ETV Bharat / bharat

ಬಿನ್ ಲಾಡೆನ್​ ನಮ್ ಹೀರೋ: ಪಾಕ್​ ಮಾಜಿ ಅಧ್ಯಕ್ಷ ಮುಷರಫ್​ ವಿಡಿಯೋ ವೈರಲ್​! - ಪಾಕ್​ ಮಾಜಿ ಅಧ್ಯಕ್ಷ ಮುಷರಫ್

ಅಮೆರಿಕದ ಅವಳಿ ವಾಣಿಜ್ಯ ಕಟ್ಟಡ ಧ್ವಂಸಗೊಳಿಸಿ ನೂರಾರು ಜನ ಅಮಾಯಕರ ಸಾವಿಗೆ ಕಾರಣವಾಗಿದ್ದ ಭಯೋತ್ಪಾದಕ ಒಸಾಮಾ ಬಿನ್​ ಲಾಡೆನ್​ 'ಪಾಕ್​ನ ಹೀರೋ' ಎಂದು ಅಲ್ಲಿನ ಮಾಜಿ ಸೇನಾಧ್ಯಕ್ಷ ಪರ್ವೇಜ್ ಮುಷರಫ್ ವಿಚಿತ್ರ ಹೇಳಿಕೆ ನೀಡಿದ್ದಾರೆ.

ಪಾಕ್​ ಮಾಜಿ ಅಧ್ಯಕ್ಷ ಮುಷರಫ್
author img

By

Published : Nov 14, 2019, 1:08 PM IST

Updated : Nov 14, 2019, 1:23 PM IST

ಇಸ್ಲಾಮಾಬಾದ್​​: ಅಮೆರಿಕದ ಅವಳಿ ವಾಣಿಜ್ಯ ಕಟ್ಟಡ ಧರೆಗುರುಳಿಸಿದ್ದ ಅಲ್ ಖೈದಾ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಕುರಿತು ಇದೀಗ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್​ ಮುಷರಫ್​ ಅಚ್ಚರಿ ಹುಟ್ಟಿಸುವ ಹೇಳಿಕೆ ನೀಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್​ ಆಗಿದೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಮುಷರಫ್,​ ಒಸಾಮಾ ಬಿನ್​ ಲಾಡೆನ್​ ಹಾಗೂ ಜಲಾಲುದ್ದೀನ್​ ಹಖಾನಿ ನಮ್ಮ ದೇಶದ ಹೀರೋಗಳು ಎಂದಿದ್ದಾರೆ. ಇದೇ ವೇಳೆ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಕೆಲವರನ್ನ ನಾವು ತರಬೇತಿಗೊಳಿಸಿ ಭಾರತೀಯ ಯೋಧರ ವಿರುದ್ಧ ಹೋರಾಡಲು ಮುಂದೆ ಬಿಟ್ಟಿದ್ದೆವು ಎಂಬ ಆಘಾತಕಾರಿ ಸತ್ಯವನ್ನೂ ಹೊರಹಾಕಿದ್ದಾರೆ.

ಗಡಿಯಲ್ಲಿ ಭಾರತದ ವಿರುದ್ಧ ಹೋರಾಟ ಮಾಡುವ ಪ್ರತಿಯೊಬ್ಬರೂ ಪಾಕ್​ನ ಹೀರೋಗಳು ಎಂದು ಹೇಳಿರುವ ಪರ್ವೇಜ್​, ಅವರನ್ನು ನಾವು ಬಹಿರಂಗವಾಗಿ ಭಾರತೀಯ ಸೇನೆಯ ವಿರುದ್ಧ ಹೋರಾಡಲು ಅಣಿಗೊಳಿಸುತ್ತಿದ್ದೆವು ಎಂದು ತಿಳಿಸಿದ್ದಾರೆ.

  • Gen Musharraf blurts that militants were nurtured and touted as 'heroes' to fight in Kashmir. If it resulted in destruction of two generations of Pashtuns it didn't matter. Is it wrong to demand Truth Commission to find who devised self serving policies that destroyed Pashtuns? https://t.co/5Q2LOvl3yb

    — Farhatullah Babar (@FarhatullahB) November 13, 2019 " class="align-text-top noRightClick twitterSection" data=" ">

ವಿಡಿಯೋದಲ್ಲಿರುವುದು ಏನು?
1979ರಲ್ಲಿ ನಾವು ಅಫ್ಘಾನಿಸ್ತಾನದ ಕೆಲ ಪ್ರದೇಶದಲ್ಲಿ ಮಿಲಿಟರಿ ಕೇಂದ್ರಗಳನ್ನು ಆರಂಭಿಸಿದ್ದೆವು. ಪಾಕಿಸ್ತಾನಕ್ಕೆ ಅನುಕೂಲವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಇದೇ ವೇಳೆ ಕೆಲ ಉಗ್ರ ಸಂಘಟನೆಗಳಿಗೆ ತರಬೇತಿ ನೀಡಿ ಶಸ್ತ್ರಾಸ್ತ್ರಗಳನ್ನೂ ನಾವು ನೀಡಿದ್ದೇವೆ. ಭಾರತ-ಪಾಕ್ ಗಡಿಯಲ್ಲಿ ಭಾರತೀಯ ಯೋಧರ ವಿರುದ್ಧ ಹೋರಾಡಲು ಅವರನ್ನು ನಾವು ಸಜ್ಜುಗೊಳಿಸಿ ಕಳುಹಿಸಿದ್ದೆವು. ದಿನಕಳೆದಂತೆ ಪರಿಸ್ಥಿತಿ ಬದಲಾಗಿದ್ದರಿಂದ ಇದೀಗ ಅವರನ್ನು ವಿಲನ್​ಗಳಂತೆ ನೋಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ರಾಜಕಾರಣಿ ಫರಾತುಲ್ಲಾ ಬಾಬರ್ ಈ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ. ಭಯೋತ್ಪಾದಕ ಕೃತ್ಯಗಳಿಗೆ ಪಾಕ್‌ ಪ್ರತ್ಯಕ್ಷ ಹಾಗು ಪರೋಕ್ಷ ಬೆಂಬಲ ವಿಚಾರ ಗುಟ್ಟಾಗೇನೂ ಉಳಿದಿಲ್ಲ. ಈ ವಿಚಾರವನ್ನು ಅಲ್ಲಿನ ಮಾಜಿ ಅಧ್ಯಕ್ಷರೇ ಒಪ್ಪಿಕೊಂಡಿದ್ದು ಎಲ್ಲೆಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Intro:Body:

