ಫಿರೋಜ್ಪುರ: ಮಾದಕ ವ್ಯಸನಿ ಆಗಿದ್ದ ತಮ್ಮ ಮಗನನ್ನು ಸ್ವತಃ ಪೋಷಕರೇ ಸರಪಳಿಯಿಂದ ಕಟ್ಟಿ ಹಾಕಿರುವ ಘಟನೆ ಫಿರೋಜ್ಪುರದಲ್ಲಿ ನಡೆದಿದೆ.
ಜಸ್ಬೀರ್ ಸಿಂಗ್ (35) ಮಾದಕ ವ್ಯಸನಿಯಾಗಿದ್ದು, ಇದರಿಂದ ಹೊರಬರಲಾರದೇ ಆತ್ಮಹತ್ಯೆಗೂ ಪ್ರಯತ್ನಿಸಿದ್ದನಂತೆ. ಆದ್ರೆ ಆತ್ಮಹತ್ಯೆ ಮಾಡಿಕೊಳ್ಳುವಲ್ಲಿ ವಿಫಲನಾಗಿದ್ದಾನೆ. ಇನ್ನು ಜಸ್ಬೀರ್ ಕಳೆದ ಒಂದು ವರ್ಷದಿಂದಲೂ ಡ್ರಗ್ಸ್ ಸೇವಿಸುತ್ತಿದ್ದನಂತೆ. ಜಸ್ಬೀರ್ಗೆ ಮದುವೆಯಾಗಿದ್ದು, ಸದ್ಯ ಇಬ್ಬರು ಮಕ್ಕಳಿದ್ದಾರೆ. ಜಸ್ಬೀರ್ ಮಾದಕ ವ್ಯಸನಿಯಾಗಿದ್ದು, ಅದನ್ನು ಕೊಳ್ಳಲು ಮನೆಯ ವಸ್ತುಗಳನ್ನೇ ಮಾರುತ್ತಿದ್ದ ಎಂದು ತಂದೆ ಕಾಲಾ ಸಿಂಗ್ ಹೇಳಿದ್ದಾರೆ.
ಇನ್ನು ಜಸ್ಬೀರ್ ಕುಟುಂಬ ಹೇಳುವಂತೆ ಆ ಊರಿನಲ್ಲಿ 40ಕ್ಕೂ ಅಧಿಕ ಮಂದಿ ಡ್ರಗ್ಸ್ಗೆ ಅಡಿಕ್ಟ್ ಆಗಿದ್ದಾರೆ. ಈ ಬಗ್ಗೆ ಎಚ್ಚರಿಗೆ ನೀಡಿರುವ ಡಿಸಿಪಿ ಸತ್ನಂ ಸಿಂಗ್, ಡ್ರಗ್ಸ್ ವ್ಯಸನಿಗಳ ಮತ್ತು ಮಾರಾಟ ಮಾಡುವವರ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.