ನವದೆಹಲಿ: ತಮ್ಮ ಅಧಿಕಾರದ ಅವಧಿಯಲ್ಲಿ ಭಾರತದ ಮೇಲೆ ಜೈಷೆ ಮೊಹಮ್ಮದ್ ನಡೆಸಿದ ನಡೆದ ಉಗ್ರ ದಾಳಿಗಳಿಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಸಾಥ್ ನೀಡಿತ್ತು ಎಂದು ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಹೇಳಿದ್ದಾರೆ.
ಸದ್ಯ ಜೈಷೆ ಸಂಘಟನೆ ಮೇಲೆ ತೆಗೆದುಕೊಂಡ ಕ್ರಮಗಳನ್ನು ಮುಷರಫ್ ಸ್ವಾಗತಿಸಿದ್ದು, 2003ರಲ್ಲಿ ಎರಡು ಬಾರಿ ತನ್ನನ್ನು ಹತ್ಯೆಗೈಯಲು ಇದೇ ಉಗ್ರಗಾಮಿಗಳು ಯತ್ನಿಸಿದ್ದರು ಎನ್ನುವುದನ್ನು ಹೇಳಿದ್ದಾರೆ.
ಮುಷರಫ್ ಅಧಿಕಾರದ ಅವಧಿಯಲ್ಲಿ ಯಾಕೆ ಜೈಷೆ ಸಂಘಟನೆಗಳ ಮೇಲೆ ಕ್ರಮ ಕೈಗೊಂಡಿಲ್ಲ ಎನ್ನುವ ಪ್ರಶ್ನೆಗೆ ಆ ದಿನಗಳು ಸದ್ಯಕ್ಕಿಂತ ತುಂಬಾ ಭಿನ್ನವಾಗಿತ್ತು ಎಂದಷ್ಟೇ ಹೇಳಿದ್ದಾರೆ.