ETV Bharat / bharat

ಮೇಲ್ಮನೆಯಲ್ಲಿ ಕಳೆದ 68 ವರ್ಷಗಳಲ್ಲಿ ಹೆಚ್ಚು ವರ್ಷ ಪ್ರತಿಪಕ್ಷಗಳದ್ದೇ ಮೇಲುಗೈ: ವೆಂಕಯ್ಯ ನಾಯ್ಡು - ರಾಜ್ಯಸಭೆ ಸುದ್ದಿ

ರಾಜ್ಯಸಭೆಯು ಇದುವರೆಗೆ 5,472 ಅಧಿವೇಶನಗಳನ್ನು ನಡೆಸಿದೆ. ಈ ವರ್ಷದ ಬಜೆಟ್ ಅಧಿವೇಶನದವರೆಗೆ 3,857 ಮಸೂದೆಗಳನ್ನು ಅಂಗೀಕರಿಸಿದೆ. ಪ್ರಸ್ತುತ ಇರುವ ಸರ್ಕಾರಕ್ಕೆ ರಾಜ್ಯ ಸಭೆಯಲ್ಲಿ ಬಹುಮತವಿಲ್ಲದಿದ್ದರೂ GST, IBC, ತ್ರಿವಳಿ ತಲಾಖ್, ಜಮ್ಮು ಮತ್ತು ಕಾಶ್ಮೀರ ಮರು ಸಂಘಟನೆ, ಪೌರತ್ವ ತಿದ್ದುಪಡಿ ಸೇರಿದಂತೆ ಹಲವಾರು ಪ್ರಮುಖ ಮಸೂದೆಗಳನ್ನು ಅಂಗೀಕರಿಸಿದೆ ಎಂದು ರಾಜ್ಯಸಭಾ ಸ್ಪೀಕರ್​ ಎಂ. ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

Naidu
ವೆಂಕಯ್ಯ ನಾಯ್ಡು
author img

By

Published : May 13, 2020, 3:21 PM IST

ನವದೆಹಲಿ: ರಾಜ್ಯಸಭೆಯಲ್ಲಿ ಕಳೆದ 68 ವರ್ಷಗಳಲ್ಲಿ 39 ವರ್ಷ ಪ್ರತಿಪಕ್ಷಗಳು ಮೇಲುಗೈ ಸಾಧಿಸಿವೆ. ಆದರೂ ಇದು ಯಾವುದೇ ಕಾನೂನು ರಚನೆಗೆ ಪ್ರತಿಕೂಲ ಪರಿಣಾಮ ಬೀರಲಿಲ್ಲ ಎಂದು ರಾಜ್ಯಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.

ಮೊದಲ ಅಧಿವೇಶನವಾಗಿ 68 ನೇ ವಾರ್ಷಿಕೋತ್ಸವದಂದು ಮೇಲ್ಮನೆಯ ಪ್ರಯಾಣವನ್ನು ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿವರಿಸುವಾಗ ಅವರು ಈ ವಿಚಾರ ತಿಳಿಸಿದ್ದಾರೆ.

"ರಾಜ್ಯಸಭೆ ಮತ್ತು ಲೋಕಸಭೆಯ ಚುನಾವಣಾ ವಿಧಾನಗಳು ಮತ್ತು ಅಧಿಕಾರಾವಧಿಗಳು ವಿಭಿನ್ನವಾಗಿವೆ. ಇದು ಪ್ರಸ್ತುತ ಇರುವ ಸರ್ಕಾರವು ಲೋಕಸಭೆಯಲ್ಲಿ ಅಗತ್ಯವಿರುವಂತೆ ಬಹುಮತವನ್ನು ಹೊಂದಿ, ರಾಜ್ಯಸಭೆಯಲ್ಲಿ ಸಂಖ್ಯೆಗಳನ್ನು ಹೊಂದಿರದ ಪರಿಸ್ಥಿತಿಗೆ ಕಾರಣವಾಗಬಹುದು. ಇದೇ ಈವರೆಗಿನ ವರ್ಷಗಳಲ್ಲಿ ಆಗಿವೆ ಎಂದು ನಾಯ್ಡು ತಿಳಿಸಿದ್ದಾರೆ.

ರಾಜ್ಯಸಭೆಯು ಇದುವರೆಗೆ 5,472 ಅಧಿವೇಶನಗಳನ್ನು ನಡೆಸಿದೆ. ಈ ವರ್ಷದ ಬಜೆಟ್ ಅಧಿವೇಶನದವರೆಗೆ 3,857 ಮಸೂದೆಗಳನ್ನು ಅಂಗೀಕರಿಸಿದೆ. ಪ್ರಸ್ತುತ ಇರುವ ಸರ್ಕಾರಕ್ಕೆ ರಾಜ್ಯ ಸಭೆಯಲ್ಲಿ ಬಹುಮತವಿಲ್ಲದಿದ್ದರೂ GST, IBC, ತ್ರಿವಳಿ ತಲಾಖ್, ಜಮ್ಮು ಮತ್ತು ಕಾಶ್ಮೀರ ಮರು ಸಂಘಟನೆ, ಪೌರತ್ವ ತಿದ್ದುಪಡಿ ಸೇರಿದಂತೆ ಹಲವಾರು ಪ್ರಮುಖ ಮಸೂದೆಗಳನ್ನು ಮೇಲ್ಮನೆ ಅಂಗೀಕರಿಸಿದೆ. ರಾಜ್ಯಸಭೆಯ ವಿರುದ್ಧ ಕಾನೂನು ರಚನೆಯಲ್ಲಿ ಯಾವುದೇ ಅಡ್ಡಿಪಡಿಸಲು ಸಾಧ್ಯವಿಲ್ಲ ಎಂಬುದನ್ನು ಇದು ಸೂಚಿಸುತ್ತದೆ ಎಂದು ಅವರು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.