ETV Bharat / bharat

ಶ್ರೀನಗರ: ಡಿಡಿಸಿ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಪಾಕ್​​​​​ ಮಹಿಳೆ ಸ್ಪರ್ಧೆ... ನಾಳೆ ಭವಿಷ್ಯ ನಿರ್ಧಾರ! - ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಪಾಕಿಸ್ತಾನದ ಮಹಿಳೆ

ಕಾಶ್ಮೀರ ವ್ಯಕ್ತಿಯನ್ನು ಮದುವೆಯಾದ ಪಾಕಿಸ್ತಾನಿ ಮೂಲದ ಮಹಿಳೆಯೊಬ್ಬರು ಉತ್ತರ ಕಾಶ್ಮೀರದ ಡ್ರ್ಯಾಗ್ಮುಲ್ಲಾ ಕುಪ್ವಾರಾ ಜಿಲ್ಲೆಯಿಂದ ಡಿಡಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಸದಾಫ್ ಈ ಹಿಂದೆ ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂವಹನ ನಡೆಸಿದ್ದಾರೆ.

election
election
author img

By

Published : Dec 21, 2020, 10:29 PM IST

Updated : Dec 21, 2020, 10:47 PM IST

ಶ್ರೀನಗರ (ಜಮ್ಮು-ಕಾಶ್ಮೀರ): ಉತ್ತರ ಕಾಶ್ಮೀರದ ಡ್ರ್ಯಾಗ್ಮುಲ್ಲಾ ಕುಪ್ವಾರಾ ಜಿಲ್ಲೆಯಿಂದ ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಗೆ (ಡಿಡಿಸಿ) ಸ್ವತಂತ್ರ ಅಭ್ಯರ್ಥಿಯಾಗಿ ಪಾಕಿಸ್ತಾನ ಮೂಲದ ಮಹಿಳೆಯೊಬ್ಬರು ಸ್ಪರ್ಧಿಸಿದ್ದಾರೆ.

ಮಹಿಳೆಯರಿಗೆ ಮೀಸಲಾಗಿರುವ ಕುಪ್ವಾರಾ ಸ್ಥಾನದಿಂದ ಕಾಶ್ಮೀರಿ ಪುರುಷನನ್ನು ಮದುವೆಯಾದ ಸೋಮಿಯಾ ಸದಾಫ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಸದಾಫ್ ಹತ್ತು ವರ್ಷಗಳ ಹಿಂದೆ ತನ್ನ ಕಾಶ್ಮೀರಿ ಪತಿ ಅಬ್ದುಲ್ ಮಜೀದ್ ಭಟ್ ಅವರೊಂದಿಗೆ ಕಾಶ್ಮೀರಕ್ಕೆ ಬಂದಿದ್ದು, ಅವರಿಗೆ ಮೂವರು ಮಕ್ಕಳಿದ್ದಾರೆ.

2015ರಲ್ಲಿ ಬಡತನ ನಿರ್ಮೂಲನೆ ಮಾಡುವ ಸರ್ಕಾರಿ ಯೋಜನೆಯ 'ಉಮೀದ್' ಓಟದ ಭಾಗವಾಗಿದ್ದ ಸದಾಫ್ ಯಶಸ್ವಿಯಾಗಿ ಅದನ್ನು ಪೂರ್ಣಗೊಳಿಸಿದ್ದರು. 2018ರಲ್ಲಿ ಸೋಮಿಯಾ ಸದಾಫ್ 'ಪ್ರಗತಿಶೀಲ ಮಹಿಳಾ ಉದ್ಯಮಶೀಲತೆ'ಗಾಗಿ ಜಮ್ಮು ಮತ್ತು ಕಾಶ್ಮೀರವನ್ನು ಪ್ರತಿನಿಧಿಸಿದ್ದರು ಮತ್ತು ಆನ್‌ಲೈನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಸಂವಹನ ನಡೆಸಿದ್ದರು.

ಸದಾಫ್ ಅವರ ಪತಿ ಅಬ್ದುಲ್ ಮಜೀದ್ ಭಟ್ ಕುಪ್ವಾರಾದ ಬಾಟರ್ಗಮ್ ಗ್ರಾಮಕ್ಕೆ ಸೇರಿದವರು. 1990ರ ದಶಕದಲ್ಲಿ ಭಟ್ ಉಗ್ರಗಾಮಿಗಳನ್ನು ಸೇರಲು ಶಸ್ತ್ರಾಸ್ತ್ರ ತರಬೇತಿಗಾಗಿ ಪಾಕಿಸ್ತಾನಕ್ಕೆ ಹೋಗಿದ್ದರು. ಆದರೆ ಶಸ್ತ್ರಾಸ್ತ್ರ ತರಬೇತಿಯ ಬದಲು ಭಟ್ ಅಧ್ಯಯನ ಮಾಡಲು ನಿರ್ಧರಿಸಿ ಲಾಹೋರ್ ಕಾಲೇಜಿಗೆ ಸೇರಿಕೊಂಡಿದ್ದರು. ಅವರ ಅಧ್ಯಯನದ ಸಮಯದಲ್ಲಿಯೇ ಅಬ್ದುಲ್ ಮಜೀದ್ ಭಟ್ ಸದಾಫ್ ಅವರನ್ನು ಭೇಟಿಯಾಗಿ ಬಳಿಕ 2002ರಲ್ಲಿ ಅವರು ವಿವಾಹವಾಗಿ 2010ರಲ್ಲಿ ಕಾಶ್ಮೀರಕ್ಕೆ ಬಂದರು.

ಸೋಮಿಯಾ ಸದಾಫ್ ಮೌಲಾನಾ ಆಜಾದ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದು, ತನ್ನ ಸುತ್ತಮುತ್ತಲಿನ ಜನರ ಪ್ರೀತಿಯಿಂದಾಗಿ ಡಿಡಿಸಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ಹೇಳಿದ್ದಾರೆ.

2010ರಲ್ಲಿ ಒಮರ್ ಅಬ್ದುಲ್ಲಾ ಸರ್ಕಾರದ ಅವಧಿಯಲ್ಲಿ ಶಸ್ತ್ರಾಸ್ತ್ರ ತರಬೇತಿಗಾಗಿ ತೆರಳಿದ್ದ ಉಗ್ರರು ಪಾಕಿಸ್ತಾನದಿಂದ ತಮ್ಮ ಕುಟುಂಬಗಳೊಂದಿಗೆ ತಮ್ಮ ಮನೆಗಳಿಗೆ ಮರಳಲು ನೀತಿ ಜಾರಿಗೆ ತರಲಾಗಿತ್ತು. ಆದರೆ ಸರ್ಕಾರವು ಅವರಿಗೆ ನೀಡಿದ ಭರವಸೆಗಳು ಈಡೇರಿಲ್ಲ ಎಂದು ಕುಟುಂಬಗಳು ಆರೋಪಿಸಿವೆ. ಅದಕ್ಕಾಗಿಯೇ ಕಾಹ್ಮೀರಿ ಪುರುಷರನ್ನು ಮದುವೆಯಾದ ಇಂತಹ ಅನೇಕ ಪಾಕಿಸ್ತಾನಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಎತ್ತಿಹಿಡಿಯಲು ಶ್ರೀನಗರದಲ್ಲಿ ಆಗಾಗ ಪ್ರತಿಭಟನೆ ನಡೆಸುತ್ತಾರೆ.

Last Updated : Dec 21, 2020, 10:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.