ETV Bharat / bharat

12 ರಾಜ್ಯಗಳಲ್ಲಿ ಶೇ.60 ಕ್ಕೂ ಹೆಚ್ಚು ಮಹಿಳೆಯರು ಇಂಟರ್​ನೆಟ್ ಬಳಸಿಲ್ಲ: ಸಮೀಕ್ಷೆ ವರದಿ ಬಹಿರಂಗ - ನವದೆಹಲಿ ಇತ್ತಿಚಿನ ಸುದ್ದಿ

ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ. 60 ಕ್ಕೂ ಹೆಚ್ಚು ಮಹಿಳೆಯರು ಎಂದಿಗೂ ಇಂಟರ್​ನೆಟ್​ ಬಳಸಿಲ್ಲ ಎಂಬುದನ್ನು ಬಹಿರಂಗಪಡಿಸಿದೆ.

ಸಮೀಕ್ಷೆ ವರದಿ ಬಹಿರಂಗ
ಸಮೀಕ್ಷೆ ವರದಿ ಬಹಿರಂಗ
author img

By

Published : Dec 15, 2020, 2:30 PM IST

ನವದೆಹಲಿ: ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಶೇ.60ರಷ್ಟು ಮಹಿಳೆಯರು ಇಂಟರ್​ನೆಟ್​ ಬಳಸುವುದಿಲ್ಲ ಎಂದು ಇತ್ತೀಚಿನ ರಾಷ್ಟ್ರೀಯ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ. ಈ ಸಮೀಕ್ಷೆಯು ದೇಶದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿತ್ತು.

ಮಹಿಳೆಯರಿಗೆ ಹೋಲಿಸಿದರೆ ಪುರುಷರು ಹೆಚ್ಚಿನ ಶೇಕಡಾವಾರು ಇಂಟರ್​ನೆಟ್ ಬಳಸಿದ್ದಾರೆ ಎಂದು ತಿಳಿದುಬಂದಿದೆ. ಆಂಧ್ರಪ್ರದೇಶ (ಶೇ.48.8), ಅಸ್ಸೋಂ (ಶೇ.42.3), ಬಿಹಾರ (ಶೇ.43.6), ಮೇಘಾಲಯ (ಶೇ.42.1), ತ್ರಿಪುರ (ಶೇ.45.7) ಪಶ್ಚಿಮ ಬಂಗಾಳ (ಶೇ.46.7), ಅಂಡಮಾನ್ ಮತ್ತು ನಿಕೋಬಾರ್ ದ್ವೀಪ (ಶೇ.46.5)ಗಳಲ್ಲಿ ಸುಮಾರು ಶೇ.50ಕ್ಕಿಂತ ಹೆಚ್ಚು ಪುರುಷರು ಇಂಟರ್​ನೆಟ್ ಬಳಸಿದ್ದಾರೆ.

ಸಮೀಕ್ಷೆಯ ಪ್ರಕಾರ, ಆಂಧ್ರಪ್ರದೇಶ (ಶೇ .68.6), ಬಿಹಾರ (ಶೇ 57.8) ಮತ್ತು ತೆಲಂಗಾಣ (ಶೇ .66.6) ಮಹಿಳೆಯರು ಕಡಿಮೆ ಸಾಕ್ಷರತೆಯ ಪ್ರಮಾಣವನ್ನು ಹೊಂದಿದ್ದರೆ, ಕೇರಳ (ಶೇ .98.3), ಲಕ್ಷದ್ವೀಪ (ಶೇ .96.5) ಮಿಜೋರಾಂ (ಶೇಕಡಾ 94.4)ನ ಮಹಿಳೆಯರು ಹೆಚ್ಚಿನ ಸಾಕ್ಷರತೆಯ ಪ್ರಮಾಣವನ್ನು ಹೊಂದಿದ್ದಾರೆ.

