ಭುವನೇಶ್ವರ(ಒಡಿಶಾ): ಚಂಡಮಾರುತದಿಂದ ಹಾನಿಗೊಳಗಾದ ಒಡಿಶಾಕ್ಕೆ ಘೋಷಣೆ ಮಾಡಿದ್ದ 500 ಕೋಟಿ ರೂಪಾಯಿ ಮಧ್ಯಂತರ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಒಡಿಶಾದ ಚಂಡಮಾರುತ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿ ಶುಕ್ರವಾರ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ ರಾಜ್ಯಕ್ಕೆ 500 ಕೋಟಿ ರೂಪಾಯಿ ಮಧಯಂತರ ಪರಿಹಾರ ಘೋಷಿಸಿದ್ದರು. ಪರಿಹಾರ ನೆರವು ಘೋಷಿಸಿದ 24 ಗಂಟೆಗಳಲ್ಲೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ.
-
MHA released Rs 500Crore to Odisha Govt in less than 24hours of Hon’ble PM @PMOIndia @narendramodi announcement in Bhubaneswar 4 #CycloneAmaphan . We thank @PMOIndia , @narendramodi &MHA for such speed in releasing the Fund. @CMO_Odisha @Naveen_Odisha @SecyChief @manojmishratwit
— Pradeep Jena IAS (@PradeepJenaIAS) May 23, 2020 " class="align-text-top noRightClick twitterSection" data="
">MHA released Rs 500Crore to Odisha Govt in less than 24hours of Hon’ble PM @PMOIndia @narendramodi announcement in Bhubaneswar 4 #CycloneAmaphan . We thank @PMOIndia , @narendramodi &MHA for such speed in releasing the Fund. @CMO_Odisha @Naveen_Odisha @SecyChief @manojmishratwit
— Pradeep Jena IAS (@PradeepJenaIAS) May 23, 2020MHA released Rs 500Crore to Odisha Govt in less than 24hours of Hon’ble PM @PMOIndia @narendramodi announcement in Bhubaneswar 4 #CycloneAmaphan . We thank @PMOIndia , @narendramodi &MHA for such speed in releasing the Fund. @CMO_Odisha @Naveen_Odisha @SecyChief @manojmishratwit
— Pradeep Jena IAS (@PradeepJenaIAS) May 23, 2020
ಕೇಂದ್ರ ಹೃಹ ಇಲಾಖೆ ಒಡಿಶಾ ಸರ್ಕಾರಕ್ಕೆ 500 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಭುವನೇಶ್ವರದಲ್ಲಿ ಪ್ರಧಾನಿ ಮೋದಿ ಪರಿಹಾರ ಘೋಷಣೆ ಮಾಡಿದ 24 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಹಣ ಬಿಡುಗಡೆ ಮಾಡಲಾಗಿದೆ. ತುರ್ತಾಗಿ ಪರಿಹಾರ ನೀಡಿದ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಇಲಾಖೆಗೆ ಧನ್ಯವಾದಗಳು ಎಂದು ವಿಶೇಷ ಪರಿಹಾರ ಆಯುಕ್ತ ಪಿ.ಕೆ.ಜೆನಾ ಟ್ವೀಟ್ ಮಾಡಿದ್ದಾರೆ.
ರಾಜ್ಯದ ಕರಾವಳಿ ಮತ್ತು ಸೈಕ್ಲೋನ್ ಪೀಡಿತ 10 ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರವು ಪರಿಹಾರ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ ಎಂದು ಜೆನಾ ಹೇಳಿದ್ದಾರೆ. 10 ಜಿಲ್ಲೆಗಳಲ್ಲಿ ಸುಮಾರು 44 ಲಕ್ಷಕ್ಕೂ ಹೆಚ್ಚು ಜನರು ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿ ತಿಳಿಸಿದೆ.