ಸೋನಿಪತ್(ಹರಿಯಾಣ): ಬರೋಡಾ ಉಪಚುನಾವಣೆಯಲ್ಲಿ, 'ಲೊಸುಪಾ' ಸುಪ್ರೀಮೋ ರಾಜ್‌ಕುಮಾರ್ ಸೈನಿ ಸೇರಿದಂತೆ 12 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.
ನವೆಂಬರ್ 3 ರಂದು ಬರೋಡಾದಲ್ಲಿ ನಡೆದ ಉಪಚುನಾವಣೆಯಲ್ಲಿ, 469 ಜನರು ನೋಟಾ ಬಟನ್ ಒತ್ತಿದ್ದು, ಯಾವುದೇ ಅಭ್ಯರ್ಥಿಯನ್ನು ಉತ್ತಮ ಎಂದು ಪರಿಗಣಿಸಿಲ್ಲ. ಅಂದರೆ 10 ಕ್ಕೂ ಹೆಚ್ಚು ಅಭ್ಯರ್ಥಿಗಳು ಪಡೆದಿರುವ ಒಟ್ಟು ಮತಗಳ ಸಂಖ್ಯೆ ನೋಟಾಗಿಂತಲೂ ಕಡಿಮೆ ಇದೆ ಎಂದು ತಿಳಿದು ಬಂದಿದೆ.
ಬರೋಡಾ ಉಪಚುನಾವಣೆಯಲ್ಲಿ ಡೆಮಾಕ್ರಸಿ ಸೆಕ್ಯುರಿಟಿ ಪಾರ್ಟಿ ಮುಖ್ಯಸ್ಥ ಮತ್ತು ಅಭ್ಯರ್ಥಿ ರಾಜ್‌ಕುಮಾರ್ ಸೈನಿ 5611 ಮತಗಳನ್ನು ಪಡೆದಿದ್ದಾರೆ. ಐಎನ್‌ಎಲ್‌ಡಿ ಅಭ್ಯರ್ಥಿ ಜೋಗೇಂದ್ರ ಸಿಂಗ್ ಮಲಿಕ್ 5003 ಮತಗಳನ್ನು ಪಡೆದಿದ್ದು, ನಾಲ್ಕನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರ ಜೊತೆಗೆ ಸ್ಪರ್ಧಿಸಿದ್ದ ಇತರ 10 ಅಭ್ಯರ್ಥಿಗಳು ಠೇವಣಿ ಸಹ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.