ETV Bharat / bharat

ವಿಶೇಷ ಲೇಖನ: ಕೊರೊನಾ ಸಂದರ್ಭದಲ್ಲಿ ಹೆಚ್ಚಾದ ನಕಲಿ ದಂಧೆಗಳು, ಕಡಿವಾಣ ಅಗತ್ಯ

ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಫೇಸ್​ ಮಾಸ್ಕ್​, ಸ್ಯಾನಿಟೈಸರ್​ ಬಳಕೆ ಹೆಚ್ಚಾಗುತ್ತಿದೆ. ಇನ್ನು ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳವ ಕೆಲ ಭ್ರಷ್ಟ ಗ್ಯಾಂಗ್‌ಗಳು ಮಾರುಕಟ್ಟೆಯಲ್ಲಿ ಕಲಬೆರಕೆ ಮತ್ತು ನಕಲಿ ಸ್ಯಾನಿಟೈಸರ್‌ಗಳನ್ನು ತಯಾರಿಸುವ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ.

author img

By

Published : Aug 17, 2020, 10:50 PM IST

ಸ್ಯಾನಿಟೈಸರ್​ ಬಳಕೆ
ಸ್ಯಾನಿಟೈಸರ್​ ಬಳಕೆ

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ಫೇಸ್​ ಮಾಸ್ಕ್​, ಸ್ಯಾನಿಟೈಸರ್​ ಬಳಕೆ ಹೆಚ್ಚಾಗುತ್ತಿದೆ. ಇನ್ನು ಇದೇ ಸಂದರ್ಭವನ್ನು ದುರುಪಯೋಗಪಡಿಸಿಕೊಳ್ಳವ ಕೆಲ ಭ್ರಷ್ಟ ಗ್ಯಾಂಗ್‌ಗಳು ಮಾರುಕಟ್ಟೆಯಲ್ಲಿ ಕಲಬೆರಕೆ ಮತ್ತು ನಕಲಿ ಸ್ಯಾನಿಟೈಸರ್‌ಗಳನ್ನು ತಯಾರಿಸುವ ವಿವಿಧ ಯೋಜನೆಗಳನ್ನು ರೂಪಿಸುತ್ತಿದೆ.

ಚೀನಾ ಮತ್ತು ಬಾಂಗ್ಲಾದೇಶದಲ್ಲಿ ಇಂತಹ ಕೃತ್ಯ ಎಸಗುವವರಿಗೆ ಗಲ್ಲು ಶಿಕ್ಷೆ ನೀಡಲಾಗುತ್ತದೆ. ಯುನೈಟೆಡ್ ಕಿಂಗ್‌ಡಮ್, ಬ್ರೆಜಿಲ್, ಫ್ರಾನ್ಸ್ ಮತ್ತು ಸ್ಪೇನ್ ರಾಷ್ಟ್ರಗಳಲ್ಲಿ ಆಹಾರ ಸುರಕ್ಷತಾ ಮಾನದಂಡಗಳ ಕಣ್ಗಾವಲು ಮತ್ತು ಮೇಲ್ವಿಚಾರಣೆಯ ಕ್ರಮಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಸೂಕ್ತ ಕ್ರಮಗಳ ಕೊರತೆಯಿಂದಾಗಿ ನಕಲಿ ವಸ್ತುಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಆದರೆ ಇವೆಲ್ಲದಕ್ಕೂ ಕಡಿವಾಣ ಹಾಕಬೇಕಾದರೆ ಉತ್ತಮ ಮಾರ್ಗಸೂಚಿ ಜಾರಿಯಾಗಬೇಕು.

