ಶ್ರೀನಗರ: ಕಣಿವೆ ನಾಡು ಜಮ್ಮು-ಕಾಶ್ಮೀರದಲ್ಲಿ ಭಾರತ ಮತ್ತು ಪಾಕ್ ಸೈನಿಕರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, ಇಬ್ಬರು ಪಾಕ್ ಯೋಧರನ್ನು ಹೊಡೆದುರುಳಿಸಲಾಗಿದೆ.
ಪಾಕಿಸ್ತಾನ ಯೋಧರು ಸುಂದರಬಾನಿ, ತಂಗ್ಧರ್ ಮತ್ತು ಕೇರನ್ ಗಡಿ ಪ್ರದೇಶಗಳಲ್ಲಿ ನಿರಂತರವಾಗಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದ್ದರು. ಈ ವೇಳೆ 34 ವರ್ಷದ ನಾಯ್ಕ್ ಕೃಷ್ಣ ಲಾಲ್ ಹುತಾತ್ಮರಾಗಿದ್ದಾರೆ. ಭಾರತೀಯ ಯೋಧರು ತಂಗ್ಧರ್ ಮತ್ತು ಕೇರನ್ ಗಡಿ ಪ್ರದೇಶದಲ್ಲಿ ಪ್ರತ್ಯುತ್ತರ ನೀಡಿ ಇಬ್ಬರು ಪಾಕ್ ಯೋಧರನ್ನು ಹೊಡೆದುರುಳಿಸಿದ್ದಾರೆ.