ಹೈದರಾಬಾದ್: ಸರ್ಜಿಕಲ್ ಸ್ಪಿರಿಟ್ ಸೇವಿಸಿ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ
ಇಡೀ ರಾಷ್ಟ್ರವೇ ಲಾಕ್ ಡೌನ್ ಆದ ಹಿನ್ನೆಲೆ ಮದ್ಯ ಸಿಗದೆ ಆರು ಜನರು ಸರ್ಜಿಕಲ್ ಸ್ಪಿರಿಟ್ ಸೇವಿಸಿದ್ದಾರೆ. ಈ ಹಿನ್ನೆಲೆ ಓರ್ವ ಸಾವಿಗೀಡಾಗಿದ್ದು, ಮತ್ತಿಬ್ಬರು ಗಂಭೀರ ಸ್ಥಿತಿ ತಲುಪಿದ್ದಾರೆ.
ಇರಗವರಂ ಬ್ಲಾಕ್‌ನ ಕವಲಿಪುರಂ ಗ್ರಾಮದ ಆರು ಮಂದಿ ಮಾರ್ಚ್ 29 ರಂದು ಸರ್ಜಿಕಲ್ ಸ್ಪಿರಿಟ್ ಸೇವಿಸಿದ್ದಾರೆ. ಮರುದಿನ ಇವರಲ್ಲಿ ಮೂವರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅಲ್ಲಾಡಿ ವೆಂಕಟೇಶ್ ಹಾಗೂ ವೀರೇಶ್ ಅವರನ್ನು ತನುಕು ಪಟ್ಟಣದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಮತ್ತೋರ್ವ ನವೀನ್ ಮೂರ್ತಿ ರಾಜು ಎಂಬುವವನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವಿಗೀಡಾಗಿದ್ದಾನೆ ಎಂದು ಇರಗವರಂ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಸತೀಶ್ ಮಾಹಿತಿ ನೀಡಿದ್ದಾರೆ.
ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಅವುಗಳು ಪೂರ್ಣಗೊಂಡ ನಂತರ, ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.