ಪ್ರಸ್ತುತ ಪರಿಸ್ಥಿತಿಯಲ್ಲಿ ನಕಲಿ ಮತ್ತು ಕಲಬೆರಕೆ ವಸ್ತುಗಳ ತಡೆಗಟ್ಟುವಿಕೆಗೆ ಕಣ್ಗಾವಲು ವ್ಯವಸ್ಥೆಯನ್ನು ಮಾಡಲಾಗಿದೆ. ಅಷ್ಟೇ ಅಲ್ಲದೆ, ವಸ್ತುಗಳ ಉಪಯುಕ್ತತೆ ಕುರಿತು ಪ್ರಶ್ನಿಸಿ ಅವುಗಳ ಅವಶ್ಯಕತೆಯ ಆಧಾರದಲ್ಲಿ ಮಾರುಕಟ್ಟೆಗೆ ರವಾನಿಸಲಾಗುತ್ತದೆ. ಏತನ್ಮಧ್ಯೆ, ಸಿಎಜಿ ವರದಿಯು, ಹಾಲು ಮತ್ತು ದ್ವಿದಳ ಧಾನ್ಯಗಳಿಂದ ಹಿಡಿದು ತೈಲಗಳು ಮತ್ತು ಮಸಾಲೆಗಳವರೆಗಿನ ನ್ಯೂನ್ಯತೆಗಳನ್ನು ಎತ್ತಿ ತೋರಿಸಿದೆ.

ಇನ್ನು ಕೊರೊನಾ ಸಾಂಕ್ರಾಮಿಕದ ನಡುವೆ ವಿವಿಧ ರೀತಿಯ ಗ್ಯಾಂಗ್​ಗಳು ತಲೆಎತ್ತಿದೆ. ಈ ಗ್ಯಾಂಗ್​ಗಳು ಸ್ಯಾನಿಟೈಸರ್​, ಮಾಸ್ಕ್​ ಇಂತಹ ಅಗತ್ಯ ಪರಿಕರಗಳನ್ನು ಗಮನದಲ್ಲಿಟ್ಟುಕೊಂಡು ನಕಲಿ ವಸ್ತುಗಳನ್ನು ಮಾರುಕಟ್ಟೆಗೆ ತರುತ್ತಿದೆ. ಸ್ಯಾನಿಟೈಜರ್‌ಗಳ ಒಟ್ಟು ಮೊತ್ತದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಸುಮಾರು 5 ತಿಂಗಳ ಹಿಂದೆ ಸ್ವತಃ 200 ಮಿಲಿ ಗರಿಷ್ಠ ಬೆಲೆಯನ್ನು ರೂ .100 ಎಂದು ನಿಗದಿಪಡಿಸುವ ನೀತಿಯನ್ನು ಭಾರತ ಸರ್ಕಾರ ಜಾರಿಗೆ ತಂದಿದೆ. ಈಥೈಲ್ ಆಲ್ಕೋಹಾಲ್, ಐಸೊಪ್ರೊಪಿಲ್ ಆಲ್ಕೋಹಾಲ್ ಮತ್ತು ಎನ್ ಪ್ರೊಪೈಲ್ ಆಲ್ಕೋಹಾಲ್ ಬಳಸಿ ಗುಣಮಟ್ಟದ ಸ್ಯಾನಿಟೈಜರ್‌ಗಳನ್ನು ರಚಿಸಲು ಮಾರ್ಗಸೂಚಿಗಳನ್ನು ನೀಡಲಾಗಿದೆ. ಆದಾಗ್ಯೂ, ಕೆಲವೇ ವಾರಗಳಲ್ಲಿ, ನೋಯ್ಡಾ, ಜಮ್ಮು ಮತ್ತು ಕಾಶ್ಮೀರ, ಮುಂಬೈ, ವಡೋದರಾ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ನಕಲಿ ಸ್ಯಾನಿಟೈಸರ್ ಉತ್ಪಾದನಾ ಗ್ಯಾಂಗ್‌ಗಳು ಇವೆ ಎಂದು ತಿಳಿದುಬಂದಿತ್ತು.

