ETV Bharat / bharat

ಬೂಟಾಟಿಕೆ ಬಿಡಿ: ಕೋವಿಡ್ ನಂತರದ ಜಗತ್ತಿನ ಅಗತ್ಯತೆ ಪೂರೈಸಲು ಉತ್ತಮ ಶಿಕ್ಷಣ ಆರಂಭಿಸಿ - ಕೋವಿಡ್ ನಂತರದ ಜಗತ್ತಿನ ಅಗತ್ಯತೆ

ಶಿಕ್ಷಣ ಸರ್ಕಾರವೇ ಕೊಡಬೇಕೆಂಬ ತಪ್ಪು ಕಲ್ಪನೆ ಅನ್ವಯ ಭಾರತವು ಸರ್ಕಾರಿ ಶಾಲೆಗಳ ಮೇಲೆ ಸಾಕಷ್ಟು ಬಂಡವಾಳ ಹೂಡಿಕೆ ಮಾಡಿದೆ. ಆದರೆ ಅದರ ಫಲವು ತೀರಾ ಶೋಚನೀಯವಾಗಿದೆ.

Open up education to meet the post COVID world
ಕೋವಿಡ್ ನಂತರದ ಜಗತ್ತಿನ ಅಗತ್ಯತೆ ಪೂರೈಸಲು ಉತ್ತಮ ಶಿಕ್ಷಣ ಆರಂಭಿಸಿ
author img

By

Published : Jul 9, 2020, 9:27 PM IST

ಹೈದರಾಬಾದ್: ಹೇಳೋದೊಂದು ಮಾಡೋದೊಂದು ವ್ಯಕ್ತಿತ್ವದ ವ್ಯಕ್ತಿಗಳ ಬಗ್ಗೆ ಜಾಗರೂಕವಾಗಿ ಇರಿ ಎಂದು ಮಹಾಭಾರತದಲ್ಲಿ ವಿಧುರ ಹೇಳಿದ್ದಾನೆ. ಕಪಟಿಗಳ ಜೊತೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಇರುವಂತೆ ವಿಧುರ, ರಾಜ ಧೃತರಾಷ್ಟ್ರನಿಗೆ ಸಲಹೆ ನೀಡುತ್ತಿದ್ದರು. ಆದರೆ ಅವರು ಹೇಳಿರುವ ಮಾತುಗಳು ಸುಲಭವಾಗಿ ಭಾರತದ ಶಿಕ್ಷಣ ಸ್ಥಾಪನೆಯನ್ನು ಉಲ್ಲೇಖಿಸುತ್ತಿರಬಹುದು ಎಂಬಂತೆ ಭಾಸವಾಗುತ್ತದೆ. ಇಲ್ಲಿ ಹಲವು ತಪ್ಪು ಕಲ್ಪನೆಗಳಲ್ಲಿ ಗತಕಾಲದಿಂದಲೂ ಕಪಟತನ ಬೇರೂರಿವೆ.

ನಮ್ಮ ತಪ್ಪು ಕಲ್ಪನೆಗಳಲ್ಲಿ ಒಂದು ಉದಾಹರಣೆ ಎಂದರೆ, ಜನರ ಒಳಿತಿಗಾಗಿ ಸರ್ಕಾರವೇ ಶಿಕ್ಷಣ ಕೊಡಬೇಕು ಎಂಬುದು. ಆದರೂ, ಈ ಕೆಲ ಅಂಶಗಳ ಆಧಾರದ ಮೇಲೆ ಖಾಸಗಿ ಶಾಲೆಗಳನ್ನೂ ಸಹಿಸಿಕೊಂಡು ನಡೆಯುತ್ತಿದ್ದೇವೆ.

ಖಾಸಗಿ ಶಾಲೆಗಳು ಲಾಭ ಮಾಡುತ್ತವೆ ಎಂಬುದು ಎಲ್ಲರಿಗೂ ಗೊತ್ತಿದ್ದರೂ ಅವುಗಳು ಲಾಭ ಮಾಡದಂತೆ ನಿರ್ಬಂಧಿಸಲಾಗಿದೆ ಎಂಬ ಕಪಟತನದ ಸುಳ್ಳು ನಂಬಿಕೊಂಡು ಹೋಗುತ್ತಿದ್ದೇವೆ.

