ಪಾಟ್ನಾ: ಕೊರೊನಾ ವೈರಸ್ಗೆ ದೇಶದಲ್ಲಿ ಮತ್ತೊಂದು ಬಲಿಯಾಗಿದೆ. ಬಿಹಾರದಲ್ಲಿ ಮೊದಲ ಬಾರಿಗೆ ಕೊರೊನಾ ಅಟ್ಟಹಾಸಕ್ಕೆ ಓರ್ವ ಬಲಿಯಾಗಿದ್ದಾನೆ. ಇದರಿಂದಾಗಿ ದೇಶದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಏಳಕ್ಕೇರಿದೆ.
ಮಂಗೇರ್ ನಿವಾಸಿಯಾದ 38 ವರ್ಷದ ವ್ಯಕ್ತಿಯಾದ ಈತ ಕತಾರ್ನಿಂದ ವಾಪಸ್ಸು ಬಂದಿದ್ದ ಎನ್ನಲಾಗಿದೆ. ಜೊತೆಗೆ ಕೆಲ ದಿನಗಳ ಹಿಂದೆ ಕೋಲ್ಕತ್ತಾಗೆ ತೆರಳಿದ್ದನೆಂಬ ಮಾಹಿತಿ ಇದೆ. ಸೋಂಕಿನ ಲಕ್ಷಣಗಳು ಕಂಡು ಬಂದ ಮೇಲೆ ಪಾಟ್ನಾದ ಏಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಕೊರೊನಾ ಬಾಧಿತನಾಗಿದ್ದ ಈತ ಮೂತ್ರಪಿಂಡದ ಸಮಸ್ಯೆಯಿಂದಲೂ ಬಳಲುತ್ತಿದ್ದ ಎಂದು ಏಮ್ಸ್ನ ವೈದ್ಯ ಪ್ರಭಾತ್ ಕುಮಾರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಬಿಹಾರದ ಆರೋಗ್ಯ ಇಲಾಖೆ ಮೃತಪಟ್ಟ ವ್ಯಕ್ತಿ ಕೊರೊನಾ ಸಾವುಗಳ ಪಟ್ಟಿಗೆ ಇದನ್ನು ಸೇರಿಸಿದೆ.