ETV Bharat / bharat

ಕಮಲ ಮುಡಿದ ಒಲಿಂಪಿಕ್​ ಪದಕ ವಿಜೇತ ಯೋಗೇಶ್ವರ್​, ಹಾಕಿ ಮಾಜಿ ಪ್ಲೇಯರ್​​ ಸಂದೀಪ್​! - ಹರಿಯಾಣ ವಿಧಾನಸಭೆ ಚುನಾವಣೆ

ಮುಂಬರುವ ಹರಿಯಾಣ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಇಬ್ಬರು ಕ್ರೀಡಾಪಟುಗಳು ಭಾರತೀಯ ಜನತಾ ಪಾರ್ಟಿ ಸೇರ್ಪಡೆಗೊಳ್ಳುವ ಮೂಲಕ ರಾಜಕೀಯ ಇನ್ನಿಂಗ್ಸ್​ ಆರಂಭಿಸಿದ್ದಾರೆ.

ಕಮಲ ಮುಡಿದ ಕ್ರೀಡಾಪಟುಗಳು
author img

By

Published : Sep 26, 2019, 5:14 PM IST

Updated : Sep 26, 2019, 5:38 PM IST

ನವದೆಹಲಿ: 2012ರ ಲಂಡನ್​ ಒಲಿಂಪಿಕ್​​ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಕುಸ್ತಿ ಪಟು ಯೋಗೇಶ್ವರ ದತ್​ ಇದೀಗ ಮತ್ತೊಂದು ಹೊಸ ಇನ್ನಿಂಗ್ಸ್​ ಆರಂಭಿಸಿದ್ದು, ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಳ್ಳುವ ಮೂಲಕ ರಾಜಕೀಯ ಜೀವನ ಆರಂಭಿಸಿದ್ದಾರೆ.

ಕಮಲ ಮುಡಿದ ಕ್ರೀಡಾಪಟುಗಳು

ಇವರ ಜತೆ ಮತ್ತೊಬ್ಬ ಹಾಕಿ ಮಾಜಿ ಕ್ರೀಡಾಪಟು ಸಂದೀಪ್​ ಸಿಂಗ್ ಸಹ ಕಮಲ ಮುಡಿದಿದ್ದಾರೆ. ಮುಂಬರುವ ಹರಿಯಾಣ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಇಬ್ಬರು ಕ್ರೀಡಾಪಟುಗಳು ಬಿಜೆಪಿ ಸೇರಿದ್ದಾರೆ. ಹರಿಯಾಣದ ಬಿಜೆಪಿ ಮುಖ್ಯಸ್ಥ ಸುಭಾಷ್ ಬರ್ಲಾ ಉಪಸ್ಥಿತಿಯಲ್ಲಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಟೀಂ ಇಂಡಿಯಾದ ಹಾಕಿಯ ಮಾಜಿ ಕ್ಯಾಪ್ಟನ್​ ಆಗಿದ್ದ ಸಂದೀಪ್​ ಸಿಂಗ್​​, ಹಾಗೂ ಕುಸ್ತಿಪಟು ಯೋಗೇಶ್ವರ್​ ದತ್​ ಬಿಜೆಪಿ ಸೇರಿಕೊಂಡಿರುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ.

2019ರ ಲೋಕಸಭಾ ಚುನಾವಣೆ ಆರಂಭಕ್ಕೂ ಮುನ್ನವೇ ಈ ಇಬ್ಬರು ಕ್ರೀಡಾಪಟುಗಳೊಂದಿಗೆ ಹರಿಯಾಣ ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳುವಂತೆ ಮಾತುಕತೆ ನಡೆಸಿತ್ತು. ಆದರೆ ಅವರು ಇದೀಗ ಕಮಲ ಮುಡಿದಿದ್ದಾರೆ.

ಇದೇ ವೇಳೆ ಮಾತನಾಡಿದ ಟೀಂ ಇಂಡಿಯಾ ಮಾಜಿ ಹಾಕಿ ಕ್ಯಾಪ್ಟನ್​ ಸಂದೀಪ್​ ಸಿಂಗ್​,ಪ್ರಧಾನಿ ನರೇಂದ್ರ ಮೋದಿ ಅವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳಿಂದ ಪ್ರೇರಿತನಾಗಿ ನಾನು ರಾಜಕೀಯ ಸೇರಿಕೊಂಡಿದ್ದು, ದೇಶದ ಪ್ರಧಾನಿ ಹಾಗೂ ಹರಿಯಾಣ ಸಿಎಂ ಉತ್ತಮ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಒಂದು ಪಕ್ಷ ನನಗೆ ಟಿಕೆಟ್​ ನೀಡಿದ್ರೆ ಖಂಡಿತವಾಗಿ ಸ್ಪರ್ಧೆ ಮಾಡುವೆ ಎಂದು ಹೇಳಿದ್ದಾರೆ.

Intro:Body:

ನವದೆಹಲಿ: 2012ರ  ಲಂಡನ್​ ಒಲಿಂಪಿಕ್​​ನಲ್ಲಿ ಕಂಚಿನ ಪದಕ ಗೆದ್ದ ಭಾರತದ ಕುಸ್ತಿ ಪಟು ಯೋಗೇಶ್ವರ ದತ್​ ಇದೀಗ ರಾಜಕೀಯ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಹರಿಯಾಣದಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿದ್ದಾರೆ. 

ಇವರ ಜತೆ ಮತ್ತೊಬ್ಬ  ಹಾಕಿ ಕ್ರೀಡಾಪಟು ಸಂದೀಪ್​ ಸಿಂಗ್ ಸಹ ಕಮಲ ಮುಡಿದಿದ್ದಾರೆ. ಮುಂಬರುವ ಹರಿಯಾಣ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಇಬ್ಬರು ಕ್ರೀಡಾಪಟುಗಳು ಬಿಜೆಪಿ ಸೇರಿದ್ದಾರೆ. ಹರಿಯಾಣದ ಬಿಜೆಪಿ ಮುಖ್ಯಸ್ಥ ಸುಭಾಷ್ ಬರ್ಲಾ ಉಪಸ್ಥಿತಿಯಲ್ಲಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಟೀಂ ಇಂಡಿಯಾದ ಹಾಕಿಯ ಮಾಜಿ ಕ್ಯಾಪ್ಟನ್​ ಆಗಿದ್ದ ಸಂದೀಪ್​ ಸಿಂಗ್​​, ಹಾಗೂ ಕುಸ್ತಿಪಟು ಯೋಗೇಶ್ವರ್​ ದತ್​ ಬಿಜೆಪಿ ಸೇರಿಕೊಂಡಿರುವುದರಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ. 

2019ರ ಲೋಕಸಭಾ ಚುನಾವಣೆ ಆರಂಭಕ್ಕೂ ಮುನ್ನವೇ ಈ ಇಬ್ಬರು ಕ್ರೀಡಾಪಟುಗಳೊಂದಿಗೆ ಹರಿಯಾಣ ಬಿಜೆಪಿ ಪಕ್ಷಕ್ಕೆ ಸೇರಿಕೊಳ್ಳುವಂತೆ ಮಾತುಕತೆ ನಡೆಸಿತ್ತು. ಆದರೆ ಅವರು ಇದೀಗ ಕಮಲ ಮುಡಿದಿದ್ದಾರೆ. 

Conclusion:
Last Updated : Sep 26, 2019, 5:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.