ನಮ್ಮ ಲೈಸೆನ್ಸ್‌ ರಾಜ್‌ ಸಂಸ್ಕೃತಿಯಲ್ಲಿ ಸರ್ಕಾರವು ಖಾಸಗಿ ಶಾಲೆಗಳ ವರ್ತನೆಗೆ ಸಂಕೋಲೆ ಹಾಕಬೇಕು. ಮುಂದುವರಿದ ದೇಶಗಳಲ್ಲಿ ಶಿಕ್ಷಣವನ್ನ ಸರ್ಕಾರವೇ ಕೊಡುತ್ತದೆ ಎಂಬ ತಪ್ಪು ತಿಳುವಳಿಕೆಯಿಂದಾಗಿ ಈ ತಪ್ಪು ಕಲ್ಪನೆಗಳು ಬಂದಿವೆ. ಸತ್ಯವೇನೆಂದರೆ, ಅಮೆರಿಕ, ಬ್ರಿಟನ್‌, ಮತ್ತು ಸಮಾಜವಾದಿ ಸ್ಕ್ಯಾಂಡಿನೇವಿಯನ್‌ ದೇಶಗಳಲ್ಲೂ ಶಿಕ್ಷಣದಲ್ಲಿ ಸುಧಾರಣೆ ಮಾಡಿದ್ದು, ಖಾಸಗಿ ಶಾಲೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮುಂದುವರಿದ ಹಲವು ದೇಶಗಳಲ್ಲಿ ಖಾಸಗಿಯಾಗಿ ನಡೆಸುವ/ಸರ್ಕಾರಿ ಅನುದಾನಿತ ಶಾಲೆಗಳ ಮಾದರಿಯನ್ನ ಅನುಸರಿಸಲಾಗುತ್ತಿದೆ.

ಶಿಕ್ಷಣ ಸರ್ಕಾರವೇ ಕೊಡಬೇಕೆಂಬ ತಪ್ಪು ಕಲ್ಪನೆ ಅನ್ವಯ, ಭಾರತವು ಸರ್ಕಾರಿ ಶಾಲೆಗಳ ಮೇಲೆ ಸಾಕಷ್ಟು ಬಂಡವಾಳ ಹೂಡಿಕೆ ಮಾಡಿದೆ. ಆದರೆ, ಅದರ ಫಲವು ತೀರಾ ಶೋಚನೀಯವಾಗಿದೆ. ಅಂತಾರಾಷ್ಟ್ರೀಯವಾಗಿ ನಡೆಸಲಾಗುವ PISA ಟೆಸ್ಟ್‌ನಲ್ಲಿ 78 ದೇಶಗಳ ಪೈಕಿ ಭಾರತದ ಮಕ್ಕಳು 73ನೇ ಸ್ಥಾನದಲ್ಲಿ ಇದ್ದಾರೆ. ಅದು, ಕಿರ್ಗಿಸ್ತಾನಕ್ಕಿಂತ ಸ್ವಲ್ಪ ಮೇಲಿದ್ದಾರೆ ಅಷ್ಟೇ. ಐದನೇ ತರಗತಿಯ ಅರ್ಧಕ್ಕಿಂತ ಕಡಿಮೆ ಮಕ್ಕಳು ಎರಡನೇ ತರಗತಿಯ ಪಠ್ಯವನ್ನು ಮಾತ್ರ ಓದುತ್ತಾರೆ.

