ತ್ರಿಶೂರ್: ಓಣಂ ಅನ್ನು ರಾಜ್ಯದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ರಾಜ್ಯದ ಸಾಂಸ್ಕೃತಿಕ ರಾಜಧಾನಿ ತ್ರಿಶೂರ್ನ ವಡಕುಮ್ನಾಥ ದೇವಸ್ಥಾನದ ತೆಕ್ಕಿಂಕಡು ಮೈದಾನದಲ್ಲಿ ಪೂಕಲಂ (ಹೂವಿನ ಕಾರ್ಪೆಟ್) ಅನ್ನು ತರಹೆವಾರಿ ಹೂವುಗಳಿಂದ ಅನಾವರಣಗೊಂಡ ರಂಗೋಲಿ ಎಲ್ಲರ ಕಣ್ಮನ ಸೆಳೆಯಿತು.
ದೇವಾಲಯದ ದಕ್ಷಿಣ ದ್ವಾರದಲ್ಲಿ ಸುಮಾರು 100ಕ್ಕೂ ಹೆಚ್ಚು ಜನರು ಈ ಪೂಕಲಂ ಅನಾವರಣದಲ್ಲಿ ತೊಡಗಿಕೊಂಡಿದ್ದರು. ಬರೋಬ್ಬರಿ 1,200 ಕೆಜಿ ಹೂವುಗಳಿಂದ, 52 ಅಡಿ ವ್ಯಾಸದಲ್ಲಿ ಆರು ಗಂಟೆಗಳ ಸಮಯ ತೆಗೆದುಕೊಂಡು ಸಿದ್ಧಪಡಿಸಲಾಯಿತು.
ಪೂಕಲಂ ಅನ್ನು ತೆಕ್ಕಿನ್ಕದ್ ಸಯಾನಾ ಸೌಹ್ರೀಧಾ ತಂಡ ತಯಾರಿಸಿದ್ದು, ಹೆಸರಾಂತ ಕಲಾವಿದ ನಂದನ್ ಪಿಳ್ಳೈ ಅವರು ವಿನ್ಯಾಸಗೊಳಿಸಿದ್ದಾರೆ. ಮುಂಜಾನೆ 3 ಗಂಟೆಗೆ ವಡಕುಮ್ಮನಾಥ ದೇವಸ್ಥಾನದ ಧಾರ್ಮಿಕ ಆಚರಣೆ ನಂತರ ಇದು ಪ್ರಾರಂಭವಾಗುತ್ತದೆ.