ಕರ್ನೂಲ್: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲಾ ವ್ಯವಸಾಯ ಸೇವಾ ಮಾರುಕಟ್ಟೆಯಲ್ಲಿ ಕ್ವಿಂಟಲ್ ಈರುಳ್ಳಿ ದರ 13 ಸಾವಿರ ರೂ.ಗೆ ಮಾರಾಟವಾಗುತ್ತಿದ್ದು, ಗ್ರಾಹಕರು ಈರುಳ್ಳಿ ತಿನ್ನುವುದು ಹೇಗೆ ಎಂದು ಯೋಚಿಸುತ್ತಿದ್ದಾರೆ.
ಅತ್ತ ಈರುಳ್ಳಿ ಬೆಳೆದ ರೈತ ಮಾತ್ರ ಖುಷಿಯಾಗಿದ್ದಾನೆ. ತಾನು ಕಷ್ಟಪಟ್ಟು ಬೆಳೆದ ಬೆಳೆಗೆ ಉತ್ತಮ ದರ ಸಿಗುತ್ತಿರುವುದು ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಇಷ್ಟೊಂದು ದರ ಕಂಡು ಅವರೆಲ್ಲ ಖುಷಿಯಾಗಿದ್ದಾರೆ.
ನಿನ್ನೆಯಷ್ಟೇ ಮಾರುಕಟ್ಟೆಯಲ್ಲಿ ಕ್ವಿಂಟಲ್ಗೆ 12800 ರೂ. ದರವಿತ್ತು. ಈ ನಡುವೆ ದೇಶದಲ್ಲಿ ಈರುಳ್ಳಿ ಕೊರತೆ ಉದ್ಬಭವಿಸಿ ಕೆ.ಜಿಗೆ 180 ರೂ. ಗ್ರಾಹಕರಿಗೆ ಮಾರಾಟವಾಗುತ್ತಿದೆ. ಇದು ಗ್ರಾಹಕರ ಕಣ್ಣಲ್ಲಿ ನೀರು ತರುವಂತೆ ಮಾಡಿದೆ.