ಚೆನ್ನೈ: ಆನ್‌ಲೈನ್ ಗೇಮಿಂಗ್ ಆ್ಯಪ್ಗಳ ಪರ ಜಾಹೀರಾತು ನೀಡುತ್ತಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ನಟಿ ತಮನ್ನಾ, ಪ್ರಕಾಶ್ ರಾಜ್ ಮತ್ತು ರಾಣಾ ದಗ್ಗುಬಾಟಿಯ ಅವರಿಗೆ ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ನೋಟಿಸ್ ನೀಡಿದೆ.
ಜನರ ಮೇಲೆ ಪ್ರಭಾವ ಬೀರಬಹುದು ಎಂದು ತಿಳಿದಿದ್ದರೂ ಜೂಜನ್ನು ಬೆಂಬಲಿಸುವ ಅಪ್ಲಿಕೇಶನ್‌ಗಳ ಪರ ಏಕೆ ಜಾಹೀರಾತು ನೀಡುತ್ತಿದ್ದಾರೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ತಮಿಳುನಾಡಿನಲ್ಲಿ ಆನ್‌ಲೈನ್ ಜೂಜಾಟದ ಆ್ಯಪ್ಗಳನ್ನು ನಿಷೇಧಿಸುವಂತೆ ಕೋರಿ ಮಧುರೈ ನಿವಾಸಿ ಮೊಹಮ್ಮದ್ ರಾಸ್ವಿ ಅವರು ಮಧುರೈ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಆನ್‌ಲೈನ್ ಆಟಗಳಿಗೆ ಅನುಮೋದನೆ ನೀಡುವ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಅನೇಕ ಪ್ರಸಿದ್ಧ ವ್ಯಕ್ತಿಗಳು ಸಾರ್ವಜನಿಕರ ಸ್ವಾಸ್ಥ್ಯಕ್ಕಿಂತ ಹೆಚ್ಚಾಗಿ ತಮ್ಮ ಪಾಕೆಟ್‌ಗಳನ್ನು ತುಂಬಿಸಿಕೊಳ್ಳುವತ್ತ ಗಮನ ಹರಿಸಿದ್ದಾರೆ ಎಂದು ಪ್ರತಿಕ್ರಿಯಿಸಿದರು. ಜನರು ತಮ್ಮನ್ನು ಹಿಂಬಾಲಿಸುತ್ತಾರೆ ಎಂದು ತಿಳಿದಿದ್ದರೂ, ಸೆಲೆಬ್ರಿಟಿಗಳು ಇಂತಹ ಆಟಗಳನ್ನು ಏಕೆ ಅನುಮೋದಿಸುತ್ತಿದ್ದಾರೆ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಕ್ರಿಕೆಟ್ ಗೇಮಿಂಗ್ ಅಪ್ಲಿಕೇಶನ್‌ನ ಡ್ರೀಮ್ ಇಲೆವೆಲ್ ಅನ್ನು ಅರ್ಜಿದಾರರು ಸೇರಿಸಿದ್ದಾರೆ ವಕೀಲರು ಹೇಳಿದ್ದಾರೆ.
ನ್ಯಾಯಾಧೀಶರು ಕ್ರಿಕೆಟ್ ಜೂಜಾಟಕ್ಕೆ ಸಮನಾಗಿಲ್ಲ, ರಾಜ್ಯಗಳ ಹೆಸರನ್ನು ಕ್ರಿಕೆಟ್ ತಂಡಗಳಿಗೆ ಏಕೆ ಬಳಸಲಾಗಿದೆ ಎಂದು ಪ್ರಶ್ನಿಸಿದರು. ರಾಜ್ಯದ ಹೆಸರುಗಳನ್ನು ಬಳಸದಿದ್ದರೆ ಜನರು ಕ್ರಿಕೆಟ್ ವೀಕ್ಷಿಸುವುದಿಲ್ಲ ಮತ್ತು ಇದು ಖಂಡಿತವಾಗಿಯೂ ಜನರನ್ನು ದಾರಿ ತಪ್ಪಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿ ವಿಚಾರಣೆಯನ್ನು ನವೆಂಬರ್ 19 ಕ್ಕೆ ಮುಂದೂಡಿದೆ.