ಬಿನ್ ಲಾಡೆನ್​ ಪಾಕ್​​ ದೇಶದ ಹೀರೋ... ಪಾಕ್​ ಮಾಜಿ ಅಧ್ಯಕ್ಷ ಮುಷರಫ್​ ವಿಡಿಯೋ ವೈರಲ್​! 

ಇಸ್ಲಾಮಾಬಾದ್​​: ಅಮೆರಿಕದ ಅವಳಿ ವಾಣಿಜ್ಯ ಕಟ್ಟಡ ಧರೆಗುಳಿಸಿದ್ದ ಅಲ್ ಖೈದಾ ಸಂಸ್ಥಾಪಕ ಒಸಾಮಾ ಬಿನ್ ಲಾಡೆನ್ ಕುರಿತು ಇದೀಗ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್​ ಮುಷರಫ್​ ಹೇಳಿದ್ದಾರೆ ಎನ್ನಲಾಗಿರುವ ವಿಡಿಯೋ ವೈರಲ್​ ಆಗಿದೆ. 

ಖಾಸಗಿ ಸುದ್ದಿ ವಾಹಿನಿವೊಂದಕ್ಕೆ ಸಂದರ್ಶನ ನೀಡುತ್ತಿದ್ದ ವೇಳೆ ಮುಷರಫ್​ ಈ ರೀತಿಯ ಹೇಳಿಕೆ ನೀಡಿದ್ದು, ಒಸಾಮಾ ಬಿನ್​ ಲಾಡೆನ್​ ಹಾಗೂ ಜಲಾಲುದ್ದೀನ್​ ಹಖಾನಿ ನಮ್ಮ ದೇಶದ ಹೀರೋಗಳು ಎಂದಿದ್ದಾರೆ. ಇದೇ ವೇಳೆ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಕೆಲವರನ್ನ ನಾವು ತರಬೇತಿಗೊಳಿಸಿ ಭಾರತೀಯ ಯೋಧರ ವಿರುದ್ಧ ಹೋರಾಡಲು ಮುಂದೆ ಬಿಟ್ಟಿದ್ದೇವು ಎಂಬ ಮಾತನ್ನು ಹೊರಹಾಕಿದ್ದಾರೆ. 

ಗಡಿಯಲ್ಲಿ ಭಾರತದ ವಿರುದ್ಧ ಹೋರಾಟ ಮಾಡುವ ಪ್ರತಿಯೊಬ್ಬರು ಪಾಕ್​ನ ಹೀರೋಗಳು ಎಂದು ಹೇಳಿರುವ ಪರ್ವೇಜ್​, ಅವರನ್ನು ನಾವು ಬಹಿರಂಗವಾಗಿ ಭಾರತೀಯ ಸೇನೆ ವಿರುದ್ಧ ಹೋರಾಡುವಂತೆ ಪ್ರೇರಣೆ ಮಾಡುತ್ತಿದ್ದೇವು ಎಂದು ತಿಳಿಸಿದ್ದಾರೆ. 

ವಿಡಿಯೋದಲ್ಲಿರುವುದು ಏನು!? 

1979ರಲ್ಲಿ ನಾವು ಅಫ್ಘಾನಿಸ್ತಾನದ ಕೆಲ ಪ್ರದೇಶದಲ್ಲಿ ಮಿಲಿಟರಿ ಪಡೆ ಆರಂಭ ಮಾಡಿದ್ದೇವು. ಆ ವೇಳೆ ಪಾಕಿಸ್ತಾನಕ್ಕೆ ಅನುಕೂಲವಾಗುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ಇದೇ ವೇಳೆ ಕೆಲ ಉಗ್ರ ಸಂಘಟನೆಗಳಿಗೆ ತರಬೇತಿ ಮಾಡಿ, ಅವರಿಗೆ ಶಸ್ತ್ರಾಸ್ತ್ರ ಸಹ ನೀಡಿದ್ದೇವೆ. ಅದೇ ವೇಳೆ ಗಡಿಯಲ್ಲಿ ಭಾರತೀಯ ಯೋಧರ ವಿರುದ್ಧ ಹೋರಾಡಲು ಅವರನ್ನ ತರಬೇತಿ ಸಹಗೊಳಿಸಲಾಯಿತು. ದಿನಕಳೆದಂತೆ ಪರಿಸ್ಥಿತಿ ಬದಲಾಗಿದ್ದರಿಂದ ಇದೀಗ ಅವರನ್ನ ವಿಲನ್​ಗಳಂತೆ ನೋಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಪಾಕಿಸ್ತಾನದ ರಾಜಕಾರಣಿ ಫರಾತುಲ್ಲಾ ಬಾಬರ್ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾರೆ.ಇದಕ್ಕೆ ಎಲ್ಲಡೆಯಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. 

Conclusion:
Last Updated : Nov 14, 2019, 1:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.