ನವದೆಹಲಿ: ವಿಶ್ವ ಪ್ರವಾಸಿ ದಿನವನ್ನು ವಿಶ್ವಾದ್ಯಂತ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತಿದ್ದರೆ, ಅತ್ತ ಕಾಂಗ್ರೆಸ್ ಇದೇ ವಿಚಾರದಲ್ಲಿ ಪ್ರಧಾನಿ ಮೋದಿ ವಿದೇಶ ಪ್ರವಾಸದ ವಿಷಯವನ್ನೆತ್ತಿಕೊಂಡು ಟ್ವೀಟ್ ಮಾಡಿ ಅಣಕಿಸಿದೆ.
ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿ ಈ ಹಿಂದಿನ ಎಲ್ಲ ಪ್ರಧಾನಿಗಳನ್ನು ಮೀರಿಸಿದ್ದಾರೆ. ಮೊದಲ ಅವಧಿಯಲ್ಲಿ ಸಾಕಷ್ಟು ದೇಶಗಳನ್ನು ಸುತ್ತಿದ್ದ ಮೋದಿ ಇದೀಗ ಎರಡನೇ ಅವಧಿಯಲ್ಲಿಯೂ ಅದೇ ರೀತಿಯಲ್ಲಿ ದೇಶ ಸುತ್ತುತ್ತಿದ್ದಾರೆ.
-
Happy #WorldTourismDay ✈️ pic.twitter.com/pPrRm9xOOn
— Congress (@INCIndia) September 27, 2019 " class="align-text-top noRightClick twitterSection" data="
">Happy #WorldTourismDay ✈️ pic.twitter.com/pPrRm9xOOn
— Congress (@INCIndia) September 27, 2019Happy #WorldTourismDay ✈️ pic.twitter.com/pPrRm9xOOn
— Congress (@INCIndia) September 27, 2019
ಮೋದಿ ವಿದೇಶ ಪ್ರವಾಸಕ್ಕೆ ತೆರಳುವ ವೇಳೆ ವಿಮಾನ ಮೇಲಿನಿಂದ ಕೈಬೀಸುತ್ತಿರುವ 18 ವಿವಿಧ ಫೋಟೋಗಳನ್ನು ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಈ ಮೂಲಕ ವಿಶ್ವ ಪ್ರವಾಸಿ ದಿನವನ್ನು ವಿಶೇಷವಾಗಿ ಅಣಕಿಸಿದೆ.