ಐದನೇ ತರಗತಿಯ ಅರ್ಧಕ್ಕಿಂತ ಅಧಿಕ ಮಕ್ಕಳು ಎರಡನೇ ತರಗತಿಯ ಅಂಕ ಗಣಿತ ಲೆಕ್ಕವನ್ನು ಸಹ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲ ರಾಜ್ಯಗಳಲ್ಲಿ ಕೇವಲ ಶೇ. 10ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಶಿಕ್ಷಕರು, ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿದ್ದಾರೆ. ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ನಾಲ್ಕು ಶಿಕ್ಷಕರಲ್ಲಿ ಮೂವರಿಗೆ ಐದನೇ ತರಗತಿಯ ಪಠ್ಯದ ಶೇಕಡವಾರು ಲೆಕ್ಕ ಮಾಡಲು ಸಹ ಬರುವುದಿಲ್ಲ. ಇಲ್ಲಿನ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ನಾಲ್ಕು ಶಿಕ್ಷಕರಲ್ಲಿ ಒಬ್ಬ ಶಿಕ್ಷಕರು ಕಾನೂನು ಬಾಹಿರವಾಗಿ ಗೈರು ಹಾಜರಾಗಿರುತ್ತಾರೆ ಮತ್ತು ಇಬ್ಬರಲ್ಲಿ ಒಬ್ಬರು ಶಾಲೆಗೆ ಬಂದಿದ್ದರೂ ಭೋದನೆ ಮಾಡದೇ ಕಾಲಹರಣ ಮಾಡಿಕೊಂಡು ಹೋಗುವುದನ್ನ ನೋಡಬಹುದು.

ಈ ಶೋಚನೀಯ ಪರಿಸ್ಥಿತಿಯ ಪರಿಣಾಮವಾಗಿ, 2010-11ರಿಂದ 2017-18ರ ನಡುವೆ 2.4 ಕೋಟಿ ಮಕ್ಕಳು ಸರ್ಕಾರಿ ಶಾಲೆಗಳನ್ನ ತ್ಯಜಿಸಿ ಖಾಸಗಿ ಶಾಲೆಗಳನ್ನ ಸೇರಿದ್ದಾರೆ ಎನ್ನುತ್ತಿವೆ ಸರ್ಕಾರದ DISE ಅಂಕಿ ಅಂಶ. ಇವತ್ತಿನ ದಿನಮಾನದಲ್ಲಿ ಭಾರತದ ಶೇ.47% ರಷ್ಟು ಮಕ್ಕಳು ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ನಮ್ಮ ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ 12 ಕೋಟಿಯಷ್ಟಿದ್ದು, ಇದು ವಿಶ್ವದಲ್ಲೇ ಅತಿ ಹೆಚ್ಚು ಖಾಸಗಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಖಾಸಗಿ ಶಿಕ್ಷಣ ವ್ಯವಸ್ಥೆಯಲ್ಲಿ ಶೇ. 70% ರಷ್ಟು ಪೋಷಕರು 1,000 ರೂ. ನಷ್ಟು ತಿಂಗಳ ಶುಲ್ಕ ಪಾವತಿಸುತ್ತಿದ್ದಾರೆ. ಶೇ 45% ರಷ್ಟು ಪೋಷಕರು 500 ಗಿಂತಲೂ ಕಡಿಮೆ ಶುಲ್ಕ ಪಾವತಿಸುತ್ತಿದ್ದಾರೆ. ಈ ಪದ್ಧತಿ ಖಾಸಗಿ ಶಾಲೆಗಳು ಕೇವಲ ಶ್ರೀಮಂತ ವರ್ಗಕ್ಕೆ ಮಾತ್ರ ಸೀಮಿತ ಎಂಬ ತಪ್ಪು ಕಲ್ಪನೆಯನ್ನ ನಾಶ ಮಾಡಿದೆ.

ಸರ್ಕಾರಿ ಶಾಲೆಗಳು ಖಾಲಿಯಾಗುತ್ತಿರುವ ವೇಗ ಗಮನಸಿದರೆ 130,000 ಕ್ಕೂ ಅಧಿಕ ಖಾಸಗಿ ಶಾಲೆಗಳನ್ನ ನಿರ್ಮಿಸಬೇಕಾದ ಅಗತ್ಯವಿದೆ. ತಮ್ಮ ಮಕ್ಕಳಿಗೆ ಒಂದೊಳ್ಳೆ ಶಾಲೆಗೆ ಪ್ರವೇಶ ಕೊಡಿಸಲು ಪೋಷಕರು ಉದ್ದುದ್ದ ಸರತಿ ಸಾಲಿನಲ್ಲಿ ನಿಲ್ಲುವುದನ್ನ ನೋಡಿದರೆ ಹಾರ್ಟ್‌ ಬ್ರೇಕ್‌ ಆಗುತ್ತದೆ. ಉತ್ತಮ ಖಾಸಗಿ ಶಾಲೆಗಳ ಕೊರತೆ ಕಾಡಲು ಪ್ರಮುಖವಾಗಿ ಮೂರು ಕಾರಣಗಳಿವೆ.

