ಚೆನ್ನೈ: ಇತರ ವ್ಯಕ್ತಿಗಳ ಗುರುತು ಸಂಬಂಧಿತ ದಾಖಲೆಗಳನ್ನು ಬಳಸಿಕೊಂಡು ಸುಮಾರು 90 ವ್ಯಾಪಾರ ಸಂಸ್ಥೆಗಳಿಂದ 350 ಕೋಟಿ ಜಿಎಸ್ಟಿ ವಂಚನೆ ಎಸಗಿದ್ದ ಜಾಲವನ್ನು ತೆರಿಗೆ ಅಧಿಕಾರಿಗಳು ಬಯಲಿಗೆಳೆದಿದ್ದಾರೆ. ಜೊತೆಗೆ, ಏಳು ಆರೋಪಿಗಳ ಪೈಕಿ ಒಬ್ಬನನ್ನು ತೆರಿಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
27 ವರ್ಷದ ಆರೋಪಿ ವ್ಯಕ್ತಿಯ ಗುರುತನ್ನು ಗೌಪ್ಯವಾಗಿಡಲಾಗಿದ್ದು, ಆತ ಚೆನ್ನೈ ನಗರದ ಕೊಡುಂಗೈಯೂರ್ ಪ್ರದೇಶದ ನಿವಾಸಿ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಹೆಚ್ಚಿನ ತನಿಖೆ ನಡೆಸಿ ಸರಿಯಾದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಬಂಧಿತ ವ್ಯಕ್ತಿಯನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಅವರು ಆರೋಪಿಯನ್ನು ಫೆಬ್ರವರಿ 8 ರವರೆಗೆ ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಸೂಚಿಸಿದ್ದಾರೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ : ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನದಲ್ಲೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