ETV Bharat / bharat

'ಒನ್​ ನೇಷನ್​ ಒನ್​ ಹೆಲ್ತ್​ ಕಾರ್ಡ್​'​​ ಜಾರಿಗೆ ತರಲು ಮೋದಿ ಸರ್ಕಾರ ಸಿದ್ಧತೆ: ಆ.15ರಂದು ಘೋಷಣೆ? - ಒನ್​ ನೇಷನ್​ ಒನ್​ ಹೆಲ್ತ್​ ಕಾರ್ಡ್​

ಒನ್​ ನೇಷನ್​ ಒನ್​ ಹೆಲ್ತ್​ ಕಾರ್ಡ್​ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರ ಇದೀಗ ಯೋಜನೆ ರೂಪಿಸಿದ್ದು, ಆಗಸ್ಟ್​ 15ರಂದು ಘೋಷಣೆಯಾಗುವ ಸಾಧ್ಯತೆ ಇದೆ.

modi
modi
author img

By

Published : Aug 8, 2020, 5:55 PM IST

ನವದೆಹಲಿ: ದೇಶಾದ್ಯಂತ ಈಗಾಗಲೇ ಒನ್​ ನೇಷನ್​ ಒನ್​​ ರೇಷನ್​ ಕಾರ್ಡ್​ ಯೋಜನೆ ಈಗಾಗಲೇ ದೇಶಾದ್ಯಂತ ಜಾರಿಯಲ್ಲಿದ್ದು, ಅದೇ ರೀತಿ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಯೋಜನೆ ಜಾರಿಗೊಳಿಸಲು ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಒನ್​ ನೇಷನ್​ ಒನ್​ ಹೆಲ್ತ್​ ಕಾರ್ಡ್​ ಯೋಜನೆ ಜಾರಿಗೆ ತರಲು ಮೋದಿ ಸರ್ಕಾರ ಯೋಜನೆ ಜಾರಿಗೆ ತರಲು ಮುಂದಾಗಿದ್ದು, ಆಗಸ್ಟ್​ 15ರಂದು ಈ ಮಹತ್ವದ ಯೋಜನೆ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ.

ದೇಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಗೂ ಆರೋಗ್ಯ ಸೇವೆ ಲಭ್ಯವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಘೋಷಣೆ ಮಾಡುವ ಸಾಧ್ಯತೆ ಇದೆ. ಪ್ರತಿಯೊಬ್ಬ ವ್ಯಕ್ತಿಯ ಹೆಲ್ತ್​ ಕಾರ್ಡ್​​​ ತಯಾರಿಸಿ, ಅದರ ಮಾಹಿತಿ ಡಿಜಿಟಲ್​​ ರೂಪದಲ್ಲಿ ದಾಖಲು ಮಾಡುವ ಯೋಜನೆ ಇದಾಗಿದೆ.

ದೇಶದ ಯಾವುದೇ ಆಸ್ಪತ್ರೆಗೆ ಚಿಕಿತ್ಸೆಗೋಸ್ಕರ ತೆರಳಿದಾಗ ಈ ಹಿಂದಿನ ರಶೀದಿ ಅಥವಾ ಪರೀಕ್ಷಾ ಮಾಹಿತಿಯ ಎಲ್ಲ ದಾಖಲಾತಿ ತೆಗೆದುಕೊಂಡು ಹೋಗುವ ಅವಶ್ಯಕತೆ ಇರಲ್ಲ. ಇದಕ್ಕಾಗಿ ಮೊದಲ ಹಂತದಲ್ಲಿ 500 ಕೋಟಿ ರೂ ಬಜೆಟ್​​ ಮೀಸಲಿಡಲು ನಿರ್ಧರಿಸಲಾಗಿದ್ದು, ಪ್ರತಿಯೊಬ್ಬ ವ್ಯಕ್ತಿಯ ಮಾಹಿತಿ ಗೌಪ್ಯತೆ ಕಾಪಾಡಿಕೊಳ್ಳುವ ಸಾಧ್ಯತೆ ಇದೆ. ಉಳಿದಂತೆ ವ್ಯಕ್ತಿಯ ಆರೋಗ್ಯದ ಮಾಹಿತಿ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಹೊರತುಪಡಿಸಿ ಬೇರೆ ಯಾರಿಗೂ ಗೊತ್ತಾಗುವುದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.