ಓದಿ: ವಿಧಾನ ಪರಿಷತ್​ನಲ್ಲಿ ಹೈಡ್ರಾಮಾ - ಬಿಜೆಪಿ-ಕಾಂಗ್ರೆಸ್​ ಸದಸ್ಯರ ಮಧ್ಯೆ ಕಿತ್ತಾಟ

ಆಂಧ್ರಪ್ರದೇಶ (ಶೇ. 79.5) ಮತ್ತು ಬಿಹಾರ (ಶೇ. 78.5) ಪುರುಷರಲ್ಲಿ ಕಡಿಮೆ ಸಾಕ್ಷರತೆಯ ಪ್ರಮಾಣವನ್ನು ಹೊಂದಿದ್ದರೆ, ಕೇರಳ (ಶೇ. 98.2) ಮತ್ತು ಲಕ್ಷದ್ವೀಪ(ಶೇ. 99.1)ದ ಪುರುಷರು ಅತಿ ಹೆಚ್ಚು ಸಾಕ್ಷರತೆ ಪ್ರಮಾಣವನ್ನು ಹೊಂದಿದ್ದಾರೆ.

ಆಂಧ್ರಪ್ರದೇಶ (ಶೇ.39.6), ಅಸ್ಸೋಂ (ಶೇ.29.6), ಬಿಹಾರ (ಶೇ.28.8), ಗುಜರಾತ್ (ಶೇ. 33.8), ಮೇಘಾಲಯ (ಶೇ.35.1), ತ್ರಿಪುರ (ಶೇ.23.2), ಪಶ್ಚಿಮ ಬಂಗಾಳ (ಶೇ.32.9) ಮತ್ತು ದಾದ್ರಾ, ನಗರ ಹವೇಲಿ, ದಮನ್ ಮತ್ತು ಡಿಯು (ಶೇ.35.8). ಶೇಕಡಾ 50 ಕ್ಕಿಂತ ಕಡಿಮೆ ಪುರುಷರು ಒಂಬತ್ತು ರಾಜ್ಯಗಳಲ್ಲಿ 10 ನೇ ತರಗತಿ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷಣವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಜನಸಂಖ್ಯೆ, ಆರೋಗ್ಯ, ಕುಟುಂಬ ಯೋಜನೆ ಮತ್ತು ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ಸೂಚಕಗಳ ಮಾಹಿತಿಯನ್ನು ಸಂಗ್ರಹಿಸಲು ಎನ್‌ಎಫ್‌ಹೆಚ್‌ಎಸ್ -5 (2019-20) ಸಮೀಕ್ಷೆಯನ್ನು 6.1 ಲಕ್ಷ ಮಾದರಿ ಮನೆಗಳಲ್ಲಿ ನಡೆಸಲಾಯಿತು. 17 ರಾಜ್ಯಗಳಾದ ಅಸ್ಸೋಂ, ಬಿಹಾರ, ಮಣಿಪುರ, ಮೇಘಾಲಯ, ಸಿಕ್ಕೀಂ, ತ್ರಿಪುರ, ಆಂಧ್ರಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಕರ್ನಾಟಕ, ಗೋವಾ, ಪಶ್ಚಿಮ ಮಹಾರಾಷ್ಟ್ರ ಬಂಗಾಳ, ಮಿಜೋರಾಂ, ಕೇರಳ, ಲಕ್ಷದ್ವೀಪ, ದಾದ್ರಾ ನಗರ ಹವೇಲಿ ಮತ್ತು ದಮನ್ ಮತ್ತು ಡಿಯುನಲ್ಲಿ ಈಗ ಹಂತ -1 ಸಮೀಕ್ಷೆ ನಡೆದು ಮಾಹಿತಿ ಬಿಡುಗಡೆಯಾಗಿದೆ. ಇತರ ರಾಜ್ಯಗಳನ್ನು ಒಳಗೊಂಡ ಎರಡನೇ ಹಂತವನ್ನು ಮುಂದಿನ ವರ್ಷ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.