ETV Bharat / bharat

ಕಾಶ್ಮೀರ: ವಿಭಜನೆಗೊಂಡಿರುವ ಜಾಗತಿಕ ಇಸ್ಲಾಂ ಧರ್ಮದ ನಾಯಕತ್ವಕ್ಕಾಗಿ ನಡೆಯುತ್ತಿರುವ ಕದನವೇ? - Saudi Arabia - Organization of Islamic Countries OIC

ಕಾಶ್ಮೀರದ ಪರಿಸ್ಥಿತಿ ಕುರಿತು ಚರ್ಚಿಸಲು ಒಐಸಿಯ ಸಭೆ ಕರೆಯುವ ಪಾಕಿಸ್ತಾನದ ಸಲಹೆಯನ್ನು ಸೌದಿ ಅರೇಬಿಯಾ - ಇಸ್ಲಾಮಿಕ್ ದೇಶಗಳ ಸಂಘಟನೆಯ (ಒಐಸಿ) ಪ್ರಸ್ತುತ ಪ್ರಧಾನ ಕಾರ್ಯದರ್ಶಿಯವರು ಒಪ್ಪಿಕೊಂಡಿದ್ದಾರೆ. ಇದು ಒಐಸಿಯ ವಿಶ್ವಾಸಾರ್ಹತೆ ಮತ್ತು ಇಸ್ಲಾಮಿಕ್ ಜಗತ್ತಿನಲ್ಲಿ ತನ್ನದೇ ಆದ ಸ್ಥಾನವನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ಪಾಕ್‌ ಪರ ಮಧ್ಯಸ್ಥಿಕೆಗೆ ಸೌದಿ ಒಪ್ಪಿಕೊಂಡಿತು.

OIC summit to discuss Kashmir issue
ಕಾಶ್ಮೀರ ವಿಚಾರ ಚರ್ಚಿಸಲು ಒಐಸಿ ಶೃಂಗಸಭೆ
author img

By

Published : Jan 1, 2020, 1:57 PM IST

ಕಾಶ್ಮೀರದ ಪರಿಸ್ಥಿತಿ ಕುರಿತು ಚರ್ಚಿಸಲು ಒಐಸಿಯ ಸಭೆ ಕರೆಯುವ ಪಾಕಿಸ್ತಾನದ ಸಲಹೆಯನ್ನು ಸೌದಿ ಅರೇಬಿಯಾ - ಇಸ್ಲಾಮಿಕ್ ದೇಶಗಳ ಸಂಘಟನೆಯ (ಒಐಸಿ) ಪ್ರಸ್ತುತ ಪ್ರಧಾನ ಕಾರ್ಯದರ್ಶಿಯವರು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. 2020ರ ಏಪ್ರಿಲ್‌ನಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯುವ ಒಐಸಿ ಸಭೆಯ ಸಾಧ್ಯತೆಯನ್ನು ಭಾರತೀಯ ಮಾಧ್ಯಮಗಳ ಒಂದು ವಿಭಾಗದಲ್ಲಿ ಉಲ್ಲೇಖಿಸಲಾಗಿದ್ದರೂ ಸ್ಥಳ, ದಿನಾಂಕಗಳು ಅಥವಾ ಭಾಗವಹಿಸುವಿಕೆಯ ಮಟ್ಟದಲ್ಲಿ ಇನ್ನೂ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. 2019ರ ಡಿಸೆಂಬರ್ 26 ರಂದು ಇಸ್ಲಾಮಾಬಾದ್‌ನಲ್ಲಿ ನಡೆದ ಸಭೆಯಲ್ಲಿ ಸೌದಿ ಅರೇಬಿಯಾದ ವಿದೇಶಾಂಗ ಸಚಿವರು ತಮ್ಮ ಪಾಕಿಸ್ತಾನದ ರಾಯಬಾರಿಗೆ ಸೌದಿ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಪಾಕಿಸ್ತಾನ ವಿದೇಶಾಂಗ ಕಚೇರಿ ಹೇಳಿಕೆಯ ಪ್ರಕಾರ, ಇಬ್ಬರು ವಿದೇಶಾಂಗ ಸಚಿವರು "ಕಾಶ್ಮೀರದ ಸ್ಥಿತಿಗತಿಗಳ ಪ್ರಗತಿಯಲ್ಲಿ ಒಐಸಿ ಪಾತ್ರ" ಕುರಿತು ಚರ್ಚಿಸಿದ್ದಾರೆ. "ಭಾರತ ಸರ್ಕಾರದ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರ ರದ್ದುಗೊಳಿಸುವ ಏಕಪಕ್ಷೀಯ ಮತ್ತು ಕಾನೂನುಬಾಹಿರ ನಿರ್ಧಾರ(370 ನೇ ವಿಧಿಯನ್ನು ರದ್ದುಪಡಿಸುವ ವಿಧೇಯಕ) ತೆಗೆದುಕೊಂಡ ನಂತರ ಅಲ್ಲಿನ ಪರಿಸ್ಥಿತಿಯ ಬಗ್ಗೆ ಉಭಯ ನಾಯಕರು ವಿವರವಾಗಿ ಚರ್ಚಿಸಿದ್ದಾರೆ” ಎಂದು ಪಾಕ್‌ ವಿದೇಶಾಂಗ ಸಚಿವರು ಸಭೆಯ ಬಳಿಕ ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ಕ್ರಮವನ್ನು ಉಲ್ಲೇಖಿಸಿರುವ ಪಾಕ್‌ ಸಚಿವರು, “ ಭಾರತದಲ್ಲಿ ಮುಸ್ಲಿಮರನ್ನು ವ್ಯವಸ್ಥಿತವಾಗಿ ಗುರಿಯಾಗಿಸಲಾಗುತ್ತಿದೆ ”ಎಂದು ಆರೋಪಿಸಿದ್ದಾರೆ.