ಪ್ರಕಾಶಂ, ಕಡಪ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ, ಮದ್ಯದ ಚಟಕ್ಕೆ ಒಳಗಾದ ಸುಮಾರು 50 ಜನರು ಉನ್ಮಾದದಿಂದ ಸ್ಯಾನಿಟೈಜರ್‌ಗಳನ್ನು ಸೇವಿಸಿ ಸಾವನ್ನಪ್ಪಿದ್ದಾರೆ. ಈ ಸಾವುಗಳ ಕುರಿತು ತನಿಖೆ ನಡೆಸಿದ ಪೊಲೀಸರು ಕೆಲ ವಿಚಾರಗಳನ್ನು ಬಹಿರಂಗ ಪಡಿಸಿದ್ದರು. ಮೆಥನಾಲ್ ಎಂಬ ರಾಸಾಯನಿಕ ಮಾರುಕಟ್ಟೆಯಲ್ಲಿ ಪ್ರತಿ ಲೀಟರ್‌ಗೆ 10-15 ರೂ. ಇರುತ್ತದೆ. ಇದನ್ನು ದುಷ್ಕರ್ಮಿ ಗ್ಯಾಂಗ್‌ಗಳು ಇತರ ರಾಸಾಯನಿಕಗಳೊಂದಿಗೆ ಬೆರೆಸಲು ಪ್ರಾರಂಭಿಸಿ ಕಲಬೆರಕೆ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ. ಈ ನಕಲಿ ಸರಕು ವ್ಯವಹಾರಗಳು ಈಗ ಹೈದರಾಬಾದ್ ಉಪನಗರಗಳಲ್ಲಿ ಕಾಟೇಜ್ ಉದ್ಯಮವಾಗಿ ಅಭಿವೃದ್ಧಿ ಹೊಂದುತ್ತಿವೆ. ವೈಯಕ್ತಿಕ ನೈರ್ಮಲ್ಯ ಪ್ರೋಟೋಕಾಲ್​ಗಳ ಸೋಗಿನಲ್ಲಿ, ಈ ಅಕ್ರಮ ವ್ಯಾಪಾರಿಗಳು ಸಾರ್ವಜನಿಕ ಜೀವನದೊಂದಿಗೆ ಆಟವಾಡುವ ಆಧಾರದ ಮೇಲೆ ತಮ್ಮ ವೈಯಕ್ತಿಕ ಲಾಭಗಳನ್ನು ಹೇಗೆ ಅಭಿವೃದ್ಧಿಪಡಿಸುತ್ತಿದ್ದಾರೆ ಎಂಬುದು ಸಾಕಷ್ಟು ಆಶ್ಚರ್ಯಕರವಾಗಿದೆ.

ಆಂಧ್ರಪ್ರದೇಶದ ಹೈಕೋರ್ಟ್ ಕೆಲ ಸಮಯದ ಹಿಂದೆ "ಭ್ರಷ್ಟಾಚಾರವನ್ನು ತಡೆಗಟ್ಟಲು ಅಧಿಕಾರಿಗಳಲ್ಲಿ ಸಮಗ್ರತೆಯ ಕೊರತೆಯಿದೆ ಮತ್ತು ಅಕ್ರಮ ವ್ಯಾಪಾರಿಗಳು ಸಾರ್ವಜನಿಕ ಆರೋಗ್ಯ ಕ್ರಮಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಹೇಳಿಕೆ ನೀಡಿತ್ತು. ಕೊರೊನಾ ಸಾಂಕ್ರಾಮಿಕ ಸಮಯದಲ್ಲೂ ಇದು ಹೆಚ್ಚು ಸಾಬೀತಾಗಿದೆ.

ಅಖಿಲ ಭಾರತ ಮಟ್ಟದ ಪ್ರಾಧಿಕಾರವನ್ನು ಸ್ಥಾಪಿಸುವುದರೊಂದಿಗೆ ಕೇಂದ್ರ ಸರ್ಕಾರದ ಜವಾಬ್ದಾರಿ ಕೊನೆಗೊಂಡಿದೆ ಎಂದು ತೋರುತ್ತದೆ. ರಾಜ್ಯ ಮಟ್ಟದಲ್ಲಿ, ನಿಯಮಗಳು ಮತ್ತು ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿರ್ದಿಷ್ಟ ಕಾರ್ಯವಿಧಾನದ ಕೊರತೆಯಿದೆ. ಕ್ಷೇತ್ರ ಮಟ್ಟದಲ್ಲಿ ಸರಿಯಾಗಿ ಜಾರಿಗೆ ಬಂದರೆ ಮಾತ್ರ ಕಾನೂನುಗಳುು ಪರಿಣಾಮಕಾರಿಯಾಗಿರುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.