ನವದೆಹಲಿ: ನಂಕಾನಾ ಸಾಹಿಬ್ ಗುರುದ್ವಾರವನ್ನು ಅಪವಿತ್ರಗೊಳಿಸಿರುವುದು ಮತ್ತು ಪೇಶಾವರದಲ್ಲಿ ಸಿಖ್ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿರುವ ಬಗ್ಗೆ ಭಾರತ ತೀವ್ರ ಪ್ರತಿಭಟನೆ ಸಲ್ಲಿಕೆ ಮಾಡಿದೆ. ಇದೇ ವೇಳೆ ಪಾಕ್ ಹೈ ಕಮಿಷನರ್ ಸೈಯದ್ ಹೈದರ್ ಷಾಗೆ ಸಮನ್ಸ್ ನೀಡಿದೆ.
ಅಲ್ಪಸಂಖ್ಯಾತ ಸಮುದಾಯ ಸದಸ್ಯರ ಸುರಕ್ಷತೆ ಮತ್ತು ಕಲ್ಯಾಣವನ್ನು ಪಾಕಿಸ್ತಾನ ನೋಡಿಕೊಳ್ಳಬೇಕು ಎಂದು ರಾಜತಾಂತ್ರಿಕರಿಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. "ಪಾಕಿಸ್ತಾನದ ಚಾರ್ಜ್ ಡಿ ಅಫೈರ್ಸ್ ಸೈಯದ್ ಹೈದರ್ ಷಾ ಅವರನ್ನು ಇತ್ತೀಚೆಗೆ ನಂಕಾನಾ ಸಾಹಿಬ್ ನಲ್ಲಿ ನಡೆದ ಪವಿತ್ರ ಗುರುದ್ವಾರ ಶ್ರೀ ಜನಮ್ ಅಸ್ತಾನ್ ಅಪವಿತ್ರ ಕೃತ್ಯಗಳು ಮತ್ತು ಪೇಶಾವರದಲ್ಲಿ ಅಲ್ಪಸಂಖ್ಯಾತ ಸಿಖ್ ಸಮುದಾಯದ ಸದಸ್ಯರನ್ನು ಗುರಿಯಾಗಿಸಿ ಹತ್ಯೆ ಮಾಡಿರುವ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ ಪಾಕಿಸ್ತಾನದ ಹೈ ಕಮಿಷನರ್ಗೆ ಸಮನ್ಸ್ ನೀಡಲಾಗಿದೆ" ಎಂದು ವಿದೇಶಾಂಗ ಇಲಾಖೆ ವಕ್ತಾರರು ತಿಳಿಸಿದ್ದಾರೆ.