ಮೊದಲನೆ ಕಾರಣ ನಮ್ಮದು ಲೈಸೆನ್ಸ್‌ ರಾಜ್‌, ಒಬ್ಬ ಪ್ರಾಮಾಣಿಕ ವ್ಯಕ್ತಿ ಶಾಲೆ ಆರಂಭಿಸುವುದು ಮ್ಮ ವ್ಯವಸ್ಥೆಯಲ್ಲಿ ಅತ್ಯಂತ ಕಷ್ಟದ ಕೆಲಸ. ಬೇರೆ ಬೇರೆ ರಾಜ್ಯಗಳ ಮೇಲೆ ಅನುಮತಿಯ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ರಾಜ್ಯಗಳ ನಿಯಮಾವಳಿಗಳನ್ನ ಆಧರಿಸಿ ಶಾಲೆ ಆರಂಭಿಸಲು 35 ರಿಂದ 125 ಅನುಮತಿ ಅಗತ್ಯವಿದೆ.

ಪ್ರತಿ ಅನುಮತಿ ಪಡೆಯುವಾಗಲೂ ಅವರು ಡಿಮ್ಯಾಂಡ್‌ ಮಾಡಿದಷ್ಟು ಲಂಚ ನೀಡಬೇಕಾದ ಕೆಟ್ಟ ಪರಿಸ್ಥಿತಿ ನಮ್ಮಲ್ಲಿದೆ. ಇದರಲ್ಲಿ ಅತ್ಯಂತ ದುಬಾರಿ ಅನುಮತಿ ಎಂದರೆ, ಶಾಲೆಯ ಅಗತ್ಯತೆಯ ಪ್ರಮಾಣಪತ್ರ(ಹೊಸ ಖಾಸಗಿ ಶಾಲೆ ಅಗತ್ಯವಿದೆ ಎಂಬುದನ್ನ ಸಾಬೀತುಪಡಿಸುವ ಪತ್ರ) ಮತ್ತು ಗುರುತಿಸುವಿಕೆ ಪಡೆಯುವುದು. ಜೊತೆಗೆ ಈ ಎಲ್ಲ ಪ್ರಕ್ರಿಯೆಯು ಕನಿಷ್ಠ ಪಕ್ಷ ಐದು ವರ್ಷಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ.

ಎರಡನೇ ಕಾರಣ ಹಣಕಾಸಿನ ಪರಿಸ್ಥಿತಿ, ಶಾಲೆಗಳನ್ನ ನಡೆಸುವುದು ಹಣಕಾಸಿನ ದೃಷ್ಟಿಯಿಂದ ಲಾಭದಾಯಕ ಅಲ್ಲ. ಬಡ ಮಕ್ಕಳಿಗೆ ಶೇ. 25% ರಷ್ಟು ಸೀಟು ಕಾಯ್ದಿರಿಸಬೇಕೆಂದು ಸರ್ಕಾರ, ಶಿಕ್ಷಣ ಹಕ್ಕು ಕಾಯ್ದೆ ಅಡಿ ಆದೇಶ ಹೊರಡಿಸಿದಾಗಿನಿಂದ ಸಮಸ್ಯೆ ಆರಂಭವಾಗಿದೆ. ಇದೊಂದು ಅದ್ಬುತವಾದ ಯೋಜನೆಯಾದರೂ ಇದರ ಅನುಷ್ಠಾನ ಮಾತ್ರ ಅತ್ಯಂತ ಕಳಪೆಯಾಗಿದೆ. ಬಡ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಿದ ಖಾಸಗಿ ಶಾಲೆಗಳಿಗೆ ಸರ್ಕಾರಿ ಸೂಕ್ತವಾಗಿ ನೆರವು ನೀಡದ ಕಾರಣ ಶುಲ್ಕ ಪಾವತಿಸಿ ಶಿಕ್ಷಣಕ್ಕೆ ಬರುವ ಶೇ. 75% ರಷ್ಟು ವಿದ್ಯಾರ್ಥಿಗಳಿಗೆ ಶುಲ್ಕ ಭಾರೀ ಹೆಚ್ಚಳವಾಗಿದೆ.

