ನವದೆಹಲಿ: ಕರ್ತಾಪುರ ಕಾರಿಡಾರ್ ವಿಚಾರವಾಗಿ ಪಾಕಿಸ್ತಾನ ಮುತುವರ್ಜಿ ವಹಿಸುತ್ತಿರುವುದರ ಹಿಂದೆ ಭಾರಿ ಕುತಂತ್ರ ಅಡಗಿದೆ ಎಂಬ ಆಘಾತಕಾರಿ ವಿಚಾರವನ್ನು ತಜ್ಞರು ಬಯಲು ಮಾಡಿದ್ದಾರೆ.
ಬಿಕ್ಕಟ್ಟು ನಿರ್ವಹಣೆ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಸಾಹ್ನಿ ಅವರು ಹೇಳುವಂತೆ, ಕರ್ತಾಪುರ ವಿಚಾರದಲ್ಲಿ ಸಿಖ್ರಿಗೆ ಒಳಿತು ಮಾಡುವ ಮನಸ್ಸೇನೂ ಪಾಕ್ಗೆ ಇಲ್ಲ. ಉಗ್ರರನ್ನು ಅಲ್ಲಲ್ಲಿ ನಿಯೋಜಿಸುವ ಕುತಂತ್ರದಿಂದಲೇ ಮುತುವರ್ಜಿ ವಹಿಸುತ್ತಿದೆ. ಸಿಖ್ರ ಪವಿತ್ರ ದೇಗುಲಕ್ಕೆ ಭೇಟಿ ನೀಡಿ, ಹಿಂದಿರುಗುವ ಮಂದಿ ಜತೆಗೆ ಉಗ್ರರನ್ನೂ ಕಳುಹಿಸುವ ತಂತ್ರಗಾರಿಕೆ ಪಾಕ್ನದ್ದಾಗಿದೆ.
-
Pak seeks to mobilise terrorists through Kartarpur Corridor, say experts
— ANI Digital (@ani_digital) July 9, 2019 " class="align-text-top noRightClick twitterSection" data="
Read @ANI Story | https://t.co/ktcAVwjDmP pic.twitter.com/QlsWjvzypm
">Pak seeks to mobilise terrorists through Kartarpur Corridor, say experts
— ANI Digital (@ani_digital) July 9, 2019
Read @ANI Story | https://t.co/ktcAVwjDmP pic.twitter.com/QlsWjvzypmPak seeks to mobilise terrorists through Kartarpur Corridor, say experts
— ANI Digital (@ani_digital) July 9, 2019
Read @ANI Story | https://t.co/ktcAVwjDmP pic.twitter.com/QlsWjvzypm
ಪಾಕಿಸ್ತಾನಕ್ಕೆ ಸಿಖ್ರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಹಾಗಿದ್ದಿದ್ದರೆ, ಅಲ್ಲಿ ಇಬ್ಬರು ಸಿಖ್ರ ಕೊಲೆಯಾದಾಗ ಕ್ರಮ ಕೈಗೊಳ್ಳಬೇಕಿತ್ತು. ಉಗ್ರರ ನಿಯೋಜನೆಗಾಗಿ ಕರ್ತಾಪುರ ಕಾರಿಡಾರ್ ಅನ್ನು ಪಾಕ್ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಸಾಹ್ನಿ ಆರೋಪಿಸಿದ್ದಾರೆ.
ಪಂಜಾಬ್ ಕಾಂಗ್ರೆಸ್ ವಕ್ತಾರ ರಾಜ್ ಕುಮಾರ್ ವರ್ಕಾ ಸಹ ಇದೇ ಮಾತುಗಳನ್ನಾಡಿದ್ದು, ಪಾಕ್ ಕರ್ತಾಪುರ ಕಾರಿಡಾರ್ ಮೂಲಕ ಅನುಕೂಲ ಪಡೆಯಲು ಮುಂದಾಗಿದೆ. ಇದೇ ರೀತಿ ಭಾರತ ವಿರೋಧಿ ಕೃತ್ಯಗಳನ್ನು ಎಸಗುತ್ತಿದ್ದರೆ ಸಹಿಸಲಾಗುವುದಿಲ್ಲ. ಈಗಾಗಲೇ ಪಂಜಾಬ್ ಸಿಎಂ, ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದು, ಇಂತಹ ಕೆಲಸಗಳನ್ನು ಮಾಡಿದರೆ ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ. ಸಿಖ್ರ ಬಗ್ಗೆ ಕಾಳಜಿ ಇದ್ದರೆ, ಪಾಕಿಸ್ತಾನದಲ್ಲಿರುವ ಸಿಖ್ ಸಮುದಾಯದವರ ರಕ್ಷಣೆಗೆ ಮುಂದಾಗಲಿ ಎಂದು ಹೇಳಿದ್ದಾರೆ.