ETV Bharat / bharat

ಅಭಿನಂದನ್​ ಬಂಧಿಸಿದ ಪಾಕ್​​ ಯೋಧನನ್ನು ಹೊಡೆದುರುಳಿಸಿದ ಭಾರತೀಯ ಸೇನೆ!

ಪಾಕ್​​ನ ಬಾಲಾಕೋಟ್​ ಮೇಲೆ ವಾಯುದಾಳಿ ನಡೆಸಿದ್ದ ಸಂದರ್ಭದಲ್ಲಿ ಪಾಕ್​ ಭೂಪ್ರದೇಶದಲ್ಲಿ ಬಿದ್ದಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್​ ವರ್ಧಮಾನ್​ ಬಂಧಿಸಿದ್ದ ಪಾಕ್​ ಕಮಾಂಡೋನನ್ನು ಭಾರತೀಯ ಸೇನೆ ಹತ್ಯೆಗೈದಿದೆ.

ಪಾಕ್​ ಕಮಾಂಡೋ ಹೊಡೆದುರುಳಿಸಿದ ಭಾರತೀಯ ಸೇನೆ
author img

By

Published : Aug 20, 2019, 7:03 PM IST

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ಬಾಲಾಕೋಟ್‌ನ ಉಗ್ರತಾಣಗಳ ಮೇಲೆ​ ಏರ್‌ ಸ್ಟೈಕ್‌ ನಡೆಸಿತ್ತು. ಈ ವೇಳೆ ಪಾಕಿಸ್ತಾನದ ವಶವಾಗಿದ್ದ ಭಾರತದ ವಿಂಗ್​ ಕಮಾಂಡರ್​ ಅಭಿನಂದನ್ ವರ್ಧಮಾನ್​ ಅವರನ್ನು ಅಲ್ಲಿನ ಕಮಾಂಡೋ ಅಹ್ಮದ್​ ಖಾನ್​ ಅರೆಸ್ಟ್​ ಮಾಡಿದ್ದರು. ಇದೀಗ ಭಾರತೀಯ ಸೇನೆ ಆತನನ್ನು ಹೊಡೆದುರುಳಿಸಿದೆ.

ಫೆಬ್ರವರಿ 27ರಂದು ಅಭಿನಂದನ್​ ವರ್ಧಮಾನ್,​​ ಮಿಗ್​​-21 ಯುದ್ಧವಿಮಾನದ ಮೂಲಕ ಪಾಕ್​ನ ಎಫ್‌-16 ಫೈಟರ್‌ ಜೆಟ್‌ನ್ನು ಹೊಡೆದುರುಳಿಸಿದ್ದರು. ಈ ವೇಳೆ ಪಾಕ್ ಪ್ರದೇಶದಲ್ಲಿ ಅಭಿನಂದನ್ ವಿಮಾನವೂ ಪತನವಾಗಿತ್ತು. ಪ್ಯಾರಾಚೂಟ್ ಮೂಲಕ ಕೆಳಗೆ ಬಿದ್ದ ಅವರನ್ನು ಪಾಕ್​ ಸೇನೆ ವಶಕ್ಕೆ ಪಡೆದಿತ್ತು. ಬಳಿಕ ನಡೆದ ಬೆಳವಣಿಗೆಗಳಲ್ಲಿ ಪಾಕ್ ಗೌರವಪೂರ್ವಕವಾಗಿ ಅವರನ್ನು ವಾಘಾ ಗಡಿ ಮೂಲಕ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು.

ಕಳೆದ ಕೆಲ ದಿನಗಳಿಂದ ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕ್​ ಕದನ ವಿರಾಮ ಉಲ್ಲಂಘಿಸಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಅದಕ್ಕೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡುತ್ತಿದ್ದಾರೆ. ಈ ವೇಳೆ ಆತ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

Intro:Body:

ಅಭಿನಂದನ್​ ಅರೆಸ್ಟ್​ ಮಾಡಿದ್ದ ಪಾಕ್​​ ಕಮಾಂಡೋನನ್ನ ಹೊಡೆದುರುಳಿಸಿದ ಭಾರತೀಯ ಸೇನೆ!

ನವದೆಹಲಿ: ಭಾರತೀಯ ಯೋಧರ ಮೇಲೆ ನಡೆದಿದ್ದ ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ವಾಯುಪಡೆ ಬಾಲಾಕೋಟ್​ ದಾಳಿ ನಡೆಸಿತ್ತು. ಈ ವೇಳೇ ಪಾಕಿಸ್ತಾನದ ವಶವಾಗಿದ್ದ ಭಾರತದ ವಿಂಗ್​ ಕಮಾಂಡರ್​ ಅಭಿನಂದನ್ ವರ್ತಮಾನ್​ನನ್ನು ಅಲ್ಲಿನ ಕಮಾಂಡೋ ಅಹ್ಮದ್​ ಖಾನ್​ ಅರೆಸ್ಟ್​ ಮಾಡಿದ್ದರು. ಇದೀಗ ಭಾರತೀಯ ಸೇನೆ ಅತನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ. 

ಗಡಿಯಲ್ಲಿ ಗುಂಡಿನ ದಾಳಿ ನಡೆಸುತ್ತಿದ್ದ ಪಾಕ್​ ಕಮಾಂಡೋ ಅಹ್ಮದ್​ ಖಾನ್​​ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ. ಫೆಬ್ರವರಿ 27ರಂದು ಅಭಿನಂದನ್​ ವರ್ದಮಾನ್​​ ಮಿಗ್​​ 21 ಯುದ್ಧ ವಿಮಾನವನ್ನು ತೆಗೆದುಕೊಂಡು ಪಾಕ್​ ಗಡಿಯೊಳಗೆ ನುಗ್ಗಿದ್ದ ವೇಳೆ ಅದು ಪತನಗೊಂಡಿದ್ದರಿಂದ ಅಭಿನಂದನ್​ ವರ್ಧಮಾನ್​ ಅವರನ್ನ ಪಾಕ್​ ಸೇನೆ ಅರೆಸ್ಟ್​ ಮಾಡಿತ್ತು. ಅದಾದ ಬಳಿಕ ಗೌರವ ಪೂರ್ವಕವಾಗಿ ವಾಘಾ ಗಡಿಯಲ್ಲಿ ಅವರನ್ನ ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು. 

 ಆಗಸ್ಟ್ 17ರಂದು ನಾಕ್ಯಾಲ್ ಪ್ರದೇಶದಲ್ಲಿ ಪಾಕ್ ಸೇನೆ ಗುಂಡಿನ ದಾಳಿ ನಡೆಸುತ್ತಿದ್ದ ವೇಳೇ ಅಹಮ್ಮದ್ ಖಾನ್ ಸಾವನ್ನಪ್ಪಿದ್ದಾನೆ ಎಂದು ಸೇನಾ ಮೂಲಗಳು ತಿಳಿಸಿವೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.