ಇದು ಪೋಷಕರಿಂದ ಭಾರೀ ವಿರೋಧಕ್ಕೆ ಕಾರಣವಾಯಿತು ಮತ್ತು ಹಲವು ರಾಜ್ಯಗಳು ಶುಲ್ಕದ ಮೇಲೆ ಕೆಲ ಮಿತಿಗಳನ್ನ ಹೇರಿದವು. ಹೀಗಾಗಿ, ಖಾಸಗಿ ಶಾಲೆಗಳ ಹಣಕಾಸಿನ ಸ್ಥಿತಿ ನಿಧಾನವಾಗಿ ದುರ್ಬಲವಾಗುತ್ತಾ ಸಾಗಿದೆ. ಹೀಗಾಗಿ, ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ದೃಷ್ಟಿಯಿಂದ ಶಾಲೆಗಳು ಖರ್ಚು ತಗ್ಗಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿ, ಶಾಲೆಯ ಗುಣಮಟ್ಟದಲ್ಲಿ ರಾಜಿ ಆಗಬೇಕಾಯಿತು. ಕೆಲವು ಶಾಲೆಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಈ ಭಯಾನಕ ಕೊರೋನಾ ಸೋಂಕಿನ ಹಾವಳಿ ಬಳಿಕ ಮತ್ತಷ್ಟು ಶಾಲೆಗಳು ಮುಚ್ಚುವ ಹಂತದಲ್ಲಿವೆ.

ಮೂರನೇ ಕಾರಣವೆಂದರೆ, ಒಬ್ಬ ಪ್ರಾಮಾಣಿಕ ವ್ಯಕ್ತಿಯು ಶಾಲೆ ಆರಂಭಿಸುವುದು ಸಾಧ್ಯವಿಲ್ಲ ಎಂಬುದು ರಾಷ್ಟ್ರೀಯ ಕಪಟತನ. ಖಾಸಗಿ ಶಾಲೆಗಳು ಲಾಭ ಮಾಡಬಾರದೆಂದು ಕಾನೂನಿದ್ದರೂ ಸಹ ಹಲವು ಶಾಲೆಗಳು ಲಾಭ ಮಾಡುತ್ತಿವೆ. ಜಗತ್ತಿನ ಟಾಪ್‌ ೧೦ ಆರ್ಥಿಕತೆ ಹೊಂದಿರುವ ರಾಷ್ಟ್ರಗಳ ಪೈಕಿ 9 ರಾಷ್ಟ್ರಗಳಲ್ಲಿ ಶಿಕ್ಷಣದ ವ್ಯವಸ್ಥೆ ಮೂಲಕ ಲಾಭ ಮಾಡಲು ಅವಕಾಶ ಇದೆ. ಇವುಗಳ ಪೈಕಿ ಭಾರತ ಒಂದರಲ್ಲಿ ಮಅತ್ರ ಶಿಕ್ಷಣದಲ್ಲಿ ಲಅಭ ಮಾಡುವ ಅವಕಾಶವಿಲ್ಲ. ಈ ರೀತಿಯ ನಿಯಮಾವಳಿಗಳನ್ನ ತೆಗೆದು ಹಾಕಬೇಕಾದ ಸೂಕ್ತ ಸಮಯ ಇದಾಗಿದೆ.

