ETV Bharat / bharat

ಅಮರನಾಥ​ ಯಾತ್ರೆ ರದ್ದು ಬೆನ್ನಲ್ಲೇ ಉಗ್ರರ ಅಟ್ಟಹಾಸ: ಗುಂಡಿನ ದಾಳಿಗೆ ಯೋಧ ಹುತಾತ್ಮ

ಅಮರನಾಥ ಯಾತ್ರೆ ರದ್ಧು ಬೆನ್ನಲ್ಲೇ ಉಗ್ರರು ಬಾಲ ಬಿಚ್ಚಿದ್ದು, ಭಯೋತ್ಪಾದಕರು-ಭಾರತೀಯ ಯೋಧರ ನಡುವೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದಾರೆ.

ಅಮರನಾಥ್​ ಯಾತ್ರೆ  ರದ್ದು
author img

By

Published : Aug 2, 2019, 11:03 PM IST

ಶ್ರೀನಗರ: ಅಮರನಾಥ​ ಯಾತ್ರಿಕರ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಭಯೋತ್ಪಾದಕರು ಭಾರತದ ಗಡಿಯೊಳಗೆ ನುಗ್ಗಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ರಕ್ಷಣೆ ಹಿತದೃಷ್ಠಿಯಿಂದ ಯಾತ್ರೆಯನ್ನು ದಿಢೀರ್​ ರದ್ಧುಗೊಳಿಸಲಾಗಿದೆ. ಇದ್ರ ಜೊತೆಗೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

ಶೋಫಿಯಾನ್​ ಬಳಿ ಭಾರತೀಯ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ. 34 ರಾಷ್ಟ್ರೀಯ ರೈಫಲ್ಸ್​​ನ ಯೋಧ ಹುತಾತ್ಮರಾಗಿದ್ದಾರೆ.

ಘಟನೆಯಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. ಉಗ್ರನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.

Intro:Body:

ಅಮರನಾಥ್​ ಯಾತ್ರೆ  ರದ್ದು ಬೆನ್ನಲ್ಲೇ ಬಾಲ ಬಿಚ್ಚಿದ ಉಗ್ರರು: ಗುಂಡಿನ ದಾಳಿ ವೇಳೆ ಓರ್ವ ಯೋಧ ಹುತಾತ್ಮ

ಶ್ರೀನಗರ: ಅಮರನಾಥ್​ ಯಾತ್ರಿಕರ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಭಯೋತ್ಪಾದಕರು ಭಾರತದ ಗಡಿಯೊಳಗೆ ನುಗ್ಗಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನಲೆಯಲ್ಲಿ ಯಾತ್ರಾರ್ಥಿಗಳ ರಕ್ಷಣೆ ಹಿತದೃಷ್ಠಿಯಿಂದ ಯಾತ್ರೆಯನ್ನ ದಿಢೀರ್​ ರದ್ಧುಗೊಳಿಸಲಾಗಿದೆ. 

ಇದಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಸೇನೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಸಹ ಹೊರಹಾಕಿತ್ತು. ಇದರ ಬೆನ್ನಲ್ಲೇ ಶೋಫಿಯಾನ್​ ಬಳಿ ಭಾರತೀಯ ಯೋಧರು ಹಾಗೂ ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ. 34 ರಾಷ್ಟ್ರೀಯ ರೈಫಲ್ಸ್​​ನ ಯೋಧ ಹುತಾತ್ಮರಾಗಿದ್ದು, ಓರ್ವ ಉಗ್ರರನ್ನ ಹೊಡೆದುರುಳಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ. 

ಇದರ ಬೆನ್ನಲ್ಲೇ  ಉಗ್ರನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಳ್ಳಲಾಗಿದ್ದು, ಕಾರ್ಯಚರಣೆ ಮುಂದುವರೆದಿದೆ. 

ಅಮರನಾಥ್​ ಯಾತ್ರೆ ರದ್ಧುಗೊಳ್ಳುತ್ತಿದ್ದಂತೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಜಮ್ಮು-ಕಾಶ್ಮೀರ ಮಾಜಿ ಸಿಎಂ ಮೊಹಬೂಬಾ ಮುಫ್ತಿ, ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ ಅಪಾಯಕಾರಿಯಾಗಿದ್ದು, ಇಂತಹ ಪರಿಸ್ಥಿತಿ ಈ ಹಿಂದೆ ಉದ್ಭವವಾಗಿದ್ದು ನಾನು ಕಂಡಿಲ್ಲ. ಕೇಂದ್ರದ ಇಂತಹ ನಿರ್ಧಾರಗಳಿಂದ ಜನರು ಗೊಂದಲಕ್ಕೊಳಗಾಗಿದ್ದಾರೆ ಎಂದಿದ್ದಾರೆ. ಇದರ ಮಧ್ಯೆ ಜಮ್ಮು-ಕಾಶ್ಮೀರ ರಾಜ್ಯಪಾಲ ಯಾವುದೇ ರೀತಿಯ ತೊಂದರೆ ಇಲ್ಲ, ಎಲ್ಲವೂ ನಾರ್ಮಲ್​ ಆಗಿದೆ ಎನ್ನುವ ಹೇಳಿಕೆ ನೀಡಿದ್ದರು. 

ಇನ್ನು  ಅಮರನಾಥ ಯಾತ್ರೆ ಮಾರ್ಗದಲ್ಲಿ ಪಾಕಿಸ್ತಾನದ ಸ್ನಿಪರ್ ಗನ್ ಸಿಕ್ಕಿದ್ದು, ಉಗ್ರರ ದಾಳಿಗೆ ಸಂಬಂಧಿಸಿದಂತೆ ಮತ್ತಷ್ಟು ಪುಷ್ಠಿ ನೀಡಿದೆ. ಇದೆಲ್ಲದ್ದರ ಮಧ್ಯೆ ಕೇಂದ್ರ ಕಣಿವೆ ನಾಡಿನಲ್ಲಿ ಹೆಚ್ಚುವರಿ ಪೊಲೀಸ್​ ನಿಯೋಜನೆ ಮಾಡಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.