ಗಾಝಿಯಾಬಾದ್ (ಉತ್ತರ ಪ್ರದೇಶ) : ಲಾಕ್ ಡೌನ್ನಿಂದಾಗಿ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ನಗರದ ಬಡ ಜನರು ತಿನ್ನಲು ಏನಾದರು ಸಿಗಬಹುದೆಂಬ ನಿರೀಕ್ಷೆಯಲ್ಲಿ ರಸ್ತೆಗಿಳಿದಿದ್ದಾರೆ.
ನಗರದ ಹಲವೆಡೆ ರಸ್ತೆ ಬದಿಗಳಲ್ಲಿ ಸಹಾಯದ ನಿರೀಕ್ಷೆಯಲ್ಲಿ ಜನರು ನಿಂತಿದ್ದ ದೃಶ್ಯಗಳು ಕಂಡು ಬಂತು. ಲಾಕ್ ಡೌ್ನ್ ಮೀರಿ ರಸ್ತೆಗೆ ಬಂದಿದ್ದೀರಿ ನಿಮಗೆ ಪೊಲೀಸರ ಭಯವಿಲ್ಲವೇ ಎಂದು ಪ್ರಶ್ನಿಸಿದಕ್ಕೆ, ನಮಗೆ ತಿನ್ನಲು ಏನೂ ಇಲ್ಲ, ಹೀಗಾಗಿ ಮನೆಯಲ್ಲಿ ಕೂರಲು ಸಾಧ್ಯವಿಲ್ಲ ಎಂದು ತಮ್ಮ ಸಂಕಷ್ಟವನ್ನು ತೋಡಿಕೊಳ್ಳುತ್ತಾರೆ.
ನನ್ನ ಹೆಂಡತಿ ಮತ್ತು ಪುಟ್ಟ ಮಕ್ಕಳು ಮನೆಯಲ್ಲಿದ್ದಾರೆ, ನಾವು ಸರಿಯಾಗಿ ಊಟ ಮಾಡದೆ ದಿನಗಳೇ ಕಳೆದಿವೆ. ಏನಾದರು ಸಹಾಯ ಸಿಗಬಹುದೆಂಬ ನೀರೀಕ್ಷೆಯಲ್ಲಿ ರಸ್ತೆಗೆ ಬಂದಿದ್ಧೇನೆ ಎಂದು ಬಡ ಕೂಲಿ ಕಾರ್ಮಿಕನೋರ್ವ ಕಣ್ಣೀರು ಹಾಕಿದ್ದಾನೆ.
ಇನ್ನು ರಾಜ್ಯ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿದರೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಜನರು ದೂರಿದ್ದಾರೆ.