ಲಾಭದಾಯಕವಲ್ಲದ ವಲಯದಿಂದ ಲಾಭದಾಯಕ ವಲಯಕ್ಕೆ ಬದಲಾಯಿಸುವ ಒಂದು ಬದಲಾವಣೆ ಈ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಮಾಡಬಲ್ಲದು. ಶಿಕ್ಷಣ ವ್ಯವಸ್ಥೆಗೆ ಬಂಡವಾಳದ ಹರಿವು ಆಗುವುದರಿಂದ ಆಲ್ಕೆ ಮತ್ತು ಗುಣಮಟ್ಟ ಸುಧಾರಿಸಲಿದೆ. ಪ್ರಾಂಶುಪಾಲರನ್ನ ಸುಳ್ಳುಗಾರರು ಅಥವಾ ಕಳ್ಳರು ಎಂದು ಕರೆಯುವ ಸಂದ್ರ್ಭ ಹೋಗಬಹುದು. ಕಪ್ಪು ಹಣದ ಪ್ರಮಾಣ ಸಹ ಕಡಿಮೆ ಆಗುತ್ತದೆ. 1991ರ ನಂತರ ಪೋಷಕರು ಆಯ್ಕೆ ಮತ್ತು ಸ್ಪರ್ಧೆಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ನೀರು, ವಿದ್ಯುತ್‌ ಮತ್ತು ಇಂಟರ್ನೆಟ್‌ಗೆ ಪಾವತಿಸುವ ರೀತಿಯೇ ಅತ್ಯುತ್ತಮ ಶಿಕ್ಷಣಕ್ಕೂ ಪಾವತಿ ಮಾಡುತ್ತಾರೆ.

ಈ ಕ್ರಾಂತಿಕಾರಕ ಕ್ರಮಕ್ಕೆ ಮತ್ತೊಂದು ಹಂತದ ಅಗತ್ಯವಿದೆ. ಅದೇನೆಂದರೆ, ಪ್ರಮಾಣಿಕ ಖಾಸಗಿ ಶಾಲೆಗಳು ಆರಂಭವಾಗಬೇಕೆಂದರೆ ನಮ್ಮ ದೇಶದ ದೇಶದ ಲೈಸೆನ್ಸ್‌ ರಾಜ್‌ ಪದ್ಧತಿಯನ್ನ ಮೊದಲು ನಿರ್ಮೂಲನೆ ಮಾಡಬೇಕು. ಎರಡನೇದಾಗಿ, ಮುಂದುವರೆದ ರಾಷ್ಟ್ರಗಳಲ್ಲಿ ಅಸ್ತಿತ್ವದಲ್ಲಿರುವ ರೀತಿಯೇ ನಮ್ಮ ದೇಶದಲ್ಲೂ ಖಾಸಗಿ ಶಾಲೆಗಳಿಗೆ ಸ್ವಾಯತ್ತ ಸಂಸ್ಥೆಯ ಹಕ್ಕು ನೀಡಬೇಕಿದೆ. ಕೆಲವೊಂದನ್ನ ಹೊರತುಪಡಿಸಿದರೆ ದೇಶದ ಎಲ್ಲ ಖಾಸಗಿ ಶಾಲೆಗಳು ಸಾಧಾರಣವಾಗಿವೆ.

ನಾವು ಊಹಿಸಿದ ನಿಯಂತ್ರಣ ಮತ್ತು ಸಂಬಳ, ಶುಲ್ಕ, ಶಾಲಾ ಚಟುವಟಿಕೆಗಳಲ್ಲಿ ಸ್ವಾತಂತ್ರ್ಯ ಸಿಕ್ಕರೆ ಮಅತ್ರ ಕೋವಿಡ್‌ ಯುಗದ ನಂತರ ಖಾಸಗಿ ಶಾಲೆಗಳನ್ನ ಆರಂಭಿಸಲು ಬಂಡವಾಳ ಹೂಡಲಾಗುತ್ತದೆ. ಒಂದೊಳ್ಳೆ ಖಾಸಗಿ ಶಾಲೆಗಳ ವಲಯವು ಭಾರತಕ್ಕೆ ಅತ್ಯುತ್ತಮ ಕೊಡಉಗೆಯನ್ನ ನೀಡಬಲ್ಲುದಾಗಿದೆ. ಸರ್ಕಾರಿ ಶಾಲೆಗೆ ಮಾಡಲಾಗುತ್ತಿರುವ ಮೂರನೇ ಒಣದು ಭಾಗದಷ್ಟು ಖರ್ಚಿನಲ್ಲೇ ಇದನ್ನ ಮಾಡಬಹುದಾಗಿದೆ. ಸರ್ಕಾರಿ ಶಾಲೆಗಳ ಶಿಕ್ಷಕರ ಸಂಬಳ ಅತ್ಯಂತ ಹೆಚ್ಚಾಗಿರುವುದರಿಂದ ಖಾಸಗಿ ಶಾಲೆಗಳನ್ನ ನಡೆಸುವುದು ಸಮಾಜಕ್ಕೆ ಅತ್ಯಂತ ಅಗ್ಗವಾಗಿದೆ. 2017-18 ರಲ್ಲಿ ಉತ್ತರ ಪ್ರದೇಶದ ಕಿರಿಯ ಶಿಕ್ಷಕರ ಆರಂಭಿಕ ಮಾಸಿಕ ವೇತನವು 48,918 ರೂ. ಆಗಿತ್ತು ಅಥವಾ ಉತ್ತರ ಪ್ರದೇಶದ ತಲಾದಾಯಕ್ಕಿಂತ 11 ಪಟ್ಟು ಹೆಚ್ಚಾಗಿದೆ.

ಈ ಹಿಂದಿನ ಇತ್ತೀಚಿನ ಶಿಕ್ಷಣ ನೀತಿಯು ವಿಫಲವಾಗುವ ಎಲ್ಲ ಸಾಧ್ಯತೆ ಇದೆ. ಭಾರತೀಯ ಶಿಕ್ಷಣ ವ್ಯವಸ್ಥೆಯ ಸುಧಾರಣೆ ಈ ಎರಡು ಅಂಶಗಳನ್ನ ಒಳಗೊಂಡಿರಬೇಕು. 1) ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಣೆ ಮಾಡುವುದು. 2) ಖಾಸಗಿ ಶಾಲೆಗಳಿಗೆ ಸ್ವಾಯತ್ತತೆ ನೀಡುವುದು. ಈ ಹಂತದಲ್ಲಿ ಸರ್ಕರ ತನ್ನ ಕಾರ್ಯವೈಖರಿಯಲ್ಲಿ ಪ್ರತ್ಯೇಕತೆ ರೂಢಿಸಿಕೊಳ್ಳಬೇಕು. (1) ಶಿಕ್ಷಣ ನಿಯಂತ್ರಣ (2) ಸರ್ಕಾರಿ ಶಾಲೆಗಳನ್ನ ನಡೆಸುವುದು.

ಇವತ್ತಿನ ದಿನಮಾನಗಳಲ್ಲಿ ಹೀತಾಸಕ್ತಿ ಸಂಘರ್ಷ ಏರ್ಪಟ್ಟಿರುವ ಕಾರಣ ಎಲ್ಲರ ಮೇಲೂ ವ್ಯತಿ ರಿಕ್ತ ಪರಿಣಾಮ ಬೀರಿದೆ. ಕೋವಿಡ್‌ ಸಾಂಕ್ರಾಮಿಕ ರೋಗದ ನಂತರದ ಕಾಲಘಟ್ಟಕ್ಕೆ ಸಿದ್ಧವಾಗುತ್ತಿರುವ ನಮಗೆ ಅತ್ಯಂತ ನಾವಿನ್ಯತೆಯಿಂದ ಕೂಡಿದ ಶಾಲೆಗಳ ಅಗತ್ಯ ಇದೆ. ನಮ್ಮ ಖಾಸಗಿ ಶಾಲೆಗಳಿಗೆ ಹೆಚ್ಚು ಹೆಚ್ಚು ಸ್ವಾತಂತ್ರ್ಯ ನೀಡಿದಾಗ ಮಾತ್ರ ಇದು ಸಾಧ್ಯ. ಈ ರೀತಿಯ ಕ್ರಮ ಶಿಕ್ಷಣ ವ್ಯವಸ್ಥೆಯಲ್ಲಿ ಕಪಟತನ ತಗ್ಗಿಸಿ, ಮತ್ತಷ್ಟು ಪ್ರಮಾಣಿಕತೆ ಬೆಳೆಸಲು ಸಹಾಯವಾಗುತ್ತದೆ.

-ಗುರುಚರಣ್‌ ದಾಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.