್ ಸಂಪರ್ಕವನ್ನು ಜಮ್ಮು, ಸಾಂಬಾ, ಕಥುವಾ, ಉಧಂಪುರ್ ಮತ್ತು ರಿಯಾಸಿ ಜಿಲ್ಲೆಗಳಲ್ಲಿ ಪ್ರಾರಂಭಿಸಲು ಅನುಮತಿಸಲಾಗುವುದು ಎಂದು ತಿಳಿಸಿದೆ.