ETV Bharat / bharat

ಮತ್ತೆ ಪಾಕ್ ಕ್ಯಾತೆ: ಬಿಎಸ್​ಎಫ್​ ಸಂಸ್ಥಾಪನಾ ದಿನದಂದೇ ಸಬ್ ​ಇನ್ಸ್​ಪೆಕ್ಟರ್ ಹುತಾತ್ಮ - pakistan firing in loc

bsf sub inspector
ಬಿಎಸ್​​ಎಫ್ ಸಬ್​ ಇನ್ಸ್​ಪೆಕ್ಟರ್​
author img

By

Published : Dec 1, 2020, 2:49 PM IST

Updated : Dec 1, 2020, 3:32 PM IST

14:44 December 01

ಪಾಕ್​ನಿಂದ ಕದನ ವಿರಾಮ ಉಲ್ಲಂಘನೆ

ಶ್ರೀನಗರ (ಜಮ್ಮು ಕಾಶ್ಮೀರ): ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ತನ್ನ ಪುಂಡಾಟ ಮುಂದುವರೆಸಿದೆ. ಜಮ್ಮು ಕಾಶ್ಮೀರದ ರಜೌರಿ ಸೆಕ್ಟರ್​ನಲ್ಲಿ ಇಂದು ಪಾಕ್ ಕದನ ವಿರಾಮ ಉಲ್ಲಂಘನೆ ಮಾಡಿದೆ.

ಈ ಅಪ್ರಚೋದಿತ ದಾಳಿಯಲ್ಲಿ ಬಿಎಸ್​ಎಫ್ ಸಬ್​ ಇನ್ಸ್​ಪೆಕ್ಟರ್​ ಪಾವೊಟಿನ್ಸಾಟ್​ ಗೈಟ್ ಹುತಾತ್ಮರಾಗಿದ್ದಾರೆ ಎಂದು ಜಮ್ಮು ಗಡಿ ಭದ್ರತಾ ಪಡೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ. 

ಪಾವೊಟಿನ್ಸಾಟ್​ ಗೈಟ್ 59ನೇ ಬೆಟಾಲಿಯನ್​​ನ ಅಧಿಕಾರಿಯಾಗಿದ್ದು, ತಮ್ಮ ಸಹೋದ್ಯೋಗಿಗಳ ಪ್ರಾಣ ಕಾಪಾಡಿ ಹುತಾತ್ಮರಾಗಿದ್ದಾರೆ ಎಂದು ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ. 

ಯೋಧನ ಮೃತದೇಹವನ್ನು ಮಣಿಪುರದ ಇಂಫಾಲ್​ ಬಳಿಯ ಸ್ವಗ್ರಾಮಕ್ಕೆ ಕಳುಹಿಸಲಿದ್ದು, ಅಲ್ಲಿ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ಜಮ್ಮು ಬಿಎಸ್​ಎಫ್​ನ ಮಹಾನಿರ್ದೇಶಕ ಎನ್​.ಎಸ್​.ಜೈಸ್ವಾಲ್ ಮಾಹಿತಿ ನೀಡಿದ್ದಾರೆ.  

ಕದನ ವಿರಾಮ ಉಲ್ಲಂಘನೆ ನಡೆಸುತ್ತಿರುವ ಪಾಕ್‌ಗೆ ಭಾರತೀಯ ಸೇನೆ ತಕ್ಕ ಪ್ರತಿಕ್ರಿಯೆ ನೀಡುತ್ತಿದೆ.

Last Updated : Dec 1, 2020, 3:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.