ETV Bharat / bharat

130 ಕೋಟಿ ಭಾರತೀಯರಿಗೆ ಧನ್ಯವಾದ: ಉಳಿದ 8 ಕೋಟಿ ಮಂದಿ ಕತೆ ಏನು?: ಮೋದಿಗೆ ಶಶಿ ತರೂರ್ ಪ್ರಶ್ನೆ

ಸಿಎಎ, ಎನ್‌ಆರ್‌ಸಿ ನಂತರ 8 ಕೋಟಿ ಜನರನ್ನು ಕೈಬಿಟ್ಟಿರುವುದು ಅನೇಕರಿಗೆ ಆತಂಕವನ್ನುಂಟುಮಾಡಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೆಳಿದ್ದಾರೆ.

Omission of 8 cr people in Ayodhya speech worrying
ಮೋದಿಗೆ ಶಶಿ ತರೂರ್ ಪ್ರಶ್ನೆ
author img

By

Published : Aug 7, 2020, 1:30 PM IST

ನವದೆಹಲಿ: ರಾಮ ಮಂದಿರ ಭೂಮಿ ಪೂಜೆ ಸಂದರ್ಭದಲ್ಲಿ 130 ಕೋಟಿ ಭಾರತೀಯರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.ಆದರೆ, ಭಾರತದ ಜನಸಂಖ್ಯೆ 138 ಕೋಟಿಗಿಂತ ಹೆಚ್ಚಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನೋಂದಣಿಯ ನಂತರ 8 ಕೋಟಿ ಜನರನ್ನು ಕೈಬಿಟ್ಟಿರುವುದು ಅನೇಕರಿಗೆ ಆತಂಕ ತಂದಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೆಳಿದ್ದಾರೆ.

ಈ ಲೋಪ ಅಜಾಗರೂಕತೆಯಾಗಿದ್ದರೆ ಒಂದು ತಿದ್ದುಪಡಿ ಧೈರ್ಯ ತುಂಬುತ್ತದೆ ಎಂದು ತರೂರ್ ಹೇಳಿದ್ದಾರೆ.

  • PM Modi congratulated 130 crore Indians when he spoke at the RamMandir yesterday. But India's population is estimated at 1,38,00,04,385 in mid-2020, a/c to UN data. An omission of 8 crore people is worrying to many, after CAA/NRC. If inadvertent, a correction would be reassuring.

    — Shashi Tharoor (@ShashiTharoor) August 6, 2020 " class="align-text-top noRightClick twitterSection" data=" ">

ರಾಮ ಮಂದಿರ ಭೂಮಿ ಪೂಜೆ ವೇಳೆ ಮಾತನಾಡಿದಾಗ 130 ಕೋಟಿ ಭಾರತೀಯರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಆದರೆ, 2020ರ ಮಧ್ಯದಲ್ಲಿ ಭಾರತದ ಜನಸಂಖ್ಯೆ 138,00,04,385 ಎಂದು ಅಂದಾಜಿಸಲಾಗಿದೆ ಅಂತ ವಿಶ್ವಸಂಸ್ಥೆ ಅಂಕಿ- ಅಂಶಗಳು ತಿಳಿಸಿವೆ ಎಂದು ತರೂರ್ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

"ಸಿಎಎ, ಎನ್‌ಆರ್‌ಸಿ ನಂತರ 8 ಕೋಟಿ ಜನರನ್ನು ಕೈಬಿಟ್ಟಿರುವುದು ಅನೇಕರಿಗೆ ಆತಂಕವನ್ನುಂಟುಮಾಡಿದೆ. ಅಜಾಗರೂಕವಾಗಿದ್ದರೆ, ತಿದ್ದುಪಡಿ ಧೈರ್ಯ ತುಂಬುತ್ತದೆ" ಎಂದು ಅವರು ಹೇಳಿದರು.

ಅಯೋಧ್ಯೆಯ ರಾಮ ದೇವಾಲಯದ ಅಡಿಪಾಯ ಹಾಕಿದ ಸಂದರ್ಭದಲ್ಲಿ ಭಾಷಣ ಮಾಡಿದ ಮೋದಿ, ರಾಮ ದೇವಾಲಯದ ನಿರ್ಮಾಣಕ್ಕಾಗಿ ಹಲವಾರು ತಲೆಮಾರುಗಳು, ಹಲವಾರು ಶತಮಾನಗಳಿಂದ ನಿಸ್ವಾರ್ಥ ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದರು. ನಾನು, ದೇಶದ 130 ಕೋಟಿ ಜನರ ಪರವಾಗಿ, ಅವರ ತ್ಯಾಗಕ್ಕಾಗಿ ನಮಸ್ಕರಿಸುತ್ತೇನೆ, ಅವರ ತ್ಯಾಗ ರಾಮ ಮಂದಿರದ ಅಡಿಪಾಯಕ್ಕೆ ಕಾರಣವಾಗಿದೆ ಎಂದು ಹೇಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.