ನವದೆಹಲಿ: 72ನೇ ಗಣರಾಜ್ಯೋತ್ಸವ ಮುನ್ನಾದಿನ ವಿವಿಧ ಗಣ್ಯರಿಗೆ ಪದ್ಮ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಕರ್ನಾಟಕದ ಇಬ್ಬರಿಗೆ ಅತ್ಯುನ್ನತ ಗೌರವ ಪ್ರಶಸ್ತಿ ನೀಡಲಾಗಿದೆ.
ವೈದ್ಯಕೀಯ ವಿಭಾಗದಲ್ಲಿ ರಾಜ್ಯದ ಡಾ. ಬೆಳ್ಳೆ ಮೋನಪ್ಪ ಹೆಗ್ಡೆ ಅವರಿಗೆ ಪದ್ಮವಿಭೂಷಣ, ಸಾಹಿತ್ಯ ಹಾಗೂ ಶಿಕ್ಷಣಕ್ಕಾಗಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಘೋಷಣೆ ಮಾಡಲಾಗಿದೆ.
7 ಸಾಧಕರಿಗೆ ಪದ್ಮವಿಭೂಷಣ, 10 ಗಣ್ಯರಿಗೆ ಪದ್ಮ ಭೂಷಣ ಹಾಗೂ ವಿವಿಧ ಕ್ಷೇತ್ರದ 102 ಸಾಧಕರಿಗೆ ಪದ್ಮಶ್ರೀ ಗೌರವ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಪದ್ಮವಿಭೂಷಣ (ಮರಣೋತ್ತರ) ನೀಡಲಾಗಿದೆ.
ಪದ್ಮವಿಭೂಷಣ ಗೌರವ ಪಡೆದ ಗಣ್ಯರು
ಶಿಂಜೋ ಅಬೆ (ಜಪಾನ್ ಮಾಜಿ ಪ್ರಧಾನಿ)
ಎಸ್ಪಿ ಬಾಲಸುಬ್ರಹ್ಮಣ್ಯಂ (ಕಲೆ, ಮರಣೋತ್ತರ)
ಡಾ. ಬೆಳ್ಳೆ ಮೋನಪ್ಪ ಹೆಗ್ಡೆ (ವೈದ್ಯಕೀಯ)
ನರೀಂದರ್ ಸಿಂಗ್ ಕಪನಿ (ವಿಜ್ಞಾನ & ಎಂಜನಿಯರಿಂಗ್, ಮರಣೋತ್ತರ)
ಮೌಲಾನ್ ವಹಿದುದ್ದೀನ್ ಖಾನ್ (ಆದ್ಯಾತ್ಮ)
ಬಿಬಿ ಲಾಲ್ (ಪ್ರಾಚ್ಯವಸ್ತು ಶಾಸ್ತ್ರ)
ಸುದರ್ಶನ್ ಸಾಹು (ಕಲೆ)
ಪದ್ಮ ಭೂಷಣ ಗೌರವ
ಕೃಷ್ಣನ್ ನಾಯರ್ ಶಾಂತಕುಮಾರಿ ಚಿತ್ರಾ (ಕಲೆ)
ತರುಣ್ ಗೋಗೊಯ್ (ಸಾರ್ವಜನಿಕ ಸೇವೆ)
ಚಂದ್ರಶೇಖರ್ ಕಂಬಾರ (ಸಾಹಿತ್ಯ & ಶಿಕ್ಷಣ)
ಸುಮಿತ್ರಾ ಮಹಾಜನ್ (ಸಾರ್ವಜನಿಕ ಸೇವೆ)
ನೃಪೇಂದ್ರ ಮಿಶ್ರಾ (ನಾಗರಿಕ ಸೇವೆ)
ರಾಮವಿಲಾಸ್ ಪಾಸ್ವಾನ್ (ಸಾರ್ವಜನಿಕ ಸೇವೆ, ಮರಣೋತ್ತರ)
ಕೇಶುಬಾಯಿ ಪಟೇಲ್ (ಸಾರ್ವಜನಿಕ ಸೇವೆ, ಮರಣೋತ್ತರ)
ಕಲ್ಬೆ ಸಾಧಿಕ್ (ಆಧ್ಯಾತ್ಮ)
ರಜನಿಕಾಂತ್ ದೇವಿದಾಸ್ ಶ್ರಾಫ್ (ವಾಣಿಜ್ಯ & ಕೈಗಾರಿಕೆ)
ತರಲೋಚನ್ ಸಿಂಗ್ (ಸಾರ್ವಜನಿಕ ಸೇವೆ)
ಕರ್ನಾಟಕದ ಮೂವರಿಗೆ ಪದ್ಮಶ್ರೀ
ಜೋಗತಿ ಮಂಜಮ್ಮ (ಪದ್ಮಶ್ರೀ, ಕಲೆ)
ರಂಗಸ್ವಾಮಿ ಲಕ್ಷ್ಮೀನಾರಾಯಣ ಕಶ್ಯಪ್ (ಸಾಹಿತ್ಯ ಮತ್ತು ಶಿಕ್ಷಣ)
ಕೆ.ವೈ. ವೆಂಕಟೇಶ್ (ಕ್ರೀಡೆ)