ಬಾರಾಮುಲ್ಲಾ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ನಲ್ಲಿ ಇಂದು ಪಾಕಿಸ್ತಾನವು ಅಪ್ರಚೋದಿತ ಶೆಲ್ ದಾಳಿ ನಡೆಸುವ ಮೂಲಕ ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮ ಉಲ್ಲಂಘಿಸಿದೆ.
ಭಾರತೀಯ ಸೇನೆಯು ಪ್ರತಿದಾಳಿ ನಡೆಸಿ ಸೂಕ್ತ ಪ್ರತ್ಯುತ್ತರವನ್ನೂ ನೀಡಿದೆ. ಕಳೆದ ಕೆಲವು ವಾರಗಳಿಂದ ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಗಳಲ್ಲಿ ಪಾಕಿಸ್ತಾನವು ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿದೆ.
ಒಂದು ಕಡೆ ಪಾಕಿಸ್ತಾನದ ಕಾಟ ಆದರೆ, ಮತ್ತೊಂದು ಕಡೆ ನೇಪಾಳ ಸಹ ಗಡಿಯಲ್ಲಿ ಕ್ಯಾತೆ ತೆಗೆದಿದೆ. ಅತ್ತ ಚೀನಾ ಗಡಿಯಲ್ಲಿ ರಾಮಾಯಣವನ್ನ ಸೃಷ್ಟಿಸಿ ಕುಳಿತಿದೆ. ಮಗದೊಂದು ಕಡೆ ದೇಶಾದ್ಯಂತ ಕೊರೊನಾ ಹಾವಳಿ.