ನವದೆಹಲಿ: ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಕಾಯ್ದೆ (ಎನ್‌ಆರ್‌ಸಿ) ರಚಿಸುವ ಪ್ರಕ್ರಿಯೆಯು ಸಂಪೂರ್ಣವಾಗಿ ಭಾರತ ಸರ್ಕಾರದ ಆಂತರಿಕ ವ್ಯವಹಾರ ಎಂದು ಬಾಂಗ್ಲಾದೇಶದ ಬಾರ್ಡರ್ ಗಾರ್ಡ್ ಮುಖ್ಯಸ್ಥ ಶಫೀನುಲ್ ಇಸ್ಲಾಮ್ ಹೇಳಿದ್ದಾರೆ.
-
DG of Border Guards Bangladesh (BGB) Md Shafeenul Islam on National Register of Citizens (NRC): This issue is completely an internal matter of Indian government. Like any other border guarding force, BGB works to prevent illegal crossing and will continue to do so. pic.twitter.com/EQo1iHM2jd
— ANI (@ANI) December 29, 2019 " class="align-text-top noRightClick twitterSection" data="
">DG of Border Guards Bangladesh (BGB) Md Shafeenul Islam on National Register of Citizens (NRC): This issue is completely an internal matter of Indian government. Like any other border guarding force, BGB works to prevent illegal crossing and will continue to do so. pic.twitter.com/EQo1iHM2jd
— ANI (@ANI) December 29, 2019DG of Border Guards Bangladesh (BGB) Md Shafeenul Islam on National Register of Citizens (NRC): This issue is completely an internal matter of Indian government. Like any other border guarding force, BGB works to prevent illegal crossing and will continue to do so. pic.twitter.com/EQo1iHM2jd
— ANI (@ANI) December 29, 2019
ಬಾಂಗ್ಲಾದೇಶದ ಬಾರ್ಡರ್ ಗಾರ್ಡ್ ಮುಖ್ಯಸ್ಥರನ್ನ ಒಳಗೊಂಡ ತಂಡ ಭಾರತಕ್ಕೆ ಭೇಟಿ ನೀಡಿದ್ದು, ಗಡಿ ಭದ್ರತೆ ಬಗ್ಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಉಭಯ ದೇಶಗಳ ಗಡಿ ಕಾವಲು ಪಡೆಗಳ ನಡುವಿನ ಸಹಕಾರ ಉತ್ತಮವಾಗಿದೆ. ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸುವ ಜನರನ್ನ ತಡೆಯುತ್ತೇವೆ ಎಂದಿದ್ದಾರೆ.
ಎನ್‌ಆರ್‌ಸಿ ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದೆ. ಇತರೆ ಭದ್ರತಅ ಪಡೆಗಳಂತೆ ಉಭಯ ದೇಶಗಳ ಗಡಿ ಭದ್ರತಾ ಪಡೆಗಳ ಸಹಕಾರ ತುಂಬಾ ಮುಖ್ಯವಾದದ್ದು ಎಂದಿದ್ದಾರೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶದ ಬಾರ್ಡರ್ ಗಾರ್ಡ್ನಿಂದ ನಡೆದ ಬಿಎಸ್ಎಫ್ ಯೋಧನ ಹತ್ಯೆ ಬಗ್ಗೆ ಪ್ರಶ್ನಿಸಿದ್ದಕ್ಕೆ ಇದೊಂದು ಅನಿರೀಕ್ಷಿತ ಮತ್ತು ದುರಾದೃಷ್ಟಕರ ಘಟನೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.