ETV Bharat / bharat

ಟ್ವಿಟರ್​ನಲ್ಲಿ 'ಸ್ಪೀಕ್​​ ಅಪ್ ಫಾರ್​ ಡೆಮಾಕ್ರೆಸಿ' ಅಭಿಯಾನ ಟಾಪ್​ ಟ್ರೆಂಡ್: ಕಾಂಗ್ರೆಸ್​​​ - ರಾಜಸ್ಥಾನ ಸರ್ಕಾರ

ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ 'ಸ್ಪೀಕ್​​ ಅಪ್ ಫಾರ್​ ಡೆಮಾಕ್ರೆಸಿ' ಎಂಬ ಆನ್‌ಲೈನ್ ಅಭಿಯಾನವನ್ನು ಕೈಗೊಂಡಿದ್ದು, ಟ್ವಿಟರ್​ನಲ್ಲಿ ಟಾಪ್​ ಟ್ರೆಂಡ್​ ಆಗಿದೆ.

Congress general secretary K.C. Venugopal
ಕೆ ಸಿ ವೇಣುಗೋಪಾಲ್​
author img

By

Published : Jul 27, 2020, 12:28 PM IST

ನವದೆಹಲಿ: ರಾಜಸ್ಥಾನ ಸರ್ಕಾರವನ್ನು ಉರುಳಿಸುವ ಯತ್ನ ಹಾಗೂ ಸಂವಿಧಾನದ ದುರುಪಯೋಗದ ವಿರುದ್ಧ ಕಾಂಗ್ರೆಸ್ ಪಕ್ಷ ಭಾನುವಾರ ರಾಷ್ಟ್ರವ್ಯಾಪಿ ಆನ್‌ಲೈನ್ ಅಭಿಯಾನ ನಡೆಸಿದೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, 'ಸ್ಪೀಕ್​​ ಅಪ್ ಫಾರ್​ ಡೆಮಾಕ್ರೆಸಿ' ( #SpeakUpForDemocracy) ಎಂಬ ಆನ್‌ಲೈನ್ ಅಭಿಯಾನವನ್ನು ಭಾನುವಾರ ಕಾಂಗ್ರೆಸ್​ ಕೈಗೊಂಡಿತ್ತು. ನಿನ್ನೆ ಬೆಳಗ್ಗೆ 10 ಗಂಟೆಯಿಂದಲೇ ನೆಟ್ಟಿಗರು ರಾಜಸ್ಥಾನ ರಾಜ್ಯಪಾಲರು ಮತ್ತು ಪಿಎಂ ಮೋದಿ ಸರ್ಕಾರದ ಜವಾಬ್ದಾರಿ ಪ್ರಶ್ನಿಸಿ ವಿಡಿಯೋಗಳನ್ನು ಪೋಸ್ಟ್ ಮಾಡಲು ಆರಂಭಿಸಿದ್ದಾರೆ. ಸಂಜೆ 5 ಗಂಟೆಯ ಒಳಗಡೆ ಸುಮಾರು 3 ಲಕ್ಷ ಟ್ವೀಟ್​ಗಳು ಬಂದಿದ್ದು, ಟ್ವಿಟರ್​ನಲ್ಲಿ ನಮ್ಮ ಕ್ಯಾಂಪೇನ್​ ಈಗ ಟಾಪ್​ ಟ್ರೆಂಡ್​ ಆಗಿದೆ ಎಂದು ಹೇಳಿದ್ದಾರೆ.

ನಿನ್ನೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 'ಸಂವಿಧಾನವನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳುತ್ತಿದೆ, ರಾಜಸ್ಥಾನದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸಲು ನಾಗರಿಕರು ದನಿ ಎತ್ತಬೇಕು' ಎಂದು ಟ್ವೀಟ್​ ಮಾಡಿ, ಸ್ಪೀಕ್​​ ಅಪ್ ಫಾರ್​ ಡೆಮಾಕ್ರೆಸಿ ಅಭಿಯಾನಕ್ಕೆ ಕೈ ಜೋಡಿಸುವಂತೆ ಮನವಿ ಮಾಡಿದ್ದರು.

ಇಂದು ಪ್ರಾದೇಶಿಕ ಕಾಂಗ್ರೆಸ್ ಸಮಿತಿಗಳು ಆಯಾ ರಾಜ್ಯಗಳಲ್ಲಿ ರಾಜಭವನಗಳ ಮುಂದೆ 'ಪ್ರಜಾಪ್ರಭುತ್ವ ರಕ್ಷಿಸಿ - ಸಂವಿಧಾನವನ್ನು ಉಳಿಸಿ' ಎಂದು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಲಿವೆ ಎಂದು ಕಾಂಗ್ರೆಸ್ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.