ಕಾಶ್ಮೀರದೊಂದಿಗೆ ಪಾಕಿಸ್ತಾನದ ಅಸಮಾಧಾನವೀಗ ಬಹಿರಂಗ ರಹಸ್ಯವಾಗಿದೆ. ಆದಾಗ್ಯೂ, ಸೌದಿ ಅರೇಬಿಯಾದ ನಿರ್ಧಾರವು ಒಂದು ನಿರ್ದಿಷ್ಟ ಹಿನ್ನೆಲೆಯ ವಿರುದ್ಧದ ನಿಲುವಿಗೆ ಸೇರುತ್ತದೆ. ಇದು ಇತ್ತೀಚಿನ ಬೆಳವಣಿಗೆಗಳಿಂದ ಪ್ರತಿಫಲಿಸುತ್ತದೆ ಮತ್ತುಆ ಕುರಿತು ವಿವರವಾಗಿ ಕೆಳಗೆ ಚರ್ಚಿಸಲಾಗಿದೆ. ಭಾರತವು ತನ್ನ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಲು ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಲು ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲು ಆಗಸ್ಟ್ 2019ರಲ್ಲಿ ತೆಗೆದುಕೊಂಡ ನಿರ್ಧಾರವು ಪಾಕಿಸ್ತಾನಕ್ಕೆ ಭಾರತದ ವಿರುದ್ಧ ತನ್ನ ನಿಲುವು ಬಿಂಬಿಸಲು ದೇವರು ಸೃಷ್ಟಿಸಿಕೊಟ್ಟ ಅವಕಾಶದಂತಾಯಿತು. ಕಾಶ್ಮೀರ ಸಮಸ್ಯೆಯನ್ನು ಅಂತಾರಾಷ್ಟ್ರೀಯ ಸಮಸ್ಯೆಯಾಗಿ ಬಿಂಬಿಸಲು ಲಭ್ಯವಿರುವ ಯಾವುದೇ ಅವಕಾಶವನ್ನು ಪಾಕಿಸ್ತಾನವು ಕಳೆದುಕೊಳ್ಳುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಜೊತೆಗೆ, ಕಾಲಕಾಲಕ್ಕೆ "ಕಾಶ್ಮೀರಿಗಳಿಗೆ ಅವರ ಸ್ವಾತಂತ್ರ್ಯ ಹೋರಾಟದಲ್ಲಿ ರಾಜಕೀಯ, ರಾಜತಾಂತ್ರಿಕ ಮತ್ತು ನೈತಿಕ ಬೆಂಬಲವನ್ನು" ಪುನರುಚ್ಚರಿಸುತ್ತಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ವಿಷಯವಾಗಿ ಭಾರತ ವಿರೋಧಿ ಅಭಿಪ್ರಾಯವನ್ನು ಮೂಡಿಸುವ ಹೆಚ್ಚಿನ ಭರವಸೆಯೊಂದಿಗೆ ನಂತರದ ದಿನಗಳಲ್ಲಿ, ಅಂದರೆ ಸೆಪ್ಟೆಂಬರ್ ತಿಂಗಳಳಿನಲ್ಲಿ ಯುಎನ್‌ಜಿಎಗೆ ಭೇಟಿಯಿತ್ತರು. ಕಾಶ್ಮೀರದ ವಿಷಯದಲ್ಲಿ ಭಾರತದ ಮೇಲೆ ಅಂತಾರಾಷ್ಟ್ರೀಯ ಒತ್ತಡವನ್ನು ತರುವ ಪ್ರಯತ್ನಗಳನ್ನು ಮಾಡಿದರು. ಆದರೆ ಅಂತಾರಾಷ್ಟ್ರೀಯ ಸಮುದಾಯದಿಂದ ಈ ವಿಷಯದಲ್ಲಿ ಸೂಕ್ತ ಪ್ರತಿಕ್ರಿಯೆ ದೊರೆಯಲಿಲ್ಲ. ತಮ್ಮ ಪ್ರವೇಶದಿಂದಲೇ (ನ್ಯೂಯಾರ್ಕ್​ನ ವರದಿಗಾರರಿಗೆ) ಮುಖಭಂಗ ಅನುಭವಿಸಿದ ಅವರು, ಈ ವಿಷಯದಲ್ಲಿ ನಿರಾಶೆಗೊಂಡು ನಿರ್ಗಮಿಸಿದರು.

ಕಾಶ್ಮೀರದ ಬಗೆಗಿನ ಪಾಕಿಸ್ತಾನದ ದೃಷ್ಟಿಕೋನವನ್ನು ಅನುಮೋದಿಸಿದ ಎರಡು ಗಮನಾರ್ಹ ಇಸ್ಲಾಮಿಕ್ ರಾಷ್ಟ್ರಗಳೆಂದರೆ ಮಲೇಷ್ಯಾ ಮತ್ತು ಟರ್ಕಿ ಮಾತ್ರ. ಭಾರತದಲ್ಲಿ "ಒಂದು ಶತಕೋಟಿ ಮಾರುಕಟ್ಟೆ" ಗೆ ಪ್ರತಿಕ್ರಿಯೆಯ ಕೊರತೆಯಿದೆ ಎಂದು ಪ್ರಧಾನಿ ಖಾನ್ ಆರೋಪಿಸಿದರು, ಈ ಫಲಿತಾಂಶವು ಸೌದಿ ಅರೇಬಿಯಾ ಮತ್ತು ಯುಎಇಯಂತಹ ದೈತ್ಯರು ಸೇರಿದಂತೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತದ ಮೈತ್ರಿ ಮತ್ತು ಭಾರತದ ಚತುರ ರಾಜತಾಂತ್ರಿಕತೆಯ ಪರಿಣಾಮವಾಗಿದೆ ಎಂಬ ಅಂಶವನ್ನು ಖಾನ್‌ ತಮ್ಮ ಅನುಕೂಲಕ್ಕೆ ತಕ್ಕಂತೆ ನಿರ್ಲಕ್ಷಿಸಿದರು.

ಕಾಶ್ಮೀರದ ವಿಷಯದಲ್ಲಿ ಮುಸ್ಲಿಂ ರಾಷ್ಟ್ರಗಳ ಎದುರಿನಲ್ಲಿಯೂ ಭಾರತವನ್ನು ದುರ್ಬಲಗೊಳಿಸುವ ವಿಫಲ ಯತ್ನದ ಬಳಿಕ ನ್ಯೂಯಾರ್ಕ್​ನಲ್ಲಿ ಪಾಕಿಸ್ತಾನ, ಟರ್ಕಿ ಮತ್ತು ಮಲೇಷ್ಯಾ ನಾಯಕರು ತ್ರಿಪಕ್ಷೀಯ ಸಭೆ ನಡೆಸಿದರು. ಇಸ್ಲಾಮಿಕ್‌ ಒಕ್ಕೂಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿಸಲು ನಿರ್ಧರಿಸಲಾಯಿತು. ಜಾಗತಿಕವಾಗಿ ಇಸ್ಲಾಂ ಧರ್ಮ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಟಿವಿ ಮತ್ತು ಇಸ್ಲಾಮಿಕ್ ಶೃಂಗಸಭೆಯನ್ನು ನಡೆಸುವ ತೀರ್ಮಾನಕ್ಕೆ ಬರಲಾಯಿತು. ಇಸ್ಲಾಮಿಕ್ ಶೃಂಗಸಭೆಯನ್ನು ಆಯೋಜಿಸಲು ಮಲೇಷ್ಯಾ ಒಪ್ಪಿಕೊಂಡಿತು. ಹಲವಾರು ಚಿಕ್ಕಪುಟ್ಟ ರಾಷ್ಟ್ರಗಳಲ್ಲದೆ, ಕೆಲವು ಪ್ರಮುಖ ಅರಬ್ಯೇತರ ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ತಾನ, ಟರ್ಕಿ, ಮಲೇಷ್ಯಾ, ಇರಾನ್ ಮತ್ತು ಕತಾರ್ ಸಹ ಈ ಶೃಂಗಸಭೆಯಲ್ಲಿ ಭಾಗವಹಿಸಲು ಒಪ್ಪಿಕೊಂಡಿವೆ. ಟರ್ಕಿ, ಇರಾನ್ ಮತ್ತು ಮಲೇಷ್ಯಾ ಸೌದಿ ಅರೇಬಿಯಾದ ಪ್ರತಿಸ್ಪರ್ಧಿಗಳಾಗಿದ್ದರೆ, ಯುಎಇ ಮತ್ತು ಇತರರು 2017 ರ ಜೂನ್‌ನಲ್ಲಿ ಕತಾರ್‌ನೊಂದಿಗಿನ ಎಲ್ಲಾ ಸಂಪರ್ಕಗಳನ್ನು ಕಡಿದುಕೊಂಡಿದ್ದಾರೆ ಎಂದು ಉಲ್ಲೇಖಿಸುವುದು ಇಲ್ಲಿ ಪ್ರಸ್ತುತವೆನಿಸುತ್ತದೆ. ಸೌದಿ ಅರೇಬಿಯಾದಲ್ಲಿನ ಕೆಎಲ್ ಇಸ್ಲಾಮಿಕ್ ಶೃಂಗಸಭೆಯನ್ನು ಜಾಗತಿಕ ಇಸ್ಲಾಮಿಕ್ ಸಮುದಾಯದ ನಾಯಕತ್ವಕ್ಕೆ ಸೌದಿ ಸವಾಲಿನ ಪ್ರಯತ್ನವಾಗಿ ನೋಡಲಾಯಿತು. ಜಾಗತಿಕ ಇಸ್ಲಾಮಿಕ್ ಸಮುದಾಯದ ನಾಯಕತ್ವ ಮತ್ತು ಒಐಸಿಗೆ ಸಮಾನಾಂತರವಾಗಿ ಸಂಘಟನೆಯನ್ನು ಬೆಳೆಸುವುದು ಮತ್ತು ಸಂಸ್ಥೆಯನ್ನು ದುರ್ಬಲಗೊಳಿಸುವುದಲ್ಲದೆ ಇಸ್ಲಾಂ ಧರ್ಮವನ್ನೂ ಸಹ ಇದು ದುರ್ಬಲಗೊಳಿಸುತ್ತದೆ ಎಂದು ಭಾವಿಸಲಾಯಿತು.

ಅಂತಿಮವಾಗಿ 2019ರ ಡಿಸೆಂಬರ್ ಮಧ್ಯದಲ್ಲಿ ಕೌಲಾಲಂಪುರದಲ್ಲಿ ನಡೆದ ಇಸ್ಲಾಮಿಕ್ ಶೃಂಗಸಭೆಯನ್ನು ತಡೆಯಲು ಸೌದಿಗೆ ಸಾಧ್ಯವಾಗಲಿಲ್ಲ. ಆದರೆ ಸಭೆಯ ಹನ್ನೊಂದನೇ ಗಂಟೆ ಹೊತ್ತಿಗೆ ಶೃಂಗಸಭೆಯಿಂದ ಹೊರಬರಲು ಪಾಕಿಸ್ತಾನದ ಮೇಲೆ ಒತ್ತಡ ಹೇರಲು ಸಾಧ್ಯವಾಯಿತು. ಸೌದಿ ಅರೇಬಿಯಾದಿಂದ ಹಣಕಾಸಿನ ನೆರವು ಮತ್ತು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ಏಳು ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿ ಕಾರ್ಮಿಕರಿಂದ ಹಣ ರವಾನೆಯಾಗುವುದರಿಂದ ಸೌದಿ ಒತ್ತಡಕ್ಕೆ ಪಾಕಿಸ್ತಾನ ಮಣಿಯಬೇಕಾಯಿತು. ಭಾಗಶಃ ಪಾಕಿಸ್ತಾನಕ್ಕೆ ಪ್ರತಿಫಲ ನೀಡಲು ಮತ್ತು ಭಾಗಶಃ ಒಐಸಿಯ ವಿಶ್ವಾಸಾರ್ಹತೆ ಮತ್ತು ಇಸ್ಲಾಮಿಕ್ ಜಗತ್ತಿನಲ್ಲಿ ತನ್ನದೇ ಆದ ಸ್ಥಾನವನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ಪಾಕ್‌ ಪರ ಮಧ್ಯಸ್ಥಿಕೆಗೆ ಸೌದಿ ಒಪ್ಪಿಕೊಂಡಿತು. ಒಐಸಿಯಲ್ಲಿ ಕಾಶ್ಮೀರದ ಪರಿಸ್ಥಿತಿಯನ್ನು ಚರ್ಚಿಸುವ ಪಾಕಿಸ್ತಾನದ ಸಲಹೆಗೆ ಸೌದಿ ಅರೆಬಿಯಾ ಮನ್ನಣೆ ನೀಡಿತು. ಈ ಪ್ರಕ್ರಿಯೆಯಲ್ಲಿ ಜಾಗತಿಕ ಇಸ್ಲಾಂ ಧರ್ಮದ ನಾಯಕತ್ವಕ್ಕಾಗಿನ ಯುದ್ಧದಲ್ಲಿ ಕಾಶ್ಮೀರ ಸಮಸ್ಯೆ ಸಿಲುಕಿಕೊಂಡಿದೆ ಹೊರತು, ಬೇರೆ ಯಾವುದೇ ಉತ್ತಮ ಉದ್ದೇಶ ಇದರ ಹಿಂದೆ ಇಲ್ಲದಂತಾಗಿದೆ.

ಭಾರತ ಮತ್ತು ಸೌದಿ ಅರೇಬಿಯಾ ಎಂಬ ಎರಡು ಕಾರ್ಯತಂತ್ರದ ಪಾಲುದಾರರ ನಡುವಿನ ಸಂಬಂಧಗಳ ಮೇಲೆ ಸೌದಿ ಅರೇಬಿಯಾದ ನಿರ್ಧಾರ ಪರಿಣಾಮ ಬೀರುತ್ತದೆಯೇ? ಪಾಕಿಸ್ತಾನವನ್ನು ಬೆಂಬಲಿಸುವ ಸೌದಿಯ ನಿರ್ಧಾರಕ್ಕೆ ಭಾರತವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ. ಕಾಶ್ಮೀರ ವಿಷಯವನ್ನು ಒಐಸಿಯಲ್ಲಿ ಆಗಾಗ್ಗೆ ಚರ್ಚಿಸಲಾಗಿದೆ ಮತ್ತು ಈ ಹಿಂದೆ ಕಾಶ್ಮೀರದ ಬಗೆಗಿನ ಅದರ ಚರ್ಚೆಗಳು / ನಿರ್ಣಯಗಳು ಅಸಂಭವವೆಂದು ಸಾಬೀತಾಗಿದೆ. ಕಾಶ್ಮೀರ ನೀತಿಯ ಮೇಲೆ ಅಥವಾ ಹೆಚ್ಚು ಮುಖ್ಯವಾಗಿ ಕಾಶ್ಮೀರದ ಬಗ್ಗೆ ಜಾಗತಿಕ ಅಭಿಪ್ರಾಯವು ಭಾರತದ ಮೇಲಿನ ಸಂಬಂಧಕ್ಕೆ ಯಾವುದೇ ಪರಿಣಾಮ ಬೀರಲಿಲ್ಲ. ಹೀಗಾಗಿ ನನ್ನ ಅಭಿಪ್ರಾಯದಲ್ಲಿ, ಭಾರತವು ತನ್ನ ಅಸಮಾಧಾನವನ್ನು ತಿಳಿಸುವಲ್ಲಿ ಸಮರ್ಥನೀಯವಾಗಿದ್ದರೂ, ನೈಜ ರಾಜಕೀಯವು ಭಾರತವು ಅದರ ಬಗ್ಗೆ ಚರ್ಚಿಸದಂತೆ ನಿರುತ್ಸಾಹಗೊಳಿಸಬೇಕು. ಏಕೆಂದರೆ ಸೌದಿ ಅರೇಬಿಯಾದೊಂದಿಗಿನ ಅದರ ಕಾರ್ಯತಂತ್ರದ ಸಹಭಾಗಿತ್ವವು ಭಾರತದ ಸೂಕ್ಷ್ಮತೆಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ. ಬದಲಾಗಿ ಜಾಗತಿಕ ಮುಸ್ಲಿಂ ವೇದಿಕೆಯ ಒಳ ರಾಜಕೀಯದ ನೋಟವನ್ನು ಹೊಂದಿದೆ. ಹೀಗಾಗಿ ಸೌದಿ ಜೊತೆಗಿನ ಸಂಬಂಧವನ್ನು ಅಪಾಯಕ್ಕೆ ತಳ್ಳುವುದು ಸೂಕ್ತವಲ್ಲ.

  Please Publish this copy ASAP  
ETV Bharat Logo

Copyright © 2025 Ushodaya Enterprises Pvt. Ltd., All Rights Reserved.