ನವದೆಹಲಿ: ಪಾಲ್ಘರ್ ಮತ್ತು ಬುಲಂದ್‌ಶಹರ್ ಹತ್ಯೆಗಳು ಸಂಪೂರ್ಣವಾಗಿ ಭಿನ್ನವಾಗಿರುವುದರಿಂದ ಅವುಗಳ ನಡುವಿನ ಹೋಲಿಕೆ ದುರದೃಷ್ಟಕರ ಎಂದು ಬಿಜೆಪಿ ಹೇಳಿದೆ.
ಈ ಕುರತು ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ವಿಜಯ್ ಶಂಕರ್ ಶಾಸ್ತ್ರಿ, "ಇದು ದುರದೃಷ್ಟಕರ, ಆ ಘಟನೆ ಸಂಭವಿಸಬಾರದಿತ್ತು" ಎಂದು ಹೇಳಿದ್ದಾರೆ.
ಬುಲಂದ್‌ಶಹರ್‌ನಲ್ಲಿ, ಕಳ್ಳತನವನ್ನು ದೇವಾಲಯದ ಅರ್ಚಕರು ವಿರೋಧಿಸಿದಾಗ ಅವರ ವಿರುದ್ಧ ಸೇಡು ತೀರಿಸಕೊಳ್ಳಲು ಪೂಜಾರಿಗಳ ಹತ್ಯೆ ಮಾಡಲಾಗಿದೆ. ಅಲ್ಲದೇ, ಇಲ್ಲಿ ಜನರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಪಾಲ್ಘರ್ನಲ್ಲಿ ಸಾಧುಗಳನ್ನು ಕೊಲ್ಲಲು ಪೊಲೀಸರೇ ಒಪ್ಪಿಗೆ ನೀಡಿದ್ದರು ಎಂದು ಶಾಸ್ತ್ರಿ ಹೇಳಿದ್ದಾರೆ.
ಇವೆರಡನ್ನೂ ಹೋಲಿಸಬಾರದು. ಮಹಾರಾಷ್ಟ್ರ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ಏಕೆ ಹಸ್ತಾಂತರಿಸುತ್ತಿಲ್ಲ ಎಂದು ವಿಜಯ್ ಶಂಕರ್ ಶಾಸ್ತ್ರಿ ಪ್ರಶ್ನಿಸಿದರು.
ಮಹಾರಾಷ್ಟ್ರದಲ್ಲಿ ಪಿತೂರಿ ನಡೆಸಿ, ಯೋಜಿತವಾಗಿ ಕೊಲೆ ಮಾಡಲಾಗಿದೆ. ಆದರೆ ಬುಲಂದ್‌ಶಹರ್‌ನಲ್ಲಿ ನಡೆದ ಹತ್ಯೆಯನ್ನು ರಾಜಕೀಯಗೊಳಿಸಬಾರದು ಎಂದರು.