ETV Bharat / bharat

ಪಾಕ್‌ ಸೌಹಾರ್ದ ಸಂಕೇತ - ಏ. ತಿಂಗಳಲ್ಲಿ ಭಾರತದ 360 ಮೀನುಗಾರರು ರಿಲೀಸ್‌ - ಈಟಿವಿ ಭಾರತ್

ಸೌಹಾರ್ದ ಸಂಕೇತವಾಗಿ ಭಾರತದ 360ಕ್ಕೂ ಹೆಚ್ಚು ಮೀನುಗಾರರನ್ನು ಬಿಡುಗಡೆ ಮಾಡುವುದಾಗಿ ಪಾಕ್ ವಿದೇಶಾಂಗ ಇಲಾಖೆ ವಕ್ತಾರ ಮೊಹ್ಮದ್ ಫೈಸಲ್ ಹೇಳಿದ್ದಾರೆ.

ಸಂಗ್ರಹ ಚಿತ್ರ
author img

By

Published : Apr 7, 2019, 1:58 AM IST

ನವದೆಹಲಿ: ಪಾಕಿಸ್ತಾನ ಸೌಹಾರ್ದ ಸಂಕೇತವಾಗಿ ಏಪ್ರಿಲ್ ತಿಂಗಳಲ್ಲಿ 360ಕ್ಕೂ ಹೆಚ್ಚು ಭಾರತೀಯ ಖೈದಿಗಳನ್ನ ಬಿಡುಗಡೆ ಮಾಡೋದಾಗಿ ಹೇಳಿದೆ. ಪಾಕ್‌ನ ವಿದೇಶಾಂಗ ಇಲಾಖೆ ವಕ್ತಾರ ಮೊಹ್ಮದ್ ಫೈಸಲ್‌ ಈ ಬಗ್ಗೆ ಖಚಿತಪಡಿಸಿದ್ದಾರೆ.

4 ಹಂತಗಳಲ್ಲಿ 360 ಭಾರತೀಯ ಖೈದಿಗಳ ರಿಲೀಸ್‌ :
ಸೌಹಾರ್ದ ಸಂಕೇತವಾಗಿ ಕಾರಾಗೃಹಗಳಲ್ಲಿರುವ ಭಾರತೀಯ ಮೀನುಗಾರರನ್ನ ಬಿಡುಗಡೆ ಮಾಡಲು ಪಾಕ್‌ ನಿರ್ಧರಿಸಿದೆ. ಶುಕ್ರವಾರವಷ್ಟೇ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಪಾಕ್‌ನ ವಿದೇಶಾಂಗ ಇಲಾಖೆ ವಕ್ತಾರ ಮೊಹ್ಮದ್ ಫೈಸಲ್‌, ಏಪ್ರಿಲ್‌ 8ರಂದು ಮೊದಲ ಹಂತದಲ್ಲಿಯೇ 100 ಖೈದಿಗಳನ್ನ ರಿಲೀಸ್ ಮಾಡೋದಾಗಿ ಹೇಳಿದ್ದಾರೆ.

'ಏಪ್ರಿಲ್‌ 8ರಂದು ಮೊದಲ ಹಂತದಲ್ಲಿ 100 ಭಾರತೀಯ ಖೈದಿಗಳನ್ನ ಬಿಡುಗಡೆ ಮಾಡಲಾಗುತ್ತದೆ. ಏಪ್ರಿಲ್‌ 15ರಂದು 100 ಖೈದಿಗಳು ರಿಲೀಸಾಗಲಿದ್ದಾರೆ. 3ನೇ ಹಂತ 22 ರಂದು 100 ಖೈದಿಗಳು ರಿಲೀಸಾಗುತ್ತಿದ್ದಾರೆ. ಕೊನೆಯ 4ನೇ ಹಂತ ಏಪ್ರಿಲ್‌ 29ರಂದು 60 ಖೈದಿಗಳನ್ನ ಬಿಡುಗಡೆ ಮಾಡಲಾಗುತ್ತಿದೆ. ಉಭಯ ರಾಷ್ಟ್ರಗಳ ಮಧ್ಯೆ ಸೌಹಾರ್ದ ಸಂಕೇತವಾಗಿ ಈ ನಡೆ ಅನುಸರಿಸುತ್ತಿದ್ದು, ಭಾರತ ಕಡೆಯಿಂದಲೂ ಇದೇ ರೀತಿಯ ಸೌಹಾರ್ದತೆ ಇರುತ್ತೆ ಎಂಬ ನಂಬಿಕೆಯನ್ನ ಪಾಕ್‌ ಇರಿಸಿಕೊಂಡಿದೆ. ಈಗ ಭಾರತದಲ್ಲಿ 347 ಪಾಕ್‌ ಖೈದಿಗಳಿದ್ದಾರೆ. 537 ಖೈದಿಗಳು ಪಾಕ್‌ನಲ್ಲಿದ್ದಾರೆ. ಪಾಕ್‌ನಲ್ಲಿರುವ ಖೈದಿಗಳಲ್ಲಿ 355 ಮೀನುಗಾರರಿದ್ದಾರೆ. ಉಳಿದ 5 ನಾಗರಿಕರಾಗಿದ್ದಾರೆ ಎಂದು ಮೊಹ್ಮದ್ ಫೈಸಲ್‌ ಹೇಳಿದ್ದಾರೆ.

ಭಾರತೀಯ ಖೈದಿಗಳಿಗೆ ಆಹಾರ, ಬಟ್ಟೆ ನೆರವು :
'ಕರಾಚಿಯಿಂದ ಲಾಹೋರ್‌ಗೆ ಕರೆತಂದು ಆ ಬಳಿಕ ವಾಘ ಗಡಿ ಮೂಲಕ ಭಾರತೀಯ ಮೀನುಗಾರರನ್ನ ಹಸ್ತಾಂತರಿಸಲಾಗುತ್ತದೆ' ಅಂತಾ ಈದಿ ವೆಲ್‌ಫೇರ್‌ ಆರ್ಗನೈಜೇಷನ್‌ನ ವಕ್ತಾರ ಅನ್ವರ್‌ ಕಜ್ಮಿ ಹೇಳಿದ್ದಾರೆ. ಅಷ್ಟೇ ಅಲ್ಲ, ಭಾರತೀಯ ಖೈದಿಗಳಿಗೆ ಬಟ್ಟೆ ಮತ್ತು ಆಹಾರ ನೆರವು ನೀಡಲಿದ್ದೇವೆ. ಭಾನುವಾರದಿಂದಲೇ ಖೈದಿಗಳ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಕರಾಚಿಯಿಂದ ಅಲ್ಲಮಾ ಇಕ್ಬಾಲ್‌ ಎಕ್ಸ್‌ಪ್ರೆಸ್‌ ರೈಲಿನ ಮೂಲಕ ಭಾನುವಾರ ಭಾರತೀಯ ಖೈದಿಗಳು ಲಾಹೋರ್‌ ತಲುಪಲಿದ್ದಾರೆ ಅಂತಾ ಅನ್ವರ್‌ ಕಜ್ಮಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ವಾಘಾ ಗಡಿ ಮೂಲಕ ಸೋಮವಾರ ಭಾರತೀಯ ಖೈದಿಗಳು ತವರು ನೆಲ ಪ್ರವೇಶಿಸಲಿದ್ದಾರೆ. ಕೆಲವರು ಕೆಲ ತಿಂಗಳ ಬಳಿಕ ಮತ್ತೆ ಕೆಲವೊಂದಿಷ್ಟು ಜನ ವರ್ಷಗಳ ಬಳಿಕ ತವರಿಗೆ ಮರಳುತ್ತಿದ್ದಾರೆ.

ಮೀನುಗಾರರು ಖೈದಿಗಳಾಗಲು ಏನು ಕಾರಣ ?:
ಮೀನುಗಾರರು ತಂತ್ರಜ್ಞಾನ ಹೊಂದಿದ ಸಾಧನಗಳನ್ನ ಬೋಟ್‌ಗಳಲ್ಲಿ ಬಳಸುವುದಿಲ್ಲ.ಅರೇಬಿಯನ್‌ ಸಮುದ್ರದಲ್ಲಿ ಜಲ ಗಡಿ ಮೀರಿ ಉಭಯ ದೇಶಗಳನ್ನ ಪ್ರವೇಶಿಸಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಎರಡು ದೇಶದ ಆಡಳಿತಾತ್ಮಕ ಮತ್ತು ಕಾನೂನಿನ ತೊಡಕುಗಳಿಂದ ಖೈದಿಗಳಾಗಿ ತಿಂಗಳುಗಟ್ಟಲೆ ಇಲ್ಲ ವರ್ಷಾನುಗಟ್ಟಲೆ ಜೈಲಿನಲ್ಲಿರುವಂತಾಗುತ್ತೆ. ಫೆಬ್ರವರಿ 14ರಂದು ಜಮ್ಮುಕಾಶ್ಮೀರದ ಪುಲ್ವಾಮಾದಲ್ಲಿ ಜೆಇಎಂ ಉಗ್ರರು ನಡೆಸಿದ ಆತ್ಮಹತ್ಯೆ ಬಾಂಬ್ ದಾಳಿಯಿಂದಾಗಿ 44ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದರು. ಇದರಿಂದಾಗಿ ಉಭಯ ದೇಶಗಳ ಮಧ್ಯೆ ಉದ್ವಿಗ್ನ ಸ್ಥಿತಿ ಏರ್ಪಟ್ಟಿತ್ತು. ಇದಾದ ಬಳಿಕ ಫೆಬ್ರವರಿ 26ರಂದು ಪಾಕ್‌ನ ಬಾಲಾಕೋಟ್‌ನಲ್ಲಿರುವ ಉಗ್ರ ಅಡಗುದಾಣಗಳ ಮೇಲೆ ಭಾರತ ಏರ್‌ಸ್ಟ್ರೈಕ್‌ ನಡೆಸಿತ್ತು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.