ETV Bharat / bharat

ವಿಶೇಷ ಅಂಕಣ: ಕ್ಷಿಪಣಿಯಂತೆ ಪುಟಿದೇಳಲು ಸಿದ್ಧರಾದ ಬಿಹಾರದ ರಾಬಿನ್ ಹುಡ್ ಪಪ್ಪು ಯಾದವ್ - ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ

ಐದು ಅವಧಿಗೆ ಸಂಸದ ಮತ್ತು ಒಂದು ಅವಧಿಗೆ ಶಾಸಕರಾಗಿರುವ ಪಪ್ಪು. ಲಾಲು ಮಾತ್ರವಲ್ಲದೆ, ಬಿಹಾರದ ಬಹುತೇಕ ನಾಯಕರ ವಿರುದ್ಧ ಧ್ವನಿ ಎತ್ತಿದ್ದಾರೆ. ಮಾಧೇಪುರ ಕ್ಷೇತ್ರದ ಮಾಜಿ ಸಂಸದರಾದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರು ಅಂದಿನ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರನ್ನು ‘ನಖರಾ’ (ಅಸಮರ್ಥ) ವ್ಯಕ್ತಿ ಎಂದು ಜರೆದಿದ್ದರು.

pappu-yadav-bihars-robin-hood-an-unpredictable-missile
ಕ್ಷಿಪಣಿಯಂತೆ ಪುಟಿದೇಳಲು ಸಿದ್ದರಾದ ಬಿಹಾರದ ರಾಬಿನ್ ಹುಡ್ ಪಪ್ಪು ಯಾದವ್
author img

By

Published : Oct 8, 2020, 10:20 PM IST

Updated : Oct 8, 2020, 10:39 PM IST

ಪಾಟ್ನಾ: ತಾನು ರಾಜಕಾರಣಿಯಾಗಿರದಿದ್ದರೆ ಸಮಾಜ ಸೇವಕನಾಗಿರುತ್ತಿದ್ದೆ ಎಂದು ಹಿಂದೆಯೇ, ಪಪ್ಪು ಯಾದವ್ ಹೇಳಿದ್ದರು. ದುರದೃಷ್ಟವಶಾತ್, ಅವರು ರಾಜಕೀಯಕ್ಕೆ ಇಳಿದರಾದರೂ ತಮ್ಮ ಸಾಮಾಜಿಕ ಕಾರ್ಯಗಳನ್ನು ಮುಂದುವರೆಸಿದರು, ಜೊತೆಗೆ ತಾನೊಬ್ಬ ಗೊತ್ತೇ ಇರದ ದಿಕ್ಕುಗಳಿಗೆ ನುಗ್ಗಬಲ್ಲ ಅನಿರೀಕ್ಷಿತ ಕ್ಷಿಪಣಿ ಎಂದೂ ಹೇಳಿಕೊಂಡರು.

ಜಮೀನ್ದಾರಿ ಕುಟುಂಬದಿಂದ ಬಂದ ಅವರು ಜನ್ ಅಧಿಕಾರಿ ಪಕ್ಷದ (ಜೆಎಪಿ) ಅಧ್ಯಕ್ಷರೂ ಆಗಿದ್ದಾರೆ. ಪಪ್ಪು ‘ಈಟಿವಿ ಭಾರತ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ‘ಜನರು ತಮ್ಮನ್ನು ದಿಕ್ಕೆಟ್ಟ ಅಥವಾ ಯಾರೂ ಊಹಿಸದ ಕ್ಷಿಪಣಿ ಎಂದು ಕರೆದರೆ ಅದಕ್ಕೆ ಬೇಸರಿಸುವುದಿಲ್ಲ, ಬದಲಿಗೆ ಹೆಮ್ಮೆಪಡುತ್ತೇನೆ’ ಎಂಬುದಾಗಿ ಹೇಳಿದ್ದಾರೆ.

ಆದರೂ ತಮ್ಮ ಸಮರ್ಥನೆಗೆ ತೃಪ್ತಿದಾಯಕ ತಾರ್ಕಿಕ ಕಾರಣ ನೀಡದ ಅವರು, “ಯುವಕರು ಅನಿರೀಕ್ಷಿತ ಕ್ಷಿಪಣಿಗಳನ್ನು ಇಷ್ಟಪಡುತ್ತಾರೆ ಮತ್ತು ತಾವು ಬಿಹಾರದ ಯುವಕರ ಕಣ್ಮಣಿಯಾಗಿರುವುದಾಗಿ ಒತ್ತಿ ಹೇಳಿದರು. ಸ್ವಾರಸ್ಯಕರ ಸಂಗತಿ ಎಂದರೆ ಅನೇಕ ವೇಳೆ ಅವರು ತೇಜಸ್ವಿ ಪ್ರಸಾದ್ ಯಾದವ್ ಅವರಂತಹ ಯುವ ಮುಖಂಡರ ಮೇಲೆ ಹರಿಹಾಯ್ದಿದ್ದಾರೆ.

ಆರ್‌ಜೆಡಿಯಲ್ಲಿದ್ದಾಗ ಹಲವು ಸಂದರ್ಭಗಳಲ್ಲಿ, ಪಪ್ಪು ವಿವಿಧ ವಿಷಯಗಳ ಕುರಿತು ಲಾಲು ಪ್ರಸಾದ್ ವಿರುದ್ಧ ಜಂಗಿಕುಸ್ತಿಯಲ್ಲಿ ತೊಡಗಿದ್ದರು ಮತ್ತು ಪಕ್ಷದ ವಿರುದ್ಧ ಮಾತನಾಡಿದ್ದರು. ಲಾಲು ಅವರನ್ನು ಹೊರತುಪಡಿಸಿ ಪಕ್ಷದ ಬೇರಾವುದೇ ನಾಯಕರ ಬಗ್ಗೆ ಕಾಳಜಿ ತೋರುವುದಿಲ್ಲ ಎಂದು ಅವರೊಮ್ಮೆ ಹೇಳಿದ್ದರು.

ಐದು ಅವಧಿಗೆ ಸಂಸದ ಮತ್ತು ಒಂದು ಅವಧಿಗೆ ಶಾಸಕರಾಗಿರುವ ಪಪ್ಪು. ಲಾಲು ಮಾತ್ರವಲ್ಲದೆ, ಬಿಹಾರದ ಬಹುತೇಕ ನಾಯಕರ ವಿರುದ್ಧ ಧ್ವನಿ ಎತ್ತಿದ್ದಾರೆ. ಮಾಧೇಪುರ ಕ್ಷೇತ್ರದ ಮಾಜಿ ಸಂಸದರಾದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಅವರು ಅಂದಿನ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರನ್ನು ‘ನಖರಾ’ (ಅಸಮರ್ಥ) ವ್ಯಕ್ತಿ ಎಂದು ಜರೆದಿದ್ದರು.

ಆಸಕ್ತಿಕರ ಸಂಗತಿ ಎಂದರೆ, ಅವರು ಸುಲಿಗೆಯಿಂದ ದರೋಡೆಯವರೆಗೆ ಖುದ್ದು ವಿವಾದಾತ್ಮಕ ದಾಖಲೆ ಹೊಂದಿರುವ ವ್ಯಕ್ತಿ. ಆದರೂ, ಹಿಂದಿನ ಡಾನ್ ಈಗ ರಾಬಿನ್ ಹುಡ್ ರೀತಿ ಬದಲಾಗಿದ್ದಾರೆ ಎಂಬುದು ಕೂಡ ಅಷ್ಟೇ ಸತ್ಯ. ತಮಗೆ ಅಷ್ಟೊಂದು ಹಣ ಎಲ್ಲಿಂದ ಬರುತ್ತದೆ ಎಂಬುದಕ್ಕೆ ಸ್ಪಷ್ಟನೆ ನೀಡಿದ ಅವರು “ಸ್ವಂತ ಜಮೀನು ಮಾರಿ, ಅಗತ್ಯವಿರುವ ಜನರಿಗೆ ಹಣವನ್ನು ವಿತರಿಸಿದ್ದೇನೆ” ಎಂದಿದ್ದಾರೆ.

ತಾನೊಬ್ಬ ಡಾನ್ ಅಥವಾ ರಾಬಿನ್ ಹುಡ್ ಅಲ್ಲ. ಬದಲಿಗೆ ಭ್ರಷ್ಟ ವ್ಯವಸ್ಥೆ, ಊಳಿಗಮಾನ್ಯ ಮನಸ್ಥಿತಿ ಮತ್ತು ಅನಿಯಂತ್ರಿತ ಅಧಿಕಾರಶಾಹಿಯ ವಿರುದ್ಧ ಯಾವಾಗಲೂ ಹೋರಾಡುವುದಾಗಿ ಹೇಳಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ತಮ್ಮ ದಯಾಪರತೆಯನ್ನು ಸಹಿಸಲಾಗದ ಮಂದಿ ತನಗೆ ಡಾನ್ ಎಂಬ ಪಟ್ಟ ಕಟ್ಟಿದ್ದಾರೆ ಎಂದು ಪಪ್ಪು ಈ ಸಂದರ್ಭದಲ್ಲಿ ತಿಳಿಸಿದರು.

“ಕಳೆದ ವರ್ಷ ಪಾಟ್ನಾದ ಜನ ಪ್ರವಾಹಕ್ಕೆ ತುತ್ತಾಗಿದ್ದಾಗ ಬಿಹಾರದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ತಮ್ಮ ಮನೆ ಸೇರಿಕೊಂಡಿದ್ದರು. ಜನರಿಗೆ ಔಷಧಿ, ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸಲು ನಿರಂತರವಾಗಿ ಶ್ರಮಿಸಿದ್ದು ಈ ಪಪ್ಪು ಯಾದವ್. ಇಬ್ಬರೂ ಬಿಹಾರದ ಜನರನ್ನು ನೋವಿನಲ್ಲೇ ಬಿಟ್ಟು ಹೋದರು. ಆಗ ಜನರ ಮನೆಮನೆಗೆ ತೆರಳಿ ಅವರ ದುಃಖ ದುಮ್ಮಾನಗಳನ್ನು ಹಂಚಿಕೊಂಡಿದ್ದು ಇದೇ ಪಪ್ಪು. ನಾನು ಬಿಹಾರದ ಮಗ ಮತ್ತು ಜನರಿಗೆ ಎಲ್ಲದಕ್ಕೂ ಋಣಿಯಾಗಿದ್ದೇನೆ ” ಎಂದು ಅವರು ಹೇಳಿದರು.

ನವದೆಹಲಿಯ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ (ಐಜಿಎನ್ ಒಯು) ಮಾನವ ಹಕ್ಕುಗಳು ಮತ್ತು ವಿಪತ್ತು ನಿರ್ವಹಣೆ ವಿಷಯಗಳಲ್ಲಿ ಪ್ರತ್ಯೇಕವಾಗಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ಬಾಲ್ಯದಲ್ಲಿ ಅಜ್ಜ ಲಕ್ಷ್ಮಿ ಪ್ರಸಾದ್ ಮಂಡಲ್ ಇವರನ್ನು ಪಪ್ಪು ಎಂಬ ಅಡ್ಡ ಹೆಸರಿನಿಂದ ಕರೆದರು. ಸಹಾಯ ಮಾಡುವ ತಮ್ಮ ಸ್ವಭಾವದಿಂದಾಗಿ ಅವರನ್ನು ಕೋಸಿ ನೆಲದ ಧ್ವನಿ ಎಂದು ಕರೆಯಲಾಗುತ್ತದೆ.

ವೋಟ್-ಕಟೂವಾ (ಮತ-ಬೇಟೆಗಾರ) ಎಂಬ ಪದ ತನಗೆ ಸರಿ ಹೊಂದುವುದಿಲ್ಲ. ಯಾರು ಮತಗಳನ್ನು ಬೇಟೆ ಆಡುತ್ತಾನೋ ಅಂತಹವನಿಗೆ ಈ ಬಿರುದು ಒಪ್ಪುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ.

“ರಾಜಕೀಯದಲ್ಲಿ ಅಂತಹ ವ್ಯಕ್ತಿ ಇದ್ದರೆ ಅದು ನಿತೀಶ್ ಕುಮಾರ್. ಅವರೊಬ್ಬ ಅತಿದೊಡ್ಡ ಮತ ಬೇಟೆಗಾರ. ಬಿಹಾರದ ಜನ 15 ವರ್ಷಗಳ ಕಾಲ ಲಾಲೂಜಿ ಮತ್ತೂ 15 ವರ್ಷಗಳ ಕಾಲ ನಿತೀಶ್ಜೀ ಅವರನ್ನು ಕಂಡಿದ್ದಾರೆ. ಈಗ ಬದಲಾವಣೆ ಆಗಬೇಕು ಮತ್ತು ಬಿಹಾರವನ್ನು ಆಳಲು ನನಗೆ ಅವರು ಕನಿಷ್ಠ 3 ವರ್ಷಗಳನ್ನು ನೀಡಬೇಕು ” ಎಂದು ಪಪ್ಪು ಹೇಳಿದರು.

ಪಪ್ಪು ಮೊದಲ ಬಾರಿಗೆ ಸಿಂಘರ್ಸಸ್ಥಾನ ವಿಧಾನಸಭಾ ಕ್ಷೇತ್ರದಿಂದ 1990 ರಲ್ಲಿ (ಸ್ವತಂತ್ರ ಅಭ್ಯರ್ಥಿ) ಶಾಸಕರಾದರು. ಮೂರು ಬಾರಿ ಅವರು 1991, 1996, 1999 ರಲ್ಲಿ ಪೂರ್ಣಿಯಾದಿಂದ ಪಕ್ಷೇತರರಾಗಿ ಸಂಸತ್ತಿಗೆ ಚುನಾಯಿತರಾದರು. 2004 ಮತ್ತು 2014ರಲ್ಲಿ ಆರ್ ಜೆ ಡಿಯಿಂದ ಟಿಕೆಟ್ ಪಡೆದು ಮಾಧೇಪುರ ಕ್ಷೇತ್ರದಿಂದ ಎರಡು ಅವಧಿಗೆ ಸಂಸದರಾದರು.

ಪೂರ್ಣಿಯಾ ಕ್ಷೇತ್ರದ ಸಿಪಿಎಂ ಶಾಸಕ ಅಜಿತ್ ಸರ್ಕಾರ್ ನನ್ನು 2008ರಲ್ಲಿ ಕೊಲೆ ಮಾಡಿದ ಪ್ರಕರಣದಲ್ಲಿ ಪಪ್ಪು ಅವರಿಗೆ ಶಿಕ್ಷೆಯಾಗಿತ್ತು. 2013ರಲ್ಲಿ ಅವರನ್ನು ಪಾಟ್ನಾ ಹೈಕೋರ್ಟ್ ಖುಲಾಸೆಗೊಳಿಸಿತ್ತು. ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅವರು ಪ್ರಗತಿಪರ ಪ್ರಜಾಪ್ರಭುತ್ವ ಒಕ್ಕೂಟ (ಪಿಡಿಎ) ಹೆಸರಿನಲ್ಲಿ ಒಂಬತ್ತು ವಿಭಿನ್ನ ರಾಜಕೀಯ ಪಕ್ಷಗಳೊಂದಿಗೆ ಸೇರಿ ಮೈತ್ರಿಕೂಟ ಸ್ಥಾಪಿಸಿದ್ದು, ಎಲ್ಲಾ 243 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದ್ದಾರೆ.

ಇಷ್ಟಾದರೂ ಚುನಾವಣೆಗೆ ಕೇವಲ ಒಂದು ತಿಂಗಳು ಬಾಕಿ ಇದ್ದು, ಪಪ್ಪು ಯಾದವ್ ಜನರ ಮೇಲೆ ಪ್ರಭಾವ ಬೀರಲಿದ್ದಾರೆಯೇ ಅಥವಾ ಕಳೆದ ಲೋಕಸಭಾ ಚುನಾವಣೆಯ ಪ್ರದರ್ಶನವನ್ನೇ ಪುನರಾವರ್ತನೆ ಮಾಡಲಿದ್ದಾರೆಯೇ ಎಂಬುದು ಬಳಿಕ ಸ್ಪಷ್ಟವಾಗಲಿದೆ. ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷದ ಎಲ್ಲಾ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.

Last Updated : Oct 8, 